ಹೊಸಪೇಟೆ: ಪೌರಾಕಾರ್ಮಿಕರು ಇದ್ದರೆ ಮಾತ್ರ ಊರು ಸ್ವಚ್ಛ ಆಗುತ್ತದೆ. ಈ ಕಾರ್ಯ ಯಾರಿಂದಲೂ ಸಾದ್ಯವಿಲ್ಲ ಎಂದು ಶಾಸಕ ಎಚ್.ಆರ್.ಗವಿಯಪ್ಪ ಹೇಳಿದರು.
ರಾಜ್ಯಪೌರ ನೌಕರರ ಸಂಘ, ನಗರಸಭೆಯಿಂದ ಇಲ್ಲಿನ ನಗರಸಭೆ ಕಚೇರಿ ಆವರಣದಲ್ಲಿ ಮಂಗಳವಾರ ನಡೆದ ಪೌರಾಕಾರ್ಮಿಕ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಪೌರಾಕಾರ್ಮಿಕರು ಅರಲ್ಲೂ ಮಾದಿಗರಲ್ಲಿ ಇರುವ ಸೇವಾ ಭಾವನೆ ಯಾವ ಜಾತಿಯಲ್ಲಿ ಇಲ್ಲ. ತಮ್ಮ ಆರೋಗ್ಯ ಲೆಕ್ಕಿಸದೇ ನಗರ ಸ್ವಚ್ಛ ಮಾಡುತ್ತಾರೆ. ಆದ್ದರಿಂದ ಮಾದಿಗರು ವಿಶ್ವದ್ಲೇ ಶ್ರೇಷ್ಠರು. ಅವರ ಸೇವೆ ಸಮಾಜಕ್ಕೆ ಬಾರಿ ಅವಶ್ಯಕತೆಯಿದೆ. ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದ್ದು, 15 ದಿನಗಳ ಕಾಲ ನಡೆಯುತ್ತದೆ. ಸಮೀಕ್ಷೆಯಲ್ಲಿ ಪ್ರತಿಯೊಬ್ಬರು ಭಾಗವಹಿಸಿ. ಸಮುದಾಯದ ಅಭಿವೃದ್ಧಿಗಾಗಿ ಈ ಸುವರ್ಣವಕಾಶ ಬಳಸಿಕೊಳ್ಳಿ. 157 ಮನೆಗಳು ಅನುಮೋದನೆಯಾಗಿವೆ ಮುಂದಿನ ದಿನಗಳಲ್ಲಿ ಹಮಚಿಕೆ ಆಗಲಿವೆ ಎಂದರು.
ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ್ ಮಾತನಾಡಿ, ನಗರದಲ್ಲಿ 80 ಎಕರೆ ಜಾಗವನ್ನು ಮೀಸಲಿರಿಸಿದ್ದೇವೆ. ಆದ್ದರಿಂದ ಅಲ್ಲಿ ಎಲ್ಲ ಪೌರಾಕಾರ್ಮಿಕರಿ ನಿವೇಶನ ಜತೆ ಮನೆಗಳು ನಿರ್ಮಾಣ ಮಾಡಬೇಕಿದೆ. ಮುಂದಿನ ಬಾರಿ ಪೌರಾಕಾರ್ಮಿಕ ದಿನಾಚರಣೆ ಆಚರಣೆ ಮಾಡೋಣ ಎಂದರು.
ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಎಸ್ಪಿ ಎಸ್.ಜಾಹ್ನವಿ, ಎಚ್.ಎನ್.ಎಫ್.ಇಮಾಮ್ ನಿಯಾಜಿ, ನಗರಸಭೆ ಉಪಾಧ್ಯಕ್ಷ ರಮೇಶ್ ಗುಪ್ತ, ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಶಂಕ್ರಿ, ಪಿಡಿ ಮನೋಹರ್, ಪೌರಾಯುಕ್ತ ಶಿವಕುಮಾರ್ ಎರಗುಡಿ ಇತರರಿದ್ದರು.
ಪೌರಾಕಾರ್ಮಿಕರ ದಿನಾಚರಣೆ ನಿಮಿತ್ತ ನಗರದ ಅಂಬೇಡ್ಕರ್ ವೃತ್ತದಿಂದ ನಗರಸಭೆ ವರೆಗೆ ಮೆರವಣಿಗೆ ನಡೆಯಿತು. ಅತಿಥಿಗಳ ಆಗಮನ ವಿಳಂಬದಿAದ ವೇದಿಕೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಉದ್ಘಾಟನೆ ಮುನ್ನ ಮಳೆ ಬಂದು ಅಸ್ತವ್ಯಸ್ತವಾಯಿತು. ತರಾತುರಿಯಲ್ಲಿ ಕಾರ್ಯಕ್ರಮ ನಡೆಯಿತು. ಪೌರಾಕಾರ್ಮಿಕರಿಗೆ ಮಳೆಯಲ್ಲೇ ಊಟ ಮಾಡಿದ್ದು ಕಂಡು ಬಂತು.