

ಚಿತ್ರದುರ್ಗ: ಮಾನವರ ನಡವಳಿಕೆ ಬದಲಿಸುವಲ್ಲಿ ಜನಪದ ಕಲಾಪ್ರಕಾರಗಳು ಅತ್ಯಂತ ಪರಿಣಾಮಕಾರಿ ಎಂದು ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಡಿ.ಎಂ. ಅಭಿನವ ಹೇಳಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿ ವೆಂಕಟೇಶ್ವರ ಬಡಾವಣೆ ಕೊಳಚೆ ಪ್ರದೇಶದಲ್ಲಿ ಮಂಗಳವಾರ ಜಾನಪದ ಕಲೆಗಳ ಮೂಲಕ ಆರೋಗ್ಯ ಸೇವೆ ಬಲಪಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ತಾಯಿ-ಶಿಶು ಮರಣ ನಿಯಂತ್ರಣ, ಬಾಲ್ಯವಿವಾಹ ತಡೆಗಟ್ಟುವಿಕೆ, ಭ್ರೂಣಲಿಂಗ ಪತ್ತೆ ಕಾಯ್ದೆ ಅನುಷ್ಠಾನ ಸಂಬಂಧ ಜಾಗೃತಿ ಮೂಡಿಸಿ ಜನರನ್ನು ಪರಿವರ್ತಿಸಲು ಕಿರು ನಾಟಕಗಳು ಸಹಕಾರಿಯಾಗಿವೆ ಎಂದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣನಾಯಕ್ ಮಾತನಾಡಿ, ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮದಡಿ ಜಿಲ್ಲೆಯ ಪ್ರತಿ ತಾಲೂಕಿಗೆ 5 ನಾಟಕದಂತೆ ಒಟ್ಟು 30 ಪ್ರದರ್ಶನ ನಿಗದಿಯಾಗಿದೆ. ಎಲ್ಲೆಲ್ಲಿ ತಾಯಿ-ಶಿಶು ಮರಣ ಹೆಚ್ಚು ಸಂಭವಿಸುತ್ತಿದೆಯೋ ಅಂತಹ ಗ್ರಾಮಗಳನ್ನು ಆಯ್ದುಕೊಳ್ಳಲಾಗುವುದು ಎಂದು ತಿಳಿಸಿದರು.
ಟಿಎಚ್‌ಒ ಡಾ.ಬಿ.ವಿ. ಗಿರೀಶ್ ಮಾತನಾಡಿ, ಆರೋಗ್ಯ ಸೇವೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಇದೊಂದು ಉಪಯುಕ್ತ ಕಾರ್ಯಕ್ರಮ ಎಂದರು.
ಆರೋಗ್ಯ ಇಲಾಖೆ ವಿವಿಧ ವಿಭಾಗದ ಅಧಿಕಾರಿಗಳಾದ ಎನ್.ಎಸ್.ಮಂಜುನಾಥ್, ಕರಕಪ್ಪ ಮೇಟಿ, ಬಿ.ಜಾನಕಿ, ಬಿ.ಮೂಗಪ್ಪ, ಶ್ರೀನಿವಾಸ್, ಗುರುಮೂರ್ತಿ, ಪ್ರವೀಣ್, ವತ್ಸಲಮ್ಮ, ಆಶಾ ಕಾರ್ಯಕರ್ತೆಯರು, ಇತರರಿದ್ದರು.