ಜಕಾತಿ ವಸೂಲಾತಿ ರದ್ದುಗೊಳಿಸಲು ಆಗ್ರಹ

Vijayasene
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.6333333, 0.40017858);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 41;
Published on

ಚಿತ್ರದುರ್ಗ: ನಗರದ ಬೀದಿಬದಿ ವ್ಯಾಪಾರಿಗಳ ಬಳಿ ಮನಸೋ ಇಚ್ಛೆ ಜಕಾತಿ ವಸೂಲಿ ಮಾಡುತ್ತಿದ್ದು, ಕೂಡಲೇ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಕರುನಾಡ ವಿಜಯಸೇನೆ ಕಾರ್ಯಕರ್ತರು ನಗರಸಭೆ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಿದರು.

ಹೂವು, ಹಣ್ಣು, ತರಕಾರಿ, ಸೊಪ್ಪು ಹೀಗೆ ಯಾವ್ಯಾವ ವ್ಯಾಪಾರಸ್ಥರಿಂದ ಎಷ್ಟು ಜಕಾತಿ ವಸೂಲು ಮಾಡಬೇಕೆಂಬ ನಾಮಫಲಕ ಎಲ್ಲಿಯೂ ಅಳವಡಿಸಿಲ್ಲ. ಹೆಚ್ಚಿಗೆ ಪಡೆದರೆ, ಬೀದಿಬದಿ ವ್ಯಾಪಾರ ನಂಬಿ ಬದುಕುವವರ ಸ್ಥಿತಿ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಪೌರಾಯುಕ್ತರಿಗೆ ಮನವರಿಕೆ ಮಾಡಿದರು.

ಜಕಾತಿ ವಸೂಲು ಮಾಡದಂತೆ ಡಿಸಿ ಅವರೇ ಸೂಚಿಸಿದ್ದರೂ ಇನ್ನೂ ನಿಂತಿಲ್ಲ. ಹೆಚ್ಚಿಗೆ ಪಡೆದವರ ವಿರುದ್ಧ ಕ್ರಮ ಕೈಗೊಂಡಿಲ್ಲ. ಕೂಡಲೇ ಜಕಾತಿ ವಸೂಲಾತಿಯನ್ನೇ ಸ್ಥಗಿತಗೊಳಿಸಬೇಕು ಎಂದು ಕೋರಿದರು.

ಸಂಘಟನೆ ಆಧ್ಯಕ್ಷ ಕೆ.ಟಿ.ಶಿವಕುಮಾರ್, ಪದಾಧಿಕಾರಿಗಳಾದ ಗೋಪಿನಾಥ್, ಮಧು, ಜಗದೀಶ್, ಅಖಿಲೇಶ್, ಶಶಿ, ಬಾಬು, ರತ್ನಮ್ಮ, ಮುಜಾಹಿದ್, ಅವಿನಾಶ್, ನಾಗೇಶ್, ತಿಪ್ಪೇಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net