ಜನತಾ ಜಲಧಾರೆಯಿಂದ ಜೆಡಿಎಸ್​ ಅಧಿಕಾರಕ್ಕೆ : ಜೆಡಿಎಸ್​ ಮುಖಂಡ ಸಿಎಂಆರ್​ ಶ್ರೀನಾಥ್​ ಹೇಳಿಕೆ, ಸಮಾರೋಪಕ್ಕೆ ತೆರಳುವ ಬಸ್​ಗಳಿಗೆ ಚಾಲನೆ

1
Published on

ವಿಜಯವಾಣಿ ಸುದ್ದಿಜಾಲ ಕ್ಯಾಲನೂರು

ಜನತಾ ಜಲಧಾರೆ ಯಾತ್ರೆಯಿಂದ ಜೆಡಿಎಸ್​ ರಾಜ್ಯಾದ್ಯಂತ ಉತ್ತಮ ಸಂಟನೆಯಾಗಿದ್ದು, ಮುಂದಿನ ಚುನಾವಣೆಯಲ್ಲಿ ಜೆಡಿಎಸ್​ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಜೆಡಿಎಸ್​ ಮುಖಂಡ ಸಿಎಂಆರ್​ ಶ್ರೀನಾಥ್​ ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಶುಕ್ರವಾರ ಜೆಡಿಎಸ್​ ಏರ್ಪಡಿಸಿದ್ದ ಜನತಾ ಜಲಧಾರೆ ಸಮಾರೋಪ ಸಮಾರಂಭಕ್ಕೆ ಕೋಲಾರ ತಾಲೂಕಿನ ಕುರುಗಲ್​ ಗೇಟ್​ನಿಂದ ಹೊರಟ 100 ಬಸ್​ಗಳಿಗೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು.

ಕುಡಿಯುವ ನೀರು, ಕೃಷಿ, ಉದ್ಯೋಗ, ಶಿಣದ ಅಗತ್ಯತೆ ರಾಜ್ಯಕ್ಕಿದ್ದು ಇದಕ್ಕಾಗಿ ಮುಂದಿನ ದಿನಗಳಲ್ಲಿ ಜೆಡಿಎಸ್​ ಸರ್ಕಾರ ಅಧಿಕಾರಕ್ಕೆ ಬರಬೇಕಿದೆ. ಕೋಲಾರ ವಿಧಾನಸಭಾ ೇತ್ರದಿಂದ 5000 ಕಾರ್ಯಕರ್ತರು ತೆರಳುತ್ತಿದ್ದಾರೆ. ಬಸ್​ಗಳ ಜತೆಗೆ 40 ಕಾರ್​ ಮತ್ತು 50 ಬೈಕ್​ಗಳಲ್ಲಿ ಉತ್ಸಾಹಿ ಕಾರ್ಯಕರ್ತರು ಸಾಗಿದ್ದು, ಇದರ ಫಲವಾಗಿ 6 ಲ ಜನರು ಸಂಟಿತರಾಗಿದ್ದಾರೆ. ರಾಜ್ಯದ ರೈತರು ಮತ್ತು ಬಡ ಜನತೆಯ ಹಿತದೃಷ್ಟಿಯಿಂದ ಜಲಧಾರೆ ಕಾರ್ಯಕ್ರಮಕ್ಕೆ ಜೆಡಿಎಸ್​ ಹೈಕಮಾಂಡ್​ ಚಾಲನೆ ನೀಡಿದ್ದು, ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರಲಿದೆ. ಎಲ್ಲ ವರ್ಗದ ಜನರಿಗೆ ಸಹಾಯವಾಗುವ ರೀತಿಯಲ್ಲಿ ಸರ್ಕಾರ ನಡೆಸಲಾಗುತ್ತದೆ. ಕಾರ್ಯಕರ್ತರು ಯಾವುದೇ ಆಮಿಷಗಳಿಗೆ ಒಳಗಾಗದೇ ಪಕ್ಷವನ್ನು ಬಲಪಡಿಸಬೇಕು. ಬಿಜೆಪಿಯ ಆಡಳಿತ ವಿರೋಧಿ, ಕಾಂಗ್ರೆಸ್​ ಕುತಂತ್ರ ರಾಜಕಾರಣದಿಂದ ಜನ ಬೇಸತ್ತಿದ್ದಾರೆ ಎಂದರು.

ಎಂಎಲ್​ಸಿ ಇಂಚರ ಗೋವಿಂದರಾಜು ಮಾತನಾಡಿ, ಜನತಾ ಜಲಧಾರೆ ಮತ್ತು ಗಂಗಾರತಿ ಕಾರ್ಯಕ್ರಮ ಮೂಲಕ ನದಿ ನೀರನ್ನು ಸದ್ವಿನಿಯೋಗ ಮಾಡುವ ಬಗ್ಗೆ ಜನಜಾಗೃತಿ ಮೂಡಿಸಲಾಗಿದ್ದು, ಇದರಿಂದ ಉತ್ತೇಜಿತರಾದ ಲಾಂತರ ಜನತಾದಳ ಕಟ್ಟಾಳುಗಳು ಸಮಾರೋಪಕ್ಕೆ ಸ್ವಯಂಪ್ರೇರಿತರಾಗಿ ಆಗಮಿಸುತ್ತಿದ್ದಾರೆ. ಇದರಿಂದಾಗಿ ನೀರಾವರಿ ಜನಜಾಗೃತಿ ಉಂಟಾಗಿದ್ದು ಇದು ಸಂಟನೆಗೆ ಪೂರಕವಾಗಲಿದೆ ಎಂದರು.

ಜಿಲ್ಲೆಯಿಂದ ಸಾವಿರಾರು ಕಾರ್ಯಕರ್ತರು, ಜನರು ಸಮಾರೋಪ ಸಮಾರಂಭಕ್ಕೆ ಆಗಮಿಸಿದ್ದರೆ ಕೋಲಾರ ತಾಲೂಕು ಅಧ್ಯೆ ಕುರ್ಕಿ ರಾಜೇಶ್ವರಿ ಗೈರಾಗಿದ್ದರು.

ಜೆಡಿಎಸ್​ ಮುಖಂಡರಾದ ವಕ್ಕಲೇರಿ ರಾಮು, ಮಲ್ಲಂಡಹಳ್ಳಿ ಲೋಕೇಶ್​ ಮರಿಯಪ್ಪ, ಮಾಜಿ ತಾಲೂಕು ಅಧ್ಯ ನಟರಾಜ್​, ನಗರಸಭೆ ಅಧ್ಯೆ ಶ್ವೇತಾ ಶಬರೀಶ್​, ಜೆಡಿಎಸ್​ ಮುಖಂಡ ಸಿಎಂಆರ್​ ಹರೀಶ್​, ಉಮೇಶ್​, ಸುಧಾಕರ್​, ಎಪಿಎಂಸಿ ಪುಟ್ಟರಾಜು, ತಾಪಂ ಮಾಜಿ ಸದಸ್ಯ ಮುದುವಾಡಿ ಮಂಜುನಾಥ್​, ಹೋಲ್ಲರಹಳ್ಳಿ ಅಶೋಕ್​, ಕ್ಯಾಲನೂರು ನವೀನ್​, ಡಾಬಾ ಶಂಕರ್​, ನವೀನ್​ ಕುಮಾರ್​ ಇತರರಿದ್ದರು.

ಜಿಲ್ಲೆಯಿಂದ 15 ಸಾವಿರ ಮಂದಿ ಭಾಗಿ: ನೆಲಮಂಗಲದಲ್ಲಿ ನಡೆಯುತ್ತಿರುವ ಜನತಾ ಜಲಧಾರೆ ಸಮಾರೋಪಕ್ಕೆ ಕೋಲಾರ ಜಿಲ್ಲೆಯಿಂದ 100 ಬಸ್​ ಹಾಗೂ ಖಾಸಗಿ ವಾಹನಗಳಲ್ಲಿ ಒಟ್ಟು 15 ಸಾವಿರ ಮಂದಿ ಭಾಗವಹಿಸಿದ್ದಾರೆ ಎಂದು ಜೆಡಿಎಸ್​ ಮುಖಂಡ ಸಿಎಂಆರ್​ ಶ್ರೀನಾಥ್​ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net