ಜನಕಲ್ಯಾಣ ಬಯಸುವ ಕಾಂಗ್ರೆಸ್

ashok kheni prachar
Published on

ಬೀದರ್: ಕಾಂಗ್ರೆಸ್ ಜನರ ಕಲ್ಯಾಣ ಬಯಸುವ ಹಾಗೂ ಅಭಿವೃದ್ಧಿ ಪರವಾಗಿರುವ ಪಕ್ಷ. ದಕ್ಷಿಣ ಕ್ಷೇತ್ರದ ಸರ್ವಾಂಗೀಣ ವಿಕಾಸವೇ ನನ್ನ ಗುರಿ ಎಂದು ಪಕ್ಷದ ಅಭ್ಯರ್ಥಿ ಅಶೋಕ ಖೇಣಿ ಹೇಳಿದರು.
ಗೋರನಳ್ಳಿ, ನಾಗನಕೇರಾ ಇತರೆಡೆ ಪಾದಯಾತ್ರೆ ಮೂಲಕ ಮನೆ ಮನೆಗೆ ತೆರಳಿ ಮತಯಾಚಿಸಿದ ಅವರು, ಅಭಿವೃದ್ಧಿಗಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ಮೂಲಸೌಕರ್ಯ ಒದಗಿಸಿ ಜನರ ಕಷ್ಟ ನಿವಾರಿಸುವೆ. ಕಾಂಗ್ರೆಸ್ ಅನುಷ್ಠಾನಗೊಳಿಸಬಹುದಾದ ಭರವಸೆ ಮಾತ್ರ ನೀಡಿದೆ. ಎಲ್ಲ ಯೋಜನೆಗಳು ಅಧಿಕಾರಕ್ಕೆ ಬಂದ ತಕ್ಷಣ ಜಾರಿಗೆ ಬರಲಿವೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಚನ್ನಶೆಟ್ಟಿ, ಮಹಿಳಾ ಜಿಲ್ಲಾಧ್ಯಕ್ಷೆ ಪೂಜಾ ಜಾಜ್೯, ಮುಖಂಡರಾದ ಸ್ವಾಮಿದಾಸ ಹೊಸಮನಿ, ಸಂಜುಕುಮಾರ, ಶಿವಕುಮಾರ, ಪಲಿಯಂ, ಸಂಜುಕುಮಾರ ಮೇತ್ರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net