

ಹನೂರು: ಜನ ಔಷಧ ಕೇಂದ್ರ ವತಿಯಿಂದ ಸಮೀಪದ ಅಜ್ಜೀಪುರ ಗ್ರಾಮದ ಜೆಎಸ್‌ಎಸ್ ಪ್ರೌಢಶಾಲೆಯಲ್ಲಿ ಸೋಮವಾರ ಜನ ಔಷಧ ದಿವಸ್ ಆಚರಿಸಲಾಯಿತು.
ಕೇಂದ್ರದ ಮುಖ್ಯಸ್ಥ ಆರ್.ಕಾಂತ ಮಾತನಾಡಿ, ಪ್ರಧಾನಮಂತ್ರಿ ಜನ ಔಷಧ ಯೋಜನೆ ಜಾರಿಯಾಗಿ 8 ವರ್ಷವಾಗಿದ್ದು, ಪ್ರತಿ ವರ್ಷ ಮಾ.1 ರಿಂದ 8ರವೆರೆಗೆ ಸಪ್ತಾಹ ಆಚರಿಸಲಾಗುತ್ತಿದೆ. ಜನರಿಗೆ ಕಡಿಮೆ ಬೆಲೆಯಲ್ಲಿ ಔಷಧವನ್ನು ಒದಗಿಸುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ ಎಂದರು.
ಇದೇ ವೇಳೆ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್ ಹಾಗೂ ಪ್ರಥಮ ಚಿಕಿತ್ಸೆ ಪೆಟ್ಟಿಗೆ ನೀಡಲಾಯಿತು. ಮುಖ್ಯ ಶಿಕ್ಷಕ ಜಯಪ್ಪ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.
ಫೋಟೋ
06 ಹನೂರು 2
ಅಜ್ಜೀಪುರ ಗ್ರಾಮದ ಜೆಎಸ್‌ಎಸ್ ಪ್ರೌಢಶಾಲೆಯಲ್ಲಿ ಜನ ಔಷಧ ದಿವಸ್ ಆಚರಿಸಲಾಯಿತು. ಕಾಂತ, ಜಯಪ್ಪ ಇತರರು ಇದ್ದರು.