

ದಾವಣಗೆರೆ: ಕಾರು ಅಪಘಾತದಲ್ಲಿ ಸಿಲುಕಿದ್ದ ಪಾಲಕರನ್ನು ರಕ್ಷಣೆ ಮಾಡಿದ ಜಗಳೂರಿನ ಪೋರ ಕೀರ್ತಿ ವಿವೇಕ್ ಎಂ. ಸಾಹುಕಾರ್, ಕೇಂದ್ರ ಸರ್ಕಾರ ನೀಡುವ ಈ ಬಾರಿಯ ಶೌರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾನೆ.
ನವದೆಹಲಿಯಲ್ಲಿ ಜನವರಿ ನಾಲ್ಕನೇ ವಾರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಣೆ ನಡೆಯಲಿದೆ ಎಂದು ಭಾರತೀಯ ಮಕ್ಕಳ ಕಲ್ಯಾಣ ಸಮಿತಿ ಪ್ರಕಟಣೆ ತಿಳಿಸಿದೆ. ಕೀರ್ತಿ, ಜಗಳೂರಿನ ಸರ್ಕಾರಿ ಶಾಲೆ ಶಿಕ್ಷಕರಾದ ಮಂಜುನಾಥ ಎಂ. ಸಾಹುಕಾರ್ ಹಾಗೂ ಶ್ರುತಿ ದಂಪತಿ ಪುತ್ರ.
ಬಾಲಕ ಕೀರ್ತಿ ಜತೆಗೆ ಪಾಲಕರು, ತಂಗಿ ಸೇರಿ ನಾಲ್ವರೂ ಜಗಳೂರು ತಾಲೂಕಿನ ಅಗಸನಹಳ್ಳಿಯ ಸುಬ್ರಮಣ್ಯ ದೇವಸ್ಥಾನಕ್ಕೆ ತೆರಳುತ್ರಿದ್ದಾಗ ಆ.21ರಂದು ಇವರಿದ್ದ ಕಾರು ಪಲ್ಟಿಯಾಗಿ ಕಂದಕಕ್ಕೆ ಬಿದ್ದಿತ್ತು. ಬಾಲಕ ಧೈರ್ಯದಿಂದ ಎಲ್ಲರನ್ನೂ ಹೊರಗೆ ತರುವಲ್ಲಿ ಯಶಸ್ಸಿಯಾಗಿದ್ದ. ಇತ್ತೀಚೆಗೆ ರಾಜ್ಯ ಸರ್ಕಾರ ಕೂಡ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಹೊಯ್ಸಳ ಪ್ರಶಸ್ತಿ ನೀಡಿ ಗೌರವಿಸಿತ್ತು.
+--