ಜಗತ್ತಿಗೆ ಐಕ್ಯತೆ ಸಂದೇಶ ಸಾರೋಣ

09-08 AFZ-1
ಅಫಜಲಪುರದ ಮಳೇಂದ್ರ ಮಠದಲ್ಲಿ ಬಿಜೆಪಿಯಿಂದ ಆಯೋಜಿಸಿದ್ದ ಹರ್ ಘರ್ ತಿರಂಗಾ ಅಭಿಯಾನಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್ ಚಾಲನೆ ನೀಡಿದರು. ಶಿವರಾಜ ಪಾಟೀಲ್ ರದ್ದೇವಾಡಗಿ, ಶೈಲೇಶ ಗುಣಾರಿ ಇತರರಿದ್ದರು.
Published on

ಅಫಜಲಪುರ (ಕಲಬುರಗಿ): ಸ್ವಾತಂತ್ರೃದ ಅಮೃತ ಮಹೋತ್ಸವ ಹಬ್ಬದ ರೀತಿಯಲ್ಲಿ ಅಭಿಮಾನ ಪೂರ್ವಕವಾಗಿ ಆಚರಿಸಿ, ಇಡೀ ಜಗತ್ತಿಗೆ ಐಕ್ಯತೆ ಸಂದೇಶವನ್ನು ಸಾರೋಣ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್ ಕರೆ ನೀಡಿದರು.

ಪಟ್ಟಣದ ಮಳೇಂದ್ರ ಮಠದಲ್ಲಿ ಬಿಜೆಪಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಇದು ಬಿಜೆಪಿಯ ಅಭಿಯಾನವಲ್ಲ. ರಾಷ್ಟ್ರ ಪ್ರೇಮ ತೋರ್ಪಡಿಸುವ ಉತ್ಸವವಾಗಿದೆ. ದೇಶದ ಸ್ವಾತಂತ್ರೃಕ್ಕಾಗಿ ಹೋರಾಡಿದ ವೀರರ ಜೀವನದ ಕುರಿತು ಎಲ್ಲರಿಗೂ ತಿಳಿಸಿ ಪ್ರೇರೇಪಿಸಬೇಕಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ ಮಾತನಾಡಿ, ಹರ್ ಘರ್ ತಿರಂಗಾ ಅಭಿಯಾನದ ಮೂಲಕ ಇಡೀ ದೇಶದ ಮನೆಗಳ ಮೇಲೆ ರಾಷ್ಟ್ರ ಧ್ವಜ ಹಾರಿಸುತ್ತಿರುವುದು ಎಲ್ಲರಿಗೂ ಹೆಮ್ಮೆಯ ಸಂಗತಿ. ಧ್ವಜದ ಪಾವಿತ್ರೃವನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.

ತಾಲೂಕು ಅಧ್ಯಕ್ಷ ಶೈಲೇಶ ಗುಣಾರಿ, ಪ್ರಮುಖರಾದ ಅಶೋಕ ಬಗಲಿ, ಅವ್ವಣ್ಣ ಮ್ಯಾಕೇರಿ, ಸಿದ್ದಯ್ಯ ಆಕಾಶಮಠ, ನಾಗಪ್ಪ ಕೊಳ್ಳಿ, ರಾಜಶೇಖರ ಕೋಟೆ, ಬೀರಣ್ಣ ಕಲ್ಲೂರ, ಅರವಿಂದ ಹಾಳಕಿ, ಶ್ರೀಶೈಲ ಬಳೂರಗಿ, ಚನ್ನಮ್ಮ ಪಾಟೀಲ್, ನಬಿಲಾಲ ಮಾಶಾಳಕರ, ವಿನೋದ ರಾಠೋಡ್, ಮಂಜೂರ ಅಗರಖೇಡ, ಶರಣು ಪದಕಿ ಇತರರಿದ್ದರು.

ದೇಶದಲ್ಲಿ ಕಾಂಗ್ರೆಸ್ ಹೈಕಮಾಂಡ್ ವೀಕ್ ಆಗಿದೆ. ರಾಜ್ಯದಲ್ಲಿ ಬಿಜೆಪಿ ಸದೃಢವಿದ್ದು, ಮುಂದಿನ ಚುನಾವಣೆಯಲ್ಲಿ 150ಕ್ಕೂ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಕ್ಷೇತ್ರದಲ್ಲಿ ಪಕ್ಷ ಸೂಚಿಸಿದ ಅಭ್ಯರ್ಥಿಗೆ ಎಲ್ಲರೂ ಒಪ್ಪಿಕೊಂಡು ಗೆಲುವಿಗೆ ಶ್ರಮಿಸಬೇಕು.
| ಮಾಲೀಕಯ್ಯ ಗುತ್ತೇದಾರ್, ಬಿಜೆಪಿ ರಾಜ್ಯ ಉಪಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net