ಜನನಾಯಕರಾಗಲು ಎಲ್ಲರ ಸಹಕಾರ ಬೇಕು

1
Published on


ರಾಮದುರ್ಗ: ವೀರಶೈವ ಲಿಂಗಾಯತರಲ್ಲಿ ಸಾಕಷ್ಟು ಒಳಪಂಗಡಗಳಿದ್ದು ಎಲ್ಲರೂ ಸಂಟಿತರಾಗುತ್ತಿದ್ದಾರೆ. ಒಂದು ಸಮುದಾಯದ ಬೆಂಬಲದಿಂದ ಯಾವುದೇ ವ್ಯಕ್ತಿ ಜನನಾಯಕರಾಗಲು ಸಾಧ್ಯವಿಲ್ಲ. ಎಲ್ಲ ಸಮುದಾಯಗಳ ಸಹಕಾರ ಅಗತ್ಯ ಎಂದು ಸಂಸದ ಜಗದೀಶ ಶೆಟ್ಟರ್​ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಕರ್ನಾಟಕ ಬಣಜಿಗ ಸಮಾಜದ ೇಮಾಭಿವೃದ್ಧಿ ಸಂದ ತಾಲೂಕು ಟಕದಿಂದ ಮಂಗಳವಾರ ಆಯೋಜಿಸಿದ್ದ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ, ಸಾಧಕರ ಸನ್ಮಾನ ಮತ್ತು ನೂತನ ಸಂಸದರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಣಜಿಗ ಸಮುದಾಯದ ಜನತೆ ಲಿಂಗಾಯತ ಒಳಪಂಗಡಗಳು ಹಾಗೂ ಸರ್ವ ಸಮುದಾಯಗಳ ಜತೆಗೆ ಉತ್ತಮ ಸಂಬಂಧ ಹೊಂದಿದ ಹಿನ್ನೆಲೆಯಲ್ಲಿ ನಾಯಕರಾಗಿ ಬೆಳೆಯಲು ಸಾಧ್ಯವಿದೆ. ರಾಜ್ಯದಲ್ಲಿ ಬಣಜಿಗ ಸಮುದಾಯದ ಎಲ್ಲ ತಾಲೂಕು ಟಕಗಳು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿವೆ. ಆದರೆ, ರಾಜ್ಯ ಟಕದ ಸಂಟನೆಯಲ್ಲಿ ಕೊರತೆ ಇದ್ದು, ಚುರುಕುಗೊಳಿಸಲು ಪ್ರಯತ್ನಿಸುವುದಾಗಿ ತಿಳಿಸಿದರು. ಧಾರವಾಡ ಬೆಳಗಾವಿ ರೈಲ್ವೆ ಸಂಪರ್ಕ ಮತ್ತು ಸವದತ್ತಿ ಹಾಗೂ ರಾಮದುರ್ಗಕ್ಕೆ ರೈಲ್ವೆ ಸಂಪರ್ಕ ಕಲ್ಪಿಸಲು ಕೇಂದ್ರ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಮಾಹಿತಿ ನೀಡಿದರು.

ಶಾಸಕ ಅಶೋಕ ಪಟ್ಟಣ ಮಾತನಾಡಿ, ಲಿಂಗಾಯತ ಒಳಪಂಗಡಗಳು ಕೇವಲ ಸಮಾವೇಶ, ಸಭೆ ಸಮಾರಂಭ ಮಾಡದೆ ಸಮಾಜದಲ್ಲಿ ಆರ್ಥಿಕ ಮತ್ತು ಶೆಣಿಕವಾಗಿ ಹಿಂದುಳಿದ ಜನರನ್ನು ಗುರುತಿಸಿ ಮುಖ್ಯವಾಹಿನಿಗೆ ತರಲು ಶ್ರಮಿಸಿದರೆ ಮಾತ್ರ ಬಸವಣ್ಣನವರ ಸಮ ಸಮಾಜ ನಿರ್ಮಾಣ ಪರಿಕಲ್ಪನೆ ಈಡೇರಲು ಸಾಧ್ಯವಿದೆ ಎಂದರು.
ತಾಳಿಕೋಟೆಯ ಪ್ರೌಢಶಾಲಾ ಶಿಕ ಅಶೋಕ ಹಂಚಳಿ ಉಪನ್ಯಾಸ ನೀಡಿದರು. ತಾಲೂಕು ಟಕದ ಅಧ್ಯ ಗುರುಸಿದ್ಧಪ್ಪ ಮುತ್ತೂರ ಅಧ್ಯತೆ ವಹಿಸಿದ್ದರು. ಮಾಜಿ ಶಾಸಕ ಮಹಾದೇವಪ್ಪ ಯಾದವಾಡ, ಮಹಿಳಾ ಟಕದ ಅಧ್ಯೆ ಪ್ರಭಾವರಿ ಪುಠಾಣಿ, ಯುವ ಟಕದ ಅಧ್ಯ ರಾಜು ಬೆಂಬಳಗಿ, ಹರ್ಷಿತಾ ಸವಣೂರ ಇದ್ದರು.
ಮಹೇಶ ದೇಶನೂರ, ಶೇಖರಪ್ಪ ಯಾದವಾಡ, ಬಸವಣ್ಣೆಪ್ಪ ಹುದ್ದಾರ, ಶಶಿಧರ ಮಾಳವಾಡ ಅವರಿಗೆ ಕಾಯಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಸ್​ಎಸ್​ಎಲ್​ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.ಈರಣ್ಣ ಬುಡ್ಡಾಗೋಳ ಸ್ವಾಗತಿಸಿದರು. ಪ್ರೊ.ಎಸ್​.ಎಂ.ಸಕ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದಿವ್ಯಾ ಬಟಕುರ್ಕಿ ನಿರೂಪಿಸಿದರು. ಸಿದ್ದು ಹದ್ಲಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net