ಜಗತ್ತಿಗೆ ಬೆಳಕು ನೀಡಿದ ವಾಲ್ಮೀಕಿ ರಾಮಾಯಣ

Published on

ಚಾಮರಾಜನಗರ: ಆದಿಕವಿ ವಾಲ್ಮೀಕಿ ಅವರಿಂದ ಸೃಷ್ಟಿಯಾದ ರಾಮಾಯಣ ಒಂದು ಶ್ರೇಷ್ಠ ಮಹಾಕಾವ್ಯವಾಗಿದ್ದು, ಜಗತ್ತಿಗೆ ಬೆಳಕು ನೀಡಿದ ಮಹಾಕಾವ್ಯವಾಗಿದೆ ಎಂದು ನಿವೃತ್ತ ಪ್ರೌಢಶಾಲಾ ಶಿಕ್ಷಕ ಶಿವಣ್ಣ ಇಂದ್ವಾಡಿ ಹೇಳಿದರು.

ನಗರದ ರೋಟರಿ ಭವನದಲ್ಲಿ ರೋಟರಿ ಸಂಸ್ಥೆಯ ವತಿಯಿಂದ ಪ್ರತಿ ಮಂಗಳವಾರದ ವಿಶೇಷ ಸಭೆಯಲ್ಲಿ ಭುವದ ಭಾಗ್ಯ ವಾಲ್ಮೀಕಿ ಲೋಕದ ಬೆಳಕು ರಾಮಾಯಣ ಕುರಿತು ಉಪನ್ಯಾಸ ನೀಡಿದರು. ಶತಶತಮಾನದಿಂದ ರಾಮಾಯಣ ಸುತ್ತಾಡಿದ ದೇಶಗಳಿಲ್ಲ. ಇಂಡೋನೇಷಿಯಾ, ಮಲೇಷಿಯಾ, ಶ್ರೀಲಂಕಾ ಅಲ್ಲೆಲ್ಲ ಹೋದರೆ ನೀವು ರಾಯಾಯಣ ಕುರುಹು, ಚಿಹ್ನೆಗಳನ್ನು ಕಾಣುತ್ತೇವೆ. ರಾಮಾಯಣದ ಮಹಾಕಾವ್ಯದ ಮೇಲೆ ನಡೆದಂತಹ ಸಂಶೋಧನೆಗಳು, ಅದರ ಮೇಲೆ ಬರೆದಂತಹ ಮಹಾಪ್ರಬಂಧಗಳು, ಅದರ ಮೇಲೆ ರಚನೆಗೊಂಡ ಕೀರ್ತನೆಗಳು, ಅದರ ಮೇಲೆ ಹಾಡಿದಂತಹ ಹಾಡುಗಳು, ವಿರಚಿತ ಕಾವ್ಯಗಳು, ನಟಸಿದ ನಾಟಕಗಳು, ಆಡಿದ ನಾಟಕಗಳು ಒಂದ, ಎರಡೇ ಎಂದರು.

ಭಾರತೀಯ ಸಂಸ್ಕೃತಿಯ ಉದಾತ್ತತೆಯನ್ನು ಒದಗಿಸಿಕೊಟ್ಟ ಒಂದು ಗ್ರಂಥ ವಾಲ್ಮೀಕಿ ಅವರು ರಾಯಾಯಣದಲ್ಲಿ ರಾಮ, ಸೀತೆ, ಲಕ್ಷ್ಮಣ, ಹನುಮಂತನಿಗೆ ಎಷ್ಟು ಪ್ರಾಮುಖ್ಯತೆ ಕೊಟ್ಟರು ಅಷ್ಟೆ ಪ್ರಾಮುಖ್ಯತೆಯನ್ನು ಅಲ್ಲಿ ಬರುವಂತಹ ಸಣ್ಣಸಣ್ಣ ಪಾತ್ರಗಳಿಗೆ ಕೊಟ್ಟಿದ್ದಾರೆ. ಸೇವೆ ಮಾಡುವ ಅವಕಾಶ ಸಿಕ್ಕಿದಾಗ ಅದನ್ನು ಬಳಸಿಕೊಳ್ಳಬೇಕು. ಆದಿಕವಿ ಮಹರ್ಷಿ ವಾಲ್ಮೀಕಿ ಅವರು ಅಂದು, ಇಂದು, ಮುಂದೆ ಜಗತ್ತಿನಲ್ಲಿ ಪರ್ವತಗಳು, ನದಿಗಳು ಸೇರಿದಂತೆ ಎಲ್ಲವೂ ಇರುವ ತನಕ ರಾಮಾಯಣ ಇರುತ್ತೆ ಎಂದು ಕವಿಗಳು ಹೇಳಿದ್ದಾರೆ. ಅಧ್ಯಕ್ಷತೆ ವಹಿಸಿದ್ದ ರೋಟರಿ ಸಂಸ್ಥೆ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಆದಿಕವಿ ವಾಲ್ಮೀಕಿ ಅವರು ರಾಮಾಯಣ ಬರೆದು ಜಗತ್ತಿಗೆ ಪರಿಚಯ ಮಾಡಿಕೊಟ್ಟಿದ್ದಾರೆ. ರಾಮಾಯಣ ಮಹಾಕಾವ್ಯ ಎಲ್ಲಕಾಲಕ್ಕೂ ಪ್ರಸ್ತುತ ವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಅಂಕಶೆಟ್ಟಿ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net