ಜನಪದ ಶ್ರೇಷ್ಠ ಕಲೆ

sri BOOK
ಕನ್ನಡ ಜಾನಪದ ಪರಿಷತ್‌ನಿಂದ ಕುತೂಗೋಡು ಶಾಲಾ ಮಕ್ಕಳಿಗೆ ಪುಸ್ತಕ ಹಾಗೂ ಬ್ಯಾಗ್ ವಿತರಿಸಲಾಯಿತು. ಸಂಧ್ಯಾ ಮರಿಯಪ್ಪ, ಆಶೀಶ್, ಸಚಿನ್, ರಮೇಶ್ ಶೂನ್ಯ, ಶಿಕ್ಷಕರು ಇದ್ದರು.
Published on

ಶೃಂಗೇರಿ: ನಮ್ಮ ಸಂಸ್ಕೃತಿಯ ಶ್ರೇಷ್ಠತೆಯ ಕಲೆ ಜನಪದ ಸಾಹಿತ್ಯ. ಜನಪದ ಸಾಹಿತ್ಯ ಮೌಖಿಕವಾಗಿ ಹರಡುವ ಜಾನಪದ ಕತೆಗಳು, ಹಾಡುಗಳು, ಗಾದೆಗಳು, ಒಗಟುಗಳು, ಲಾವಣಿಗಳಂತಹ ಪ್ರಕಾರದಿಂದ ಕೂಡಿದೆ ಎಂದು ಕಲಾವಿದ ಜಗದೀಶ್ ಕಣದಮನೆ ತಿಳಿಸಿದರು.

ಕನ್ನಡ ಜಾನಪದ ಪರಿಷತ್‌ನಿಂದ ಕುತೂಗೋಡು ಶಾಲಾಮಕ್ಕಳಿಗೆ ಉಚಿತ ಪುಸ್ತಕ ಹಾಗೂ ಬ್ಯಾಗ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಒಂದು ಸಮುದಾಯದ ಸಂಸ್ಕೃತಿ, ನಂಬಿಕೆಗಳು ಮತ್ತು ಜೀವನದ ವಿಧಾನಗಳನ್ನು ಜನಪದ ರೂಪಿಸುತ್ತದೆ. ಒಬ್ಬರಿಂದ ಇನ್ನೊಬ್ಬರಿಗೆ ಹೇಳುತ್ತ, ಹಾಡುತ್ತ ಅಥವಾ ಅಭಿನಯಿಸುತ್ತ ಕಲಿಯುವ ಅಪೂರ್ವ ಕಲೆ ಜನಪದವಾಗಿದೆ. ಜೀವನದ ಎಲ್ಲ ಅಂಶಗಳನ್ನು ಒಳಗೊಂಡಿರುವ ಈ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೂ ಅರಿವು ಮೂಡಿಸುವತ್ತ ಹೆಚ್ಚಿನ ಗಮನ ಹರಿಸಬೇಕು ಎಂದರು.

ತಾಲೂಕು ಕಜಾಪ ಅಧ್ಯಕ್ಷ ಆಶೀಶ್ ದೇವಾಡಿಗ ಮಾತನಾಡಿ, ಪರಿಷತ್ತು ಕೇವಲ ಜನಪದ ಮೌಲ್ಯಗಳನ್ನು ಉಳಿಸುವಲ್ಲಿ ಹೆಚ್ಚು ಒತ್ತು ನೀಡುತ್ತಿದೆ. ಹಾಗೆಯೇ ಸಮಾಜಕ್ಕೆ ಸಾಧ್ಯವಾಗುವ ಕೊಡುಗೆ ನೀಡುವಲ್ಲಿ ಯಶಸ್ಸು ಕಂಡಿದೆ ಎಂದರು.

ಶಾಲಾ ಮಕ್ಕಳಿಗೆ ಜಾನಪದ ಗೀತೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಮೆಣಸೆ ಗ್ರಾಪಂ ಅಧ್ಯಕ್ಷೆ ಸಂಧ್ಯಾ ಮರಿಯಪ್ಪ, ಜೆಸಿಐ ಅಧ್ಯಕ್ಷ ಅಶೋಕ್, ಕಾರ್ಯದರ್ಶಿ ರಮೇಶ್ ಶೂನ್ಯ, ಪತ್ರಕರ್ತ ಸಚಿನ್, ನಟ ರೇವಂತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net