ಜಗನ್ನಾಥರಾವ್ ಆದರ್ಶ ಯುವಕರಿಗೆ ಸ್ಪೂರ್ತಿ

23 NRD-2,
Published on

ನರಗುಂದ: ಅಪ್ರತಿಮ ದೇಶಭಕ್ತ, ನರಗುಂದದ ಹಿರಿಮೆಯನ್ನು ಇಡೀ ಜಗತ್ತಿಗೆ ಪಸರಿಸಿರುವ ಜಗನ್ನಾಥರಾವ್ ಜೋಶಿ ಅವರ ಜೀವನಾದರ್ಶ ಇಂದಿನ ಪ್ರತಿಯೊಬ್ಬ ಯುವಕರಿಗೂ ಸ್ಪ್ಪೂರ್ತಿ ಹಾಗೂ ದಾರಿ ದೀಪವಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದರು.

ಪಟ್ಟಣದ ದಂಡಾಪೂರ ಬಡಾವಣೆಯ ಜಗನ್ನಾಥರಾವ್ ಜೋಶಿ ಸ್ಮಾರಕ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ದಿ. ಜಗನ್ನಾಥರಾವ್ ಜೋಶಿಯವರ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಪಾರ ದೇಶಪ್ರೇಮ, ಹಾಸ್ಯಪ್ರಜ್ಞೆ, ಅಧ್ಯಯನಶೀಲತೆ, ಸಂಘಟನಾ ಶಕ್ತಿ ಹೊಂದಿದ್ದ ಜಗನ್ನಾಥರಾವ್ ಜೋಶಿ ಅವರು ಕರ್ನಾಟಕದ ಕೇಸರಿ ಎಂಬ ಬಿರುದು ಪಡೆದಿದ್ದರು. ತಮ್ಮ ಪ್ರಖರ ಭಾಷಣಗಳ ಮೂಲಕ ಸಾವಿರಾರು ಯುವ ಕಾರ್ಯಕರ್ತರಲ್ಲಿ ದೇಶಪ್ರೇಮ ಬೆಳೆಸುವಲ್ಲಿ ಸಫಲರಾಗಿದ್ದರು ಎಂದರು. ಡಾ. ಹನುಮಂತ ಮಳಲಿ ಅವರು, ಜಗನ್ನಾಥರಾವ್ ಜೋಶಿಯವರ ವ್ಯಕ್ತಿತ್ವ, ರಾಜಕೀಯ ಪ್ರವೇಶ, ಧೈರ್ಯಶಾಲಿ ಗುಣ ಸೇರಿ ವಿವಿಧ ಸಾಧನೆಗಳ ಕುರಿತು ಮಾತನಾಡಿದರು. ಜಿ.ಬಿ. ಕುಲಕರ್ಣಿ, ಉಮೇಶಗೌಡ ಪಾಟೀಲ, ಪುರಸಭೆ ಸದಸ್ಯ ರಾಚನಗೌಡ ಪಾಟೀಲ, ಪ್ರಶಾಂತ ಜೋಶಿ, ಮಂಜುನಾಥ ಬೆಳಗಾವಿ, ಸಂಜು ನಲವಡೆ, ಮಂಜು ಮೆಣಸಗಿ, ನಾಗರಾಜ ನೆಗಳೂರ, ಸಿದ್ದೇಶ ಹೂಗಾರ, ವಿಠ್ಠಲ ಹವಾಲ್ದಾರ, ರಾಮು ಕಾಳೆ, ವಿಠ್ಠಲ ಕಾಪ್ಸೆ, ನಾಗರಾಜ ಚಿತ್ರಗಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net