ಜಗತ್ತಿನಲ್ಲಿ ಶ್ರೇಷ್ಠವಾದದ್ದು ರಕ್ತದಾನ

27 NRD-2
Published on

ನರಗುಂದ: ರಕ್ತದಾನ ಮಾಡುವುದರಿಂದ ಮನುಷ್ಯನ ಆರೋಗ್ಯ ವೃದ್ಧಿಸುವ ಜತೆಗೆ ಆತನ ದೈನಂದಿನ ಚಟುವಟಿಕೆ ಅತ್ಯಂತ ಕ್ರೀಯಾಶೀಲವಾಗಿರಲು ಸಹಕಾರಿಯಾಗುತ್ತದೆ ಎಂದು ಗುಡ್ಡದ ಹಿರೇಮಠದ ಸಿದ್ಧ್ದಲಿಂಗ ಶಿವಾಚಾರ್ಯರು ಹೇಳಿದರು.

ಪಟ್ಟಣದ ಗುಡ್ಡದಹಿರೇಮಠದ ಶ್ರೀ ಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹುಬ್ಬಳ್ಳಿಯ ರಾಷ್ಟ್ರೋತ್ಥಾನ ರಕ್ತದಾನ ಕೇಂದ್ರದ ಸಹಯೋಗದಲ್ಲಿ ಶ್ರೀಮಠದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿ ಬಳಿಕ ಅವರು ಮಾತನಾಡಿದರು. ಜಗತ್ತಿನ ಶ್ರೇಷ್ಠ ದಾನ ರಕ್ತದಾನ. ವ್ಯಕ್ತಿಯೊಬ್ಬ ರಕ್ತದಾನ ಮಾಡುವುದರಿಂದ ಮೂವರಿಗೆ ಜೀವದಾನ ಕಲ್ಪಿಸಿದಂತಾಗುತ್ತದೆ ಎಂದರು.

ಒಟ್ಟು 75 ಜನರು ರಕ್ತದಾನ ಮಾಡಿದರು. ತುಪ್ಪದ ಕುರಹಟ್ಟಿಯ ಪಂಡಿತ ವಾಗೀಶ ಪಂಡಿತಾರಾಧ್ಯ ಸ್ವಾಮಿಗಳು, ರಾಷ್ಟ್ರೋತ್ಥಾನ ರಕ್ತದಾನ ಶಿಬಿರದ ಡಾ. ಗೋಪಾಲ ದೇಸಾಯಿ, ಡಾ. ಭಾರತಿ ಕಲಹಾಳ, ಡಾ. ಜ್ಯೋತೆನ್ನವರ, ನೀಲಕಂಠ ಅಲ್ಲಪ್ರಭುಮಠ, ಚನ್ನಬಸಪ್ಪ ಕಂಠಿ, ಶರಣು ಪಿಡ್ನಾಯ್ಕರ, ಮಂಜು ಹಿರೇಮಠ, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net