ಜನಪದ ಸಂಗೀತ ಅರಿವು ಕಾರ್ಯಕ್ರಮ

27rajesh3
Published on

ಚಾಮರಾಜನಗರ : ತಾಲೂಕಿನ ದೊಡ್ಡಮೂಡಹಳ್ಳಿ ಗ್ರಾಮದಲ್ಲಿ ರಂಗಜಂಗಮ ಜನಪದ ವೇದಿಕೆ ವತಿಯಿಂದ ಸೋಮವಾರ ಜಾಗೃತಿ ಗೀತೆಗಳನ್ನು ಹಾಡಿ ಅರಿವು ಮೂಡಿಸಲಾಯಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸಹಯೋಗದೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗ್ರಾಮದ ಅಭಿವೃದ್ಧಿ ಮತ್ತು ಗ್ಯಾರಂಟಿ ಯೋಜನೆಗಳ ಕುರಿತು ಜಾಗೃತಿ ಮೂಡಿಸಲಾಯಿತು. ಪುಣಜನೂರು ಗ್ರಾಮ ಪಂಚಾಯಿತಿಯ ಗ್ರಂಥಾಲಯ ಮೇಲ್ವಿಚಾರಕ ವೆಂಕಟೇಶ್, ಶಾಲೆಯ ಮುಖ್ಯಶಿಕ್ಷಕ ಸಮೀಉಲ್ಲಾ, ಸಹ ಶಿಕ್ಷಕ ಲಾಲ್ಪಾಷ, ಅಂಗನವಾಡಿ ಕಾರ್ಯಕರ್ತೆ ಆರ್.ಮಹದೇವಿ, ಜನಪದ ಕಲಾ ವೇದಿಕೆಯ ಅಧ್ಯಕ್ಷ ಜನಪದ ಮಹೇಶ್, ಕಲಾವಿದರಾದ ಗುರುರಾಜು ತಮ್ಮಡಹಳ್ಳಿ, ಡಿ.ಎನ್.ಹೇಮಾ, ಯಜಮಾನ ನಾಗೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net