

ಹಿರೇಕೆರೂರ: ದೇಶದಲ್ಲಿ ಕರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಬಾಬು ಜಗಜೀವನ್ರಾಮ್ ಅವರ ಜಯಂತ್ಯುತ್ಸವವನ್ನು ಅತ್ಯಂತ ಸರಳ ರೀತಿಯಲ್ಲಿ ಆಚರಿಸಲಾಗುತ್ತಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ ತಾಲೂಕು ಆಡಳಿತದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಜಯಂತ್ಯುತ್ಸವದ ನಿಮಿತ್ತ ಬಾಬು ಜಗಜೀವನ್ರಾಮ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು. ಭಾರತ ದೇಶಕ್ಕೆ ಎಂತಹುದೇ ಮಹಾಮಾರಿ ಬಂದರೂ ಅದನ್ನು ನಿಯಂತ್ರಿಸುವ ಶಕ್ತಿಯಿದೆ. ಜನ ಸಹಕರಿಸದರೆ ಮಾತ್ರ ಕರೊನಾ ವೈರಸ್ ಅನ್ನು ತಡೆಗಟ್ಟಬಹುದಾಗಿದೆ. ಬಾಬು ಜಗಜೀವನ್ರಾಮ್ ಅವರು ಅಸ್ಪೃಶ್ಯತೆ ವಿರುದ್ಧ ಹೋರಾಟ ನಡೆಸಿದ ಮಹಾನ್ ನಾಯಕರಾಗಿದ್ದು, ಅವರ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು.
ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ, ತಹಸೀಲ್ದಾರ್ ರಿಯಾಜುದ್ದಿನ್ ಭಾಗವಾನ್, ಸಿಪಿಐ ಮಂಜುನಾಥ ಪಂಡಿತ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಆಂಜನೇಯ, ನಾಗರಾಜ ಕಟ್ಟಿಮನಿ, ರಘು ರಂಗಕ್ಕನವರ ಇತರರು ಇದ್ದರು.
ಸಿಇಎಸ್ ಸಂಸ್ಥೆಯ ಆವರಣದಲ್ಲಿ: ಬಿ.ಆರ್. ತಂಬಾಕದ ಪ್ರಥಮ ದರ್ಜೆ ಮಹಾವಿದ್ಯಾಲಯ, ಎಸ್ಟಿಜೆ ಶಿಕ್ಷಣ ಮಹಾವಿದ್ಯಾಲಯ ಹಾಗೂ ಎನ್ಎಸ್ಎಸ್ ಘಟಕಗಳ ವತಿಯಿಂದ ಬಾಬು ಜಗಜೀವನ್ರಾಮ್ ಜಯಂತ್ಯುತ್ಸವ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಎಸ್.ಬಿ. ತಿಪ್ಪಣ್ಣನವರ, ಗೌರವ ಕಾರ್ಯದರ್ಶಿ ಎಸ್.ಎಸ್.ಪಾಟೀಲ, ಪ್ರಾಚಾರ್ಯ ಡಾ.ಎಸ್.ಬಿ. ಚನ್ನಗೌಡರ, ಏಕೆಶಣ್ಣ ಬಣಕಾರ, ಸಿ.ಆರ್. ಹುಲ್ಲತ್ತಿ, ಆರ್.ಕೆ. ಲಮಾಣಿ, ಕೆ.ವಿ. ದಿವಿಗೀಹಳ್ಳಿ, ಆರ್.ಎಚ್. ದೊಡ್ಡಮನಿ, ಆರ್.ಎಚ್. ಪೂಜಾರ, ನಾಗರಾಜ ಎಚ್.ಪಿ, ಚನ್ನಬಸಪ್ಪ ಅರಳೀಕಟ್ಟಿ, ಸತೀಶ ಬಣಕಾರ, ದಾನೇಶ ಟಿ, ಎಸ್.ಬಿ. ಪಾಟೀಲ, ಎಂ.ಎಸ್. ಮರಡಿಬಣಕಾರ, ನಾಗರಾಜಪ್ಪ ಎಂ.ಎಸ್, ರೂಪ ಮುದಿಗೌಡರ ಇತರರು ಇದ್ದರು.