

ಚಿಕ್ಕಮಗಳೂರು: ಜನತೆಯ ಖಾತೆಗೆ ನೇರ ನಗದು ಸೇರಿದಂತೆ ಪಂಚಗ್ಯಾರAಟಿಯ ಎಲ್ಲ ಯೋಜನೆಗಳಿಂದ ಜಿಲ್ಲೆಗೆ ಪ್ರತಿ ಮಾಸಿಕ ೮೦ ಕೋಟಿ ರೂ.ಗಳನ್ನು ರಾಜ್ಯಸರ್ಕಾರ ಮಧ್ಯವರ್ತಿಗಳಿಲ್ಲದೆ ಜನತೆಯ ಕಲ್ಯಾಣಕ್ಕಾಗಿ ನೀಡುತ್ತಿದೆ ಎಂದು ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನAದ ಸ್ವಾಮಿ ತಿಳಿಸಿದರು.
ನಗರ ಹಾಗೂ ಗ್ರಾಮೀಣ ಪ್ರದೇಶದ ನ್ಯಾಯಬೆಲೆ ಅಂಗಡಿ ಹಾಗೂ ಸಹಕಾರ ಸಂಘಗಳ ಅಕ್ಕಿ ವಿತರಣಾ ಕೇಂದ್ರಕ್ಕೆ ತಾಲೂಕು ಅಧ್ಯಕ್ಷರಾದ ಮಲ್ಲೇಶ್ ಸ್ವಾಮಿ ಹಾಗೂ ಗ್ಯಾರಂಟಿ ಪ್ರಾಧಿಕಾರದ ಪದಾಧಿಕಾರಿಗಳ ತಂಡದೊAದಿಗೆ ಶುಕ್ರವಾರ ಭೇಟಿ ನೀಡಿ ಅಕ್ಕಿ ವಿತರಿಸಿ ಮಾತನಾಡಿದರು.
ಜಿಲ್ಲೆಯಾದಂತ ಇಂದು ಆಯಾ ತಾಲೂಕು ಅಧ್ಯಕ್ಷರುಗಳ ನೇತೃತ್ವದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರು ಅನ್ನಭಾಗ್ಯದ ಅಕ್ಕಿ ವಿತರಣೆ ಅಂದೋಲನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯ ಹತ್ತು ಲಕ್ಷ ಜನತೆಯ ಅಭಿವೃದ್ಧಿಗಾಗಿ ಕೋಟ್ಯಂತರ ರೂ.ಗಳನ್ನು ರಾಜ್ಯಸರ್ಕಾರ ಭರಿಸಿ ಅನುಕೂಲ ಕಲ್ಪಿಸಿದೆ. ಅನ್ನಭಾಗ್ಯ ಯೋಜನೆಯು ನುಡಿದಂತೆ ನಡೆದುಕೊಂಡಿದೆ. ಪಡಿತರ ಚೀಟಿದಾರರ ಪ್ರತಿ ವ್ಯಕ್ತಿಗೆ ತಲಾ ೧೦ ಕೆಜಿ ಅಕ್ಕಿ ವಿತರಿಸುತ್ತಿದೆ ಮತ್ತು ಪಂಚ ಗ್ಯಾರಂಟಿಗಳನ್ನು ಕೊಟ್ಟ ಮಾತಿನಂತೆ ಜಾರಿಗೊಳಿಸುತ್ತಿದ್ದು ಫಲಾನುಭವಿಗಳು ಸರ್ಕಾರಕ್ಕೆ ಕೃತಜ್ಞರಾಗಬೇಕು ಎಂದು ತಿಳಿಸಿದರು.
ಸರ್ಕಾರವು ಹಣದ ಬದಲಾಗಿ ಅಕ್ಕಿ ವಿತರಿಸುತ್ತಿದ್ದು, ಪಡಿತರದಾರರು ಕಾಳಸಂತೆಯಲ್ಲಿ ಮಾರಾಟ ಮಾಡದೇ, ಜೀವನೋಪಾಯಕ್ಕೆ ಸದ್ಬಳಕೆ ಮಾಡಿಕೊಳ್ಳಬೇಕು. ಕೆಲವೆಡೆ ತಾಂತ್ರಿಕ ದೋಷದಿಂದ ಸಣ್ಣಪುಟ್ಟ ಸಮಸ್ಯೆಯಿದೆಯೇ ಹೊರತು ಉಳಿದೆಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ಕಾರ ಆದೇಶದಂತೆ ಸಂಪೂರ್ಣ ಅಕ್ಕಿಯನ್ನು ವಿತರಿಸಿ ಶೇ.೯೯ರಷ್ಟು ಪ್ರಗತಿ ಸಾಧಿಸಿದೆ ಎಂದರು.
ಇAದಿಗೂ ಜಿಲ್ಲೆಯಲ್ಲಿ ಬಹುತೇಕ ಮಂದಿ ಗ್ಯಾರಂಟಿ ಯೋಜನೆಗಳ ಸೌಲಭ್ಯ ಪಡೆದುಕೊಂಡಿದ್ದಾರೆ. ಆದರೆ ಒಬ್ಬರಾದರೂ ಯೋಜನೆಗಳ ಸೌಲಭ್ಯ ಬೇಡ ಎಂದು ಹೇಳಿಲ್ಲ. ಹೀಗಾಗಿ ಜನತೆ ವಿರೋಧ ಪಕ್ಷಗಳ ಮಾತಿಗೆ ಕಿವಿಗೊಡದೇ ಯೋಜನೆಗಳನ್ನು ಉಪಯೋಗಿಸಿಕೊಳ್ಳಬೇಕು. ಜೊತೆಗೆ ಮುಸ್ಲಿಂ ಬಾಂಧವರಿಗೆ ರಂಜಾನ್ ಮಾಸಾಚರಣೆ ಹಿನ್ನೆಲೆ ಸರ್ವರಿಗೂ ಒಳಿತಾಗಲೀ ಎಂದು ಶುಭ ಕೋರಿದರು.
ತಾಲೂಕು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಮಲ್ಲೇಶ್ ಮಾತನಾಡಿ, ಗ್ರಾಮೀಣ ಭಾಗದ ಲಕ್ಯಾ, ಮುಗುಳುವಳ್ಳಿ ಮತ್ತು ಮೂಗ್ತಿಹಳ್ಳಿ ಹಾಗೂ ನಗರ ಪ್ರದೇಶದ ನೆಹರುನಗರ, ಉಪ್ಪಳ್ಳಿ ನ್ಯಾಯಬೆಲೆ ಅಂಗಡಿಗಳ ಅಕ್ಕಿ ವಿತರಣಾ ಕೇಂದ್ರಕ್ಕೆ ಭೇಟಿ ನೀಡಿ ಪಡಿತರ ಚೀಟಿದಾರರಿಗೆ ಸಮಗ್ರ ಮಾಹಿತಿ ಒದಗಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಪ್ರಾಧಿಕಾರದ ಸದಸ್ಯರಾದ ಅನ್ಸರ್, ಅರಸ್, ಜಯಂತಿ, ನಾಗಣ್ಣ, ಧರ್ಮಯ್ಯ, ನಗರಸಭೆ ಮಾಜಿ ಉಪಾಧ್ಯಕ್ಷ ಅಮೃತೇಶ್, ಸದಸ್ಯರಾದ ಮುನೀರ್ ಅಹಮದ್, ಲಕ್ಷö್ಮಣ್, ಖಲಂದರ್ ಮತ್ತಿತರರಿದ್ದರು.