

ಗೋಗಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಜನಪದ ಕಲೆಯ ಮಹತ್ವ ಮತ್ತು ವೈಶಿಷ್ಟ್ಯ ಬಗ್ಗೆ ಯುವಕರಿಗೆ ಪರಿಚಯಿಸುವ ಕೆಲಸವಾಗಬೇಕು ಎಂದು ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಗುರುಲಿಂಗಪ್ಪ ಹೇಳಿದರು.
ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಗಡಿ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರಸ್ವತಿ ಮತ್ತು ಭಾಷಾ ಅಭಿವೃದ್ಧಿ ಸಂಸ್ಥೆಯಿಂದ ಶುಕ್ರವಾರ ಆಯೋಜಿಸಿದ್ದ ಗಡಿ ಜನಪದ ಉತ್ಸವ ಕಾರ‍್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾವಿದರಿಗೆ ವಿವಿಧ ಸಂಘ-ಸಂಸ್ಥೆಗಳ ಮೂಲಕ ಕಾರ‍್ಯಕ್ರಮ ನೀಡಿ ಪ್ರೋತ್ಸಾಹಿಸುತ್ತಿದೆ. ಅದೇ ರೀತಿ ಮರೆಯಾಗುತ್ತಿರುವ ಜನಪದ ಕಲೆಯನ್ನು ಯುವ ಪೀಳಿಗೆಗೆ ಪರಿಚಯಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಸಹಕಾರಿ ಸಂಘಗಳ ಒಕ್ಕೂಟದ ಅಧ್ಯಕ್ಷ ವಿಶ್ವನಾಥರಡ್ಡಿ ದರ್ಶನಾಪುರ ಕರ‍್ಯಕ್ರಮ ಉದ್ಘಾಟಿಸಿದರು. ಕಸಾಪ ವಲಯ ಅಧ್ಯಕ್ಷ ನಾಗರಾಜ ಶಾಸ್ತ್ರೀ, ಚಂದಪ್ಪ ತಾಯಮಗೋಳ, ಬಸವರಾಜಪ್ಪಗೌಡ ತಂಗಡಗಿ, ಗೌಡಪ್ಪಗೌಡ ಪರಿವಾಣ, ಮುಖ್ಯಗುರು ಎಸ್.ಜಿ.ದೇಸಾಯಿ, ಭೀಮರಡ್ಡಿ ಮಂಟೋಳಿ, ಭೀಮರಡ್ಡಿ ಮ್ಯಾಕಲ್ ಇದ್ದರು. ವಿಶೇಷ ಸಾಧನೆ ಮಾಡಿದ ಪ್ರಗತಿಪರ ರೈತ ಮಹಿಪಾಲರಡ್ಡಿ ಹಾಗೂ ಡಾ.ಮಂಜುನಾಥ ಹೂಗಾರ ಅವರನ್ನು ಸನ್ಮಾನಿಸಲಾಯಿತು.