

ತುಮಕೂರು: ಅಶಾಂತಿಯಿಂದ ತತ್ತರಿಸುತ್ತಿರುವ ಜೀವ ಜಗತ್ತಿಗೆ ಅಧ್ಯಾತ್ಮದ ಚಿಂತನ ಮುಖ್ಯ ಎಂದು ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
ನಗರದ ವಿಶಾಲಾಕ್ಷಮ್ಮ ಸದಾಶಿವಯ್ಯ ಸಭಾಭವನದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಸೇವಾ ಟ್ರಸ್ಟ್ ಆಶ್ರಯದಲ್ಲಿ ಜನ ಜಾಗೃತಿ ಧರ್ಮ ಸಮಾರಂಭದ 3ನೇ ದಿನದ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಈ ನಾಡಿನ ಧರ್ಮ ಪೀಠಗಳು, ಮಠಮಾನ್ಯಗಳು ಉತ್ಕಷ್ಟ ಸಂಸತಿ ಬೆಳೆಸುವ ನಿಟ್ಟಿನಲ್ಲಿ ಬಹುದೊಡ್ಡ ಕೊಡುಗೆಯನ್ನು ಸಮಾಜಕ್ಕೆ ಕೊಟ್ಟಿವೆ ಎಂದು ಬಣ್ಣಿಸಿದರು. ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿಯೆಂದು ಶ್ರೀ ಜಗದ್ಗುರು ರಂಭಾಪುರಿ ಪೀಠವು ನಿರೂಪಿಸಿದೆ. ಇಂತಹ ಅಮೂಲ್ಯ ಸಂದೇಶ ಸಾರಿದ ರಂಭಾಪುರಿ ಪೀಠದ ಘೋಷಣೆ ಸಮಾಜ ಮರೆಯುವಂತಿಲ್ಲ. ಧರ್ಮ ಜಾಗೃತಿ ಜತೆಗೆ ಶಾಂತಿ ಸೌಹಾರ್ದತೆಯನ್ನು ಸಮಾಜದಲ್ಲಿ ಸಾರುವ ರಂಭಾಪುರಿ
ಶ್ರೀಗಳ ಸೇವೆ ಅನನ್ಯ ಎಂದರು.
ಭೌತಿಕ ಬದುಕಿಗೆ ಸಂಸತಿ ಮುಖ್ಯ: ಮಾನವ ಜೀವನದಲ್ಲಿ ಧೈರ್ಯ ಮತ್ತು ಚಲನಶೀಲತೆ ಮುಖ್ಯ. ಭೌತಿಕ ಬದುಕಿಗೆ ಸಂಪತ್ತಷ್ಟೇ ಮುಖ್ಯವಲ್ಲ. ಸಂಸತಿ ಮುಖ್ಯ. ಆಧುನಿಕತೆ ಮತ್ತು ವೈಚಾರಿಕತೆಯಲ್ಲಿ ಭಾರತೀಯ ಉತ್ಕಷ್ಟ ಸಂಸತಿ ನಾಶಗೊಳ್ಳಬಾರದೆಂದು ಬಾಳೆಹೊನ್ನೂರು ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಗಳು ಹೇಳಿದರು.
ಜಗತ್ತು ಮತ್ತು ಜನ ಎಷ್ಟೇ ಬದಲಾದರೂ ಮಾನವ ಸಂಬಂಧಗಳು ಸಡಿಲಗೊಳ್ಳಬಾರದು. ಬಾಂಧವ್ಯ ಸಂಬಂಧಗಳನ್ನು ಮರೆತರೆ ಮನುಷ್ಯನಿಗೂ ಯಂತ್ರಕ್ಕೂ ಯಾವುದೇ ವ್ಯತ್ಯಾಸ ಇರುವುದಿಲ್ಲ. ವ್ಯಕ್ತಿಗೆ ಕೊಳೆ ಅಂಟಿದರೆ ಶುದ್ಧ ಮಾಡಬಹುದು. ಆದರೆ, ವ್ಯಕ್ತಿತ್ವ ಕೊಳಕಾಗಿದ್ದರೆ ತೊಳೆಯುವುದು ಕಷ್ಟ. ಮಾನವನ ಉಸಿರಾಟಕ್ಕೆ ಗಾಳಿ ಎಷ್ಟು ಮುಖ್ಯವೋ ಅಷ್ಟೇ ಜೀವನ ಉಜ್ವಲ ಭವಿಷ್ಯಕ್ಕೆ ಧಮಾರ್ಚಾರ್ಯರ ಮಾರ್ಗದರ್ಶನ ಮುಖ್ಯವಾಗಿದೆ ಎಂದರು. ಬಳ್ಳಾರಿಯ ಡಾ. ಚಿಕ್ಕ್ಯಾಟಿ ಮಠದ ವೀರಭದ್ರಯ್ಯನವರು ವೀರಶೈವ ಧರ್ಮದ ಪ್ರಾಚಿನತ್ವ ಕುರಿತು ಉಪನ್ಯಾಸ ನೀಡಿದರು. ಶಿವಗಂಗೆ ಹೊನ್ನಮ್ಮ ಗವಿಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಉಪದೇಶ ನೀಡಿದರು. ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯರು ನೇತೃತ್ವವಹಿಸಿದ್ದರು.ತೆವಡೇಹಳ್ಳಿ ಶ್ರೀ ಗೋಸಲ ಚನ್ನಬಸವೇಶ್ವರ ಶಿವಾಚಾರ್ಯ, ಅಂಬಲದೇವರಹಳ್ಳಿ ಮಠದ ಶ್ರೀ ಉಜ್ಜನಿಶ್ವರ ಶಿವಾಚಾರ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಎಸ್.ರವಿಶಂಕರ್, ಟ್ರಸ್ಟ್ ಅಧ್ಯಕ್ಷ ಟಿ.ಆರ್.ಸದಾಶಿವಯ್ಯ, ಮುಖಂಡರಾದ ಎನ್.ನಂಜುಂಡೇಶ್, ಎಸ್.ಜಿ.ಚಂದ್ರಮೌಳಿ, ಸಿದ್ಧಗಂಗಾ ರುದ್ರೇಶ್ ಉಪಸ್ಥಿತರಿದ್ದರು. ಡಿ.ಆರ್.ಸತೀಶ್ ಸ್ವಾಗತಿಸಿದರು. ಟಿ.ಎಸ್.ಕರುಣಾರಾಧ್ಯ ಕಾರ್ಯಕ್ರಮ ನಿರೂಪಿಸಿದರು. ಧನುಮಾರ್ಸದ ಅಂಗವಾಗಿ ಪ್ರಾತ@ಕಾಲ ರಂಭಾಪುರಿ ಜಗದ್ಗುರುಗಳವರ ಇಷ್ಟಲಿಂಗ ಮಹಾಪೂಜೆ ಜರುಗಿತು.
ಗುರುರಕ್ಷೆ : ವಿದ್ಯಾವಾಹಿನಿ ಶಿಕ್ಷಣ ಸಮೂಹ ಸಂಸ್ಥೆಯ ಕಾರ್ಯದರ್ಶಿ ಎನ್.ಬಿ.ಪ್ರದಿಪಕುಮಾರ್, ವೀರಶೈವ ಸಮಾಜದ ಅತ್ತಿರೇಣುಕಾನಂದ, ಕೆ.ಮಲ್ಲಿಕಾರ್ಜುನಯ್ಯ, ಎ.ಆರ್.ದಶರಥ, ಎಸ್.ಎಸ್.ಆರಾಧ್ಯ, ಡಾ.ರಾಜೇಂದ್ರ ಮೂಗಿ, ಎಎಸ್ಪಿ ವಿ.ಮರಿಯಪ್ಪ ಮೊದಲಾದ ಗಣ್ಯರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಶುಭ ಹಾರೈಸಿದರು.
ಭೌತಿಕ ಬದುಕು ಸಮೃದ್ಧ ಗೊಂಡಂತೆ ಆಂತರಿಕ ಬದುಕು ಪರಿಶುದ್ಧಗೊಳ್ಳಬೇಕಾದುದು ಅವಶ್ಯಕ. ಯುವಶಕ್ತಿ ದೇಶದ ಬಲು ದೊಡ್ಡ ಶಕ್ತಿ ಮತ್ತು ಆಸ್ತಿ. ಯುವ ಜನಾಂಗ ತಾತ್ವಿಕ ಚಿಂತನೆಗಳ ಮೂಲಕ ಸುಖ ಶಾಂತಿ ಪಡೆಯಬೇಕೆಂದು ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ. ಈ ನಿಟ್ಟಿನಲ್ಲಿ ಯುವಜನತೆ ಆಧ್ಯಾತ್ಮಿಕ, ಧಾರ್ಮಿಕತೆಯತ್ತ ಒಲವು ತೋರಬೇಕು.| ಡಾ.ವೀರಸೋಮೇಶ್ವರ ಜಗದ್ಗುರುಗಳು