ಜನನ- ಮರಣ ನೋಂದಣಿಗೆ ವಿಳಂಬ ಸಲ್ಲ

1106kLb10
Published on

ಕಲಬುರಗಿ: ಜಿಲ್ಲಾದ್ಯಂತ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಸ್ಥಳಿಯ ಸಂಸ್ಥೆಗಳಲ್ಲಿ ಜನನ-ಮರಣ ನೋಂದಣಿಗೆ ಬರುವ ರ‍್ಜಿ ವಿಳಂಬ ಮಾಡದೆ ಸಕಾಲದಲ್ಲಿ ನೋಂದಣಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್​ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ರ‍್ಪಡಿಸಿದ್ದ ಜಿಲ್ಲಾ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿ, ೨೧ ದಿನದೊಳಗೆ ಜನನ- ಮರಣ ನೋಂದಣಿ ಮಾಡಬೇಕು. ಅಂಗನವಾಡಿ- ಆಶಾ ಕರ‍್ಯರ‍್ತೆಯರು, ಕುಟುಂಬದ ಸದಸ್ಯರು, ಆಂಬುಲೆನ್ಸ್​ ವಾಹನದ ಚಾಲಕರು ಹೊಸದಾಗಿ ಜನನ -ಮರಣ ಕುರಿತು ಸಂಬಂಧಿಸಿದವರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

೨೦೨೫ರ ಜನವರಿಯಿಂದ ಮೇವರೆಗೆ ಜಿಲ್ಲೆಯ ೨೬೧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನನ ನೋಂದಣಿಗೆ ಸಲ್ಲಿಕೆಯಾದ ೫೪೮ರಲ್ಲಿ ೫೩೨ಕ್ಕೆ ಮತ್ತು ಮರಣ ನೋಂದಣಿಗೆ ಸಲ್ಲಿಕೆಯಾದ ೩,೪೫೩ ರಲ್ಲಿ ೩,೪೪೩ ಅನುಮೋದನೆ ನೀಡಿದ್ದು, ಬಾಕಿ ರ‍್ಜಿ ಅನುಮೋದಿಸಬೇಕು. ತಾಪಂ ಇಓಗಳು ಮೇಲುಸ್ತುವಾರಿ ವಹಿಸಬೇಕು. ಗ್ರಾಮ ಪಂಚಾಯಿತಿ ಹಂತದಲ್ಲಿ ಕಾಲಮಿತಿಯಲ್ಲಿ ನೋಂದಣಿ ಮಾಡದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಡಿ.ಸಿ, ರ‍್ನಿಲಸುವ ಪಿಡಿಓಗಳಿಗೆ ನೋಟಿಸ್​ ಜಾರಿ ಮಾಡುವಂತೆ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳಿಗೆ ನರ‍್ದೇಶಿಸಿದರು.

೨೦೨೪-&೨೫ನೇ ಸಾಲಿನ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್​ ಬಿಮಾ ಯೋಜನೆಯಡಿ ಬೆಳೆ ಕಟಾವು ಪರಿಣಾಮಕಾರಿ ಅನುಷ್ಠಾನಕ್ಕೆ ಜಿಲ್ಲೆಗೆ ಮುಂಗಾರಿನಲ್ಲಿ ೩,೪೨೪, ಹಿಂಗಾರಿನಲ್ಲಿ ೨,೬೭೬ ಹಾಗೂ ಬೇಸಿಗೆಯಲ್ಲಿ ೧೫೨ ಸೇರಿ ಒಟ್ಟು ೬,೨೫೨ ಪ್ರಯೋಗ ಯೋಜಿಸಿದ್ದು, ಒಟ್ಟಾರೆ ೪,೮೬೧ ಪ್ರಯೋಗ ಕೈಗೊಳ್ಳಲಾಗಿದೆ ಎಂದು ಸಮಿತಿಯ ಸದಸ್ಯ ಕರ‍್ಯರ‍್ಶಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಜಯಶ್ರೀ ಕರಜಗಿ ಸಭೆಗೆ ತಿಳಿಸಿದರು.

ಡಿ.ಸಿ. ಬಿ.ಫೌಜಿಯಾ ತರನ್ನುಮ್​ ಮಾತನಾಡಿ, ಬೆಳೆ ಕಟಾವು ಪರಿಣಾಮಕಾರಿ ಅನುಷ್ಠಾನಕ್ಕೆ ಹೋಬಳಿವಾರು ಕೃಷಿ, ಕಂದಾಯ, ತೋಟಗಾರಿಕೆ, ಆರ್​ಡಿಪಿಆರ್​ ಸಿಬ್ಬಂದಿಗೆ ತರಬೇತಿ ಆಯೋಜಿಸಬೇಕು ಎಂದರು.

ಜಿಪಂ ಮುಖ್ಯ ಯೋಜನಾಧಿಕಾರಿ ಎಸ್​.ಎಸ್​.ಮಠಪತಿ, ತೋಟಗಾರಿಕೆ ಉಪನರ‍್ದೇಶಕ ಸಂತೋಷ ಇನಾಂದಾರ, ಕೃಷಿ ಉಪನರ‍್ದೇಶಕಿ ಅನುಸೂಯಾ ಹೂಗಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net