ಜನಪದ ಅರಿವು ಅಗತ್ಯ

18Kakamari1
Published on

ಕಕಮರಿ: ಜಾನಪದವೇ ನಮ್ಮ ಉಸಿರು, ಇದರ ಕುರಿತು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡುವುದು ಅಗತ್ಯವೆಂದು ಭಾವಿಸಿ ಕಾರ್ಯಕ್ರಮ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದು ಪ್ರಾಚಾರ್ಯ ಶಿವಗುರು ಬಸರಗಿ ತಿಳಿಸಿದರು.

ಇಲ್ಲಿನ ಶ್ರೀ ಸದ್ಗುರು ರಾಯಲಿಂಗೇಶ್ವರ ಜ್ಞಾನ ವಿದ್ಯಾ ಸಂಸ್ಥೆಯ ಮಾತೋಶ್ರೀ ನೀಲಮ್ಮ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಜನಪದ ಜಾತ್ರೆ ಉದ್ಘಾಟಿಸಿ ಮಾತನಾಡಿದರು.

ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಸಂಗಮೇಶ ಬಸರಗಿ ಮಾತನಾಡಿ, ಜನರು ತಮ್ಮ ದಿನ ನಿತ್ಯದ ಕಾಯಕದೊಂದಿಗೆ ಹಾಡು, ಕುಣಿತ, ಸಾಹಿತ್ಯ, ಕಲೆ, ಬಯಲಾಟ, ನಾಟಕಗಳ ಮೂಲಕ ಸಂಭ್ರಮ ಸಡಗರದಿಂದ ಆಚರಿಸಿಕೊಂಡು ಬಂದಿರುವ ಕಲೆಗಳೇ ಜಾನಪದ ಎಂದರು.

ಕಾಲೇಜನ್ನು ಬಾಳೆಗೊನೆ, ಕಬ್ಬು, ತೋರಣಗಳಿಂದ ಹಳ್ಳಿಯ ಸೊಗಡನ್ನು ಬಿಂಬಿಸುವಂತೆ ಶೃಂಗರಿಸಲಾಗಿತ್ತು. ಎಲ್ಲರೂ ಸಾಂಪ್ರದಾಯಿಕ ಉಡುಗೆ ತೊಟ್ಟು ಸಂಭ್ರಮಿಸಿದರು.

ಪ್ರೌಢಶಾಲೆ ಮುಖ್ಯಶಿಕ್ಷಕ ಮಂಜುರೆಡ್ಡಿ ಮೆಕಳಿ, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಇದ್ದರು. ವಿದ್ಯಾರ್ಥಿನಿ ವಿಜಯಲಕ್ಷ್ಮಿ ಗುಜರೆ ಸ್ವಾಗತಿಸಿದರು. ಅಂಕಿತಾ ಪುಠಾಣಿ ನಿರೂಪಿಸಿದರು. ಭುವನೇಶ್ವರಿ ಸಿಂದೂರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net