

ಔರಾದ್: ಇಂದಿನ ಯುವಕರು ಗ್ರಾಮೀಣ ಪ್ರದೇಶದ ಜನಪದ ಸೊಗಡಿನ ಕ್ರೀಡೆಗಳಿಗಳಿಗೆ ಆದ್ಯತೆ ನೀಡುವ ಮೂಲಕ ಸಂಸ್ಕೃತಿ ಉಳಿಸುವ ಹಾಗೂ ಜನಾರೋಗ್ಯ ಕಾಪಾಡುವ ಕೆಲಸ ಮಾಡಬೇಕೆಂದು ಯುವ ಮುಖಂಡ ಸಾಗರ ಪಾಟೀಲ್ ಕೊಳ್ಳುರ್ ಹೇಳಿದರು.
ತಾಲೂಕಿನ ಬೋರಾಳ ಗ್ರಾಮದಲ್ಲಿ ಶುಕ್ರವಾರ ಭಗತ್ಸಿಂಗ್ ಕ್ರಿಕೆಟ್ ಕ್ಲಬ್ನಿಂದ ಆಯೋಜಿಸಿದ ಕ್ರಿಕೆಟ್ ಟೂರ್ನಿಯಲ್ಲಿ ಮಾತನಾಡಿ, ಕ್ರೀಡಾ ಕ್ಷೇತ್ರದಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ನೀಡುತ್ತ ಜಗತ್ತಿನಾದ್ಯಂತ ಹೆಸರು ಮಾಡಿದೆ. ಗ್ರಾಮಿಣ ಭಾಗದ ಯುವ ಸಮುದಾಯ ಜನಪದ ಕ್ರೀಡೆಗಳತ್ತ ಹೆಚ್ಚಿನ ಒಲವು ತೋರಬೇಕು ಎಂದು ಹೇಳಿದರು.
ಕಾಂಗ್ರೆಸ್ ಹಿರಿಯ ಮುಖಂಡ ಶಂಕರರಾವ ದೊಡ್ಡಿ ಉದ್ಘಾಟಿಸಿ ಮಾತನಾಡಿ, ಕ್ರೀಡೆ ಎಂದರೆ ಕೇವಲ ಕ್ರಿಕೆಟ್ ಮಾತ್ರವಲ್ಲ. ಕಬ್ಬಡ್ಡಿ ಸೇರಿದಂತೆ ಹಲವು ದೇಶಿ ಕ್ರೀಡೆಗಳತ್ತ ಎಲ್ಲರೂ ಆಸಕ್ತಿ ವಹಿಸಬೇಕು ಎಂದರು.
ಸಂತಪುರ ಠಾಣೆ ಪಿಎಸ್ಐ ಪ್ರಭಾಕರ ಪಾಟೀಲ್ ರಸ್ತೆ ಸುರಕ್ಷತೆ ಬಗ್ಗೆ ಮಾಹಿತಿ ನೀಡಿದರು. ಏಕಲಾರ ಗ್ರಾಪಂ ಅಧ್ಯಕ್ಷ ಸಮರ್ಥರಾವ, ಪ್ರಮುಖರಾದ ಧನರಾಜ ಮುಸ್ತಾಪುರೆ, ಡಿ.ಕೆ.ಸಂಜುಕುಮಾರ, ನಂದಾದೀಪ ಬೋರಾಳೆ, ಭಜರಂಗ ಪಾಂಡ್ರೆ, ದಿಲೀಪ ಪಾಂಡ್ರೆ, ಬಾಬುರಾವ ಕಾಂಬ್ಳೆ, ರಾಜಕುಮಾರ ನರವಾ, ಅನೀಲಕುಮಾರ ಇತರರಿದ್ದರು.