ಜನ ವಿರೋಧಿ ಕಾಯ್ದೆ ಜಾರಿ

JKD-25-1
Published on

ಜಮಖಂಡಿ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಎಪಿಎಂಸಿ, ಭೂ ಸುಧಾರಣೆ ಹಾಗೂ ರೈತ, ಜನ, ಕಾರ್ಮಿಕ ವಿರೋಧಿ ನೀತಿ ಕಾಯ್ದೆ ರೂಪಿಸುತ್ತಿದೆ ಎಂದು ಆರೋಪಿಸಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ನಗರದಲ್ಲಿ ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ದೇಸಾಯಿ ವೃತ್ತದಿಂದ ಮಿನಿ ವಿಧಾನಸೌಧದವರೆಗೆ ನಡೆದ ಮೆರವಣಿಗೆಯಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ತಹಸೀಲ್ದಾರ್ ಸಂಜಯ ಇಂಗಳೆ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಜಿಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ಮಾಜಿ ಉಪಾಧ್ಯಕ್ಷ ಸುಶೀಲಕುಮಾರ ಬೆಳಗಲಿ ಮಾತನಾಡಿ, ಶ್ರೀಮಂತರನ್ನು ಬೆಳೆಸಲು ಸರ್ಕಾರಗಳು ಕಾರ್ಯ ಮಾಡುತ್ತಿವೆ. ರೈತರಿಗೆ ಭದ್ರತೆ ಇಲ್ಲ. ಇದೇ ರೀತಿ ರೈತ ವಿರೋಧಿ ಕಾನೂನು ಜಾರಿಯಾದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದರು.

ಮಾದಿಗರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಂಕರ ಪೂಜಾರಿ ಮಾತನಾಡಿದರು. ಜೆಡಿಎಸ್ ಮುಖಂಡ ಗುಡುಸಾಬ ಹೊನವಾಡ, ರಾಜು ನದಾಫ್, ಚಿತ್ತರಂಜನ್ ನಾಂದ್ರೇಕರ್, ಯಲ್ಲಪ್ಪ ಹೆಗಡೆ, ಈಶ್ವರ ದಳವಾಯಿ, ಈಶ್ವರಯ್ಯ ಪೂಜಾರಿ, ಯಂಕಣ್ಣ ಬಬಲಾದಿ, ಕುಮಾರ ಆಲಗೂರ ಇತರರು ಇದ್ದರು.

ರೈತ ಸಂಘ, ಹಸಿರು ಸೇನೆ, ಅಖಿಲ ಕರ್ನಾಟಕ ಯುವಜನ ವಿದ್ಯಾರ್ಥಿ ಒಕ್ಕೂಟ, ಹಾಲುಮತ ಯುವ ಸೇನೆ ಪದಾಧಿಕಾರಿಗಳು ಕಾರ್ಯಕರ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net