ಜನತೆಗೆ ಸ್ವಚ್ಛ, ಶುದ್ಧ ಆಹಾರ ಒದಗಿಸಿ

indira
ಬೀಳಗಿ ಪಟ್ಟಣದ ಜಿಎಲ್‌ಬಿಸಿ ನೀರಾವರಿ ಇಲಾಖೆ ಆವರಣದಲ್ಲಿ ನಿರ್ಮಿಸಿದ ಇಂದಿರಾ ಕ್ಯಾಂಟೀನ್‌ನ್ನು ಶಾಸಕ ಜೆ.ಟಿ.ಪಾಟೀಲ ಉದ್ಘಾಟಿಸಿದರು. ಪಪಂ ಮುಖ್ಯಾಧಿಕಾರಿ ದೇವೀಂದ್ರ ಧನಪಾಲ, ರಾಮನಗೌಡ ಜಕ್ಕನಗೌಡ, ಪಡಿಯಪ್ಪ ಕರಿಗಾರ ಇತರರಿದ್ದರು.
Published on

ಬೀಳಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಮಹತ್ವಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟೀನ್‌ನಲ್ಲಿ ಜನತೆಗೆ ಶುದ್ಧ ಆಹಾ ದೊರೆಯಲಿ ಎಂದು ಗುತ್ತಿಗೆದಾರರಿಗೆ ಶಾಸಕ ಜೆ.ಟಿ. ಪಾಟೀಲ ಸೂಚಿಸಿದರು.

ಪಟ್ಟಣದಲ್ಲಿ ಜಿಎಲ್‌ಬಿಸಿ ನೀರಾವರಿ ಇಲಾಖೆ ಆವರಣದಲ್ಲಿ ನಿರ್ಮಿಸಿದ ಇಂದಿರಾ ಕ್ಯಾಂಟೀನ್‌ಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.

ಹಿಂದಿನ ಬಿಜೆಪಿ ಸರ್ಕಾರ ಈ ಯೋಜನೆಯನ್ನು ಸ್ಥಗಿತಗೊಳಿಸಿತ್ತು. ಈಗ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಇಂದಿರಾ ಕ್ಯಾಂಟೀನ್‌ಗಳನ್ನು ಪುನಾರಾಂಭಿಸಿ ಬಡ ಜನತೆಗೆ ಅನುಕೂಲ ಮಾಡಿಕೊಡುತ್ತಿದೆ. ಬೀಳಗಿಯಲ್ಲೂ ಈ ಯೋಜನೆ ಉದ್ಘಾಟನೆಗೊಂಡಿದ್ದು, ಸಂತಸ ತಂದಿದೆ ಎಂದರು.

ನಿತ್ಯ ಜನತೆಗೆ ಸ್ವಚ್ಛ ಹಾಗೂ ಪರಿಶುದ್ಧವಾದ ಆಹಾರ ನೀಡಬೇಕು. ಇಲ್ಲದಿದ್ದರೆ ಟೆಂಡರ್ ರದ್ದುಪಡಿಸುವುದಾಗಿ ಖಡಕ್ ವಾರ್ನಿಂಗ್ ಮಾಡಿದರು.

ಪಪಂ ಮುಖ್ಯಾಧಿಕಾರಿ ದೇವೀಂದ್ರ ಧನಪಾಲ, ಹಿರಿಯರಾದ ರಾಮನಗೌಡ ಜಕ್ಕನಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಣಮಂತ ಕಾಖಂಡಕಿ, ಜಿಪಂ ಮಾಜಿ ಅಧ್ಯಕ್ಷ ಯಮನಪ್ಪ ರೊಳ್ಳಿ, ತಾಪಂ ಮಾಜಿ ಅಧ್ಯಕ್ಷ ಶ್ರೀಶೈಲ ಸೂಳಿಕೇರಿ, ಪಪಂ ಸದಸ್ಯ ಪಡಿಯಪ್ಪ ಕರಿಗಾರ, ಪಪಂ ಮಾಜಿ ಅಧ್ಯಕ್ಷ ಅನಿಲ ಗಚ್ಚಿನಮನಿ, ಸಂಗಪ್ಪ ಕಂದಗಲ್ಲ, ಹಣಮಂತ ಸೂಳಿಕೇರಿ ಅಣವೀರಯ್ಯ ಪ್ಯಾಟಿಮಠ, ಶ್ರೀಶೈಲ ಆಂಟಿನ, ಬಸವರಾಜ ಹಳ್ಳದ್ಮನಿ, ಬಿ.ಆರ್. ಸೊನ್ನದ, ರಾಜು ಹಿರೇಮಠ, ಶಿವಾನಂದ ಮಾದರ, ಬಿಸನಾಳ, ರಾಜು ಬೋರ್ಜಿ, ಎಂ. ಎಂ. ಕಾಜಿ, ಅಜ್ಜು ಬಾಯಿ ಸರ್ಕಾರ ಇತರರಿದ್ದರು.

ಜೆಡಿಎಸ್, ಬಿಜೆಪಿಯ ಮೈತ್ರಿಯ ಬಗ್ಗೆ ಹಾಗೂ ಚೈತ್ರಾ ಕುಂದಾಪುರ ಅವರ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಬಿಜೆಪಿ ಜೆಡಿಎಸ್‌ನವರು ಸ್ವತಂತ್ರವಾಗಿ ಸ್ಪರ್ಧಿಸಿದರೆ ಹೆಚ್ಚು ಸ್ಥಾನ ಗಳಿಸಲು ಆಗುವುದಿಲ್ಲ ಎಂದು ನಿರ್ಧರಿಸಿ ಮೈತ್ರಿಗೆ ಗಮನಹರಿಸಿರಬಹುದು. ಇದೇನು ಹೊಸದೇನಲ್ಲ, ಈ ಹಿಂದೆಯೂ ಕಾಂಗ್ರೆಸ್ ಮತ್ತು ಜೆಡಿಎಸ್, ಅಲ್ಲದೇ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಾಗಿದ್ದು ಯಾವುದೇ ಪ್ರಯೋಜನ ಆಗಿಲ್ಲ ಎಂದು ವ್ಯಂಗ್ಯವಾಡಿದರಲ್ಲದೆ, ಜೆಡಿಎಸ್ ಕೇವಲ ಹೆಸರಿಗೆ ಮಾತ್ರ ಜಾತ್ಯತೀತ ಪಕ್ಷ, ಆದರೆ ನಿಜವಾಗಿ ಜಾತಿ ನಡೆಯುವುದೇ ಆ ಪಕ್ಷದಲ್ಲೇ ಎಂದು ದೂರಿದರು. ಚೈತ್ರಾ ಕುಂದಾಪುರ ಅವರ ಹುಳುಕು ತನಿಖೆಯಲ್ಲಿದೆ, ಶೀಘ್ರ ಸತ್ಯಾಂಶ ಹೊರ ಬೀಳಲಿದೆ ಎಂದು ಜಾರಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net