

ಯಾದಗಿರಿ: ಜಗದೊಡೆಯ ವಿಶ್ವಾರಾಧ್ಯರ ಆಧ್ಯಾತ್ಮಿಕ ಬಾಳು ಬೆಳಗಿದ ತಾಯಿ ಬಸವಾಂಬೆ ಮಹಾಸ್ವಾ ಶಿರೋಮಣಿ ಎಂದು ಪೀಠಾಪತಿ ಡಾ.ಗಂಗಾಧರ ಮಹಾಸ್ವಾಮೀಜಿ ನುಡಿದರು.
ತಾಲೂಕಿನ ಅಬ್ಬೆತುಮಕೂರು ಗ್ರಾಮದ ವಿಶ್ವಾರಾಧ್ಯರ ಸಿದ್ಧ ಸಂಸ್ಥಾನ ಮಠದ ಆವರಣದಲ್ಲಿ ಜರುಗಿದ ತಾಯಿ ಬಸವಾಂಬೆ ಜಾತ್ರಾ ಮಹೋತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ವಿಶ್ವಾರಾಧ್ಯರು ಮತ್ತು ಬಸ್ಸಮ್ಮ ತಾಯಿ ಸಂಸಾರದಲ್ಲಿದ್ದರೂ ಅವರು ಎಂದು ಸಂಸಾರವನ್ನು ಸಂಪಕರ್ಿಸಿಕೊಳ್ಳಲಿಲ್ಲ. ಜಲ ಪತ್ರದ ಮೇಲಿನ ಬಿಂದುವಿನಂತೆ ನಶ್ವರವಾದ, ಭೋಗಮಯ ಬದುಕನ್ನು ನಂಬದೇ ಪಾರಮಾಥರ್ಿಕ ಬದುಕನ್ನು ಬಾಳಿ ಈ ಜಗವನ್ನು ಉದ್ದರಿಸಿದ ಮಹಾ ಮಹಿಮ ವಿಶ್ವಾರಾಧ್ಯರ ಪತ್ನಿ ಬಸ್ಸಮ್ಮ ತಾಯಿಯ ಜಾತ್ರೆಯಲ್ಲಿ ಪಾಲ್ಗೊಂಡ ಎಲ್ಲ ಭಕ್ತರು ಪುಣ್ಯವಂತರಾಗಿದ್ದಾರೆ ಎಂದರು.
ಇದಕ್ಕೂ ಮುನ್ನ ಶ್ರೀಶ್ವಾರಾಧ್ಯರು ಮತ್ತು ಬಸ್ಸಮ್ಮ ತಾಯಿ ಅವರ ಮೂತರ್ಿಗಳ ಮೆರವಣಿಗೆ ಹಲಗೆ, ಡೊಳ್ಳು, ಬಾಜಾ ಭಜಂತ್ರಿ ಮತ್ತು ಸುಮಂಗಲಿಯರ ಕಳಸದೊಂದಿಗೆ ಪುರವಂತರ ಸೇವೆಯ ಮಧ್ಯೆ ಶ್ರೀಮಠದ ಆವರಣದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು.
ನಂತರ ಬಸ್ಸಮ್ಮ ತಾಯಿಯ ರಥೋತ್ಸವ ವೈಭವದಿಂದ ಜರುಗಿತು. ಭಕ್ತರು ಕಾರಿಕು, ಉತ್ತತ್ತಿ ಹಾಗೂ ಬಾಳೆ ಹಣ್ಣುಗಳನ್ನು ಭಕ್ತಿಯಿಂದ ರಥಕ್ಕೆ ಎಸೆದು ಕೃತಾರ್ಥರಾದರು. ನಂತರ ವಿಶ್ವಾರಾಧ್ಯರು ಮತ್ತು ಬಸ್ಸಮ್ಮ ತಾಯಿಯವರ ಕಲ್ಯಾಣ ಮಹೋತ್ಸವ ಜರುಗಿತು.
ರಥೋತ್ಸವ ಪೂಜೆಯನ್ನು ಚನ್ನಪ್ಪಗೌಡ ಮೋಸಂಬಿ ನೆರವೇರಿಸಿದರು. ಕಾಡಂಗೇರಾ ಸದ್ಬಕ್ತ ಮಂಡಳಿಯವರು ಪ್ರಸಾದ ಸೇವೆಯನ್ನು ಮಾಡಿದರು. ಐಕೂರು ಭಜನಾ ಮಂಡಳಿಯಿಂದ ಆಹೋರಾತ್ರಿ ಭಜನಾ ಕಾರ್ಯಕ್ರಮ ನೆರವೇರಿತು. ಜಾತ್ರಾಮಹೋತ್ಸವದ ನಂತರ ಕೈ ಕುಸ್ತಿಗಳು ನಡೆದವು. ಕೈ ಕುಸ್ತಿಯಲ್ಲಿ 3 ಜನರನ್ನು ಗೆದ್ದವರಿಗೆ ತೆಂಗಿನಕಾಯಿ, 5 ಜನರನ್ನು ಗೆದ್ದವರಿಗೆ ಬೆಳ್ಳಿಯ ಕಡಗವನ್ನು ತೊಡಿಸಿ ಗೌರವಿಸಲಾುತು. ಶ್ರೀಮಠದ ಶಿವಶೇಖರ ಸ್ವಾಮಿಗಳು, ನರಸಣ್ಣಗೌಡ ರಾಯಚೂರ, ಡಾ.ಸುಭಾಷಚಂದ್ರ ಕೌಲಗಿ, ವಿಶ್ವನಾಥ ಶಿರವಾರ ಇದ್ದರು.