ಜನತಾ ಬಜಾರ್ ಸಣ್ಣ ವ್ಯಾಪಾರಸ್ಥರ ವಿರೋಧ

JANATA BAZAR
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಸ್ಮಾರ್ಟ್​ಸಿಟಿ ಅನುದಾನದಲ್ಲಿ ಜನತಾ ಬಜಾರ್ ಮಾರುಕಟ್ಟೆ ಪ್ರದೇಶದಲ್ಲಿ ನಿರ್ವಿುಸಿದ ವಾಣಿಜ್ಯ ಸಂಕೀರ್ಣವನ್ನು ಇ-ಹರಾಜು ಪ್ರಕ್ರಿಯೆ ಮೂಲಕ ಹಂಚಿಕೆ ಮಾಡುವುದಕ್ಕೆ ಅಲ್ಲಿಯ ಸಣ್ಣ ವ್ಯಾಪಾರಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.

ಟ್ರೇಡ್ ಲೈಸನ್ಸ್ ಹೊಂದಿದ ವಾಣಿಜ್ಯ ಮಳಿಗೆಗಳಿಗೆ ಇ-ಹರಾಜು ಅನ್ವಯಿಸುತ್ತದೆ. ಹೂವು-ಹಣ್ಣು ಮಾರಾಟ ಮಾಡುವ ಕಟ್ಟಾ (ಶೆಡ್)ಗಳಿಗೆ ಇ-ಹರಾಜು ಅನ್ವಯಿಸುವುದಿಲ್ಲ. ಜನತಾ ಬಜಾರ್​ನಲ್ಲಿ ಹೊಸದಾಗಿ ನಿರ್ವಿುಸಿದ ವಾಣಿಜ್ಯ ಸಂಕೀರ್ಣದಲ್ಲಿ ಕಟ್ಟಾಗಳಿವೆ. ಅಲ್ಲಿ ಮೊದಲಿದ್ದ ಸಣ್ಣ ವ್ಯಾಪಾರಿಗಳಿಗೆ ಕಟ್ಟಾಗಳನ್ನು ನೇರವಾಗಿ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಜ. 7ರಂದು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಇ-ಹರಾಜು ಮೂಲಕ ಹಂಚಿಕೆ ಮಾಡುವ ವಿಷಯ ಪ್ರಸ್ತಾಪಗೊಂಡ ಹಿನ್ನೆಲೆಯಲ್ಲಿ ಸಣ್ಣ ವ್ಯಾಪಾರಿಗಳು ಪಾಲಿಕೆ ಆಯುಕ್ತರನ್ನು ಶುಕ್ರವಾರ ಭೇಟಿ ಮಾಡಲು ಬಂದಿದ್ದರು. ಆದರೆ, ಆಯುಕ್ತರ ಭೇಟಿ ಸಾಧ್ಯವಾಗದೇ ಪಾಲಿಕೆ ಕಚೇರಿ ಆವರಣದಲ್ಲಿಯೇ ಚರ್ಚೆ ನಡೆಸಿದರು. ಇ-ಹರಾಜಿಗೆ ವಿರೋಧ ವ್ಯಕ್ತಪಡಿಸಿದರು.

ಶೀಘ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ. ಜನತಾ ಬಜಾರ್ ಸಣ್ಣ ವ್ಯಾಪಾರಿದಳ ಸಂಘದ ಗೌರವಾಧ್ಯಕ್ಷ ಪ್ರೇಮನಾಥ ಚಿಕ್ಕತುಂಬಳ, ರಫೀಕ್ ಮುಜಾಹಿದ, ನಾರಾಯಣ ಮುದ್ದಣ್ಣನವರ, ರಾಜು ವಾಲ್ಮೀಕಿ, ರಾಘವೇಂದ್ರ ತಾಂಬ್ರೆ, ಹೀರಾ ಬದ್ದಿ, ಸಂಜು ಕುರಹಟ್ಟಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net