ಜಗತ್ತಿನೆಲ್ಲೆಡೆ ಭಾರತದ ಕೀರ್ತಿ ಪಸರಿಸಿದ ವಿವೇಕಾನಂದರು

12arsph1ep
Published on

ಅರಸೀಕೆರೆ: ಭಾರತೀಯ ಸನಾತನ ಸಂಸ್ಕೃತಿ ಹಾಗೂ ಪರಂಪರೆಯನ್ನು ಜಗತ್ತಿನೆಲ್ಲೆಡೆ ಪಸರಿಸಿದ ಕೀರ್ತಿ ದಾರ್ಶನಿಕ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ ಎಂದು ಬಿಜೆಪಿ ಮುಖಂಡ ಎನ್.ಆರ್.ಸಂತೋಷ್ ಬಣ್ಣಿಸಿದರು.


ಬಿಜೆಪಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ 160ನೇ ಜಯಂತಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಜೀವನದಲ್ಲಿ ಸಚ್ಚಾೃರಿತ್ರೃ ರೂಪಿಸಿಕೊಳ್ಳುವ ಗುರುತರ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂಬುದನ್ನು ಮರೆಯಬಾರದು. ಸ್ನೇಹ, ಭ್ರಾತೃತ್ವ, ಸೌಹಾರ್ದತೆಯ ಸಂದೇಶ ನೀಡಿದ ಧೀಮಂತ ವ್ಯಕ್ತಿಯ ಉಪದೇಶಗಳನ್ನು ಆದರ್ಶವಾಗಿ ಸ್ವೀಕರಿಸಿದರೆ ಸಾರ್ಥಕ ಜೀವನ ನಡೆಸಬಹುದು. ಶಿಕ್ಷಣ ತಜ್ಞ ವೀರ ಸನ್ಯಾಸಿಯಾಗಿ ಧಾರ್ಮಿಕ ಪರಂಪರೆ, ಸಂಸ್ಕೃಯನ್ನು ವಿಶ್ವಕ್ಕೆ ಪರಿಚಯಿಸುವ ಮೂಲಕ ಇಂದಿನ ಯುವ ಜನತೆ ಹಾಗೂ ಮಠಾಧೀಶರಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಯುವ ಜನತೆ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.

ಮುಖಂಡರಾದ ಮಹೇಂದ್ರಕುಮಾರ್, ಲಾಳನಕೆರೆ ಯೋಗೀಶ್ ರಂಗನಾಥ್, ಶಿವು, ಕಾಟೀಕೆರೆ ಮೋಹನ್, ಡಾಬಾ ರಘು, ಮಹೇಂದ್ರಕುಮಾರ್, ಲೋಕೇಶ್, ಮಂಜು ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net