ಜಂಬೂಸವಾರಿಯಲ್ಲಿ ಎರಡು ಸ್ತಬ್ಧಚಿತ್ರಗಳು

3
Published on

ಮೈಸೂರು : ವಿಶ್ವವಿಖ್ಯಾತ ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಕೇವಲ ಎರಡು ಸ್ತಬ್ಧಚಿತ್ರಗಳು ಮಾತ್ರ ಪಾಲ್ಗೊಳ್ಳಲಿವೆ.
ಸರಳ ದಸರಾ ಆಚರಣೆ ಹಿನ್ನೆಲೆಯಲ್ಲಿ 2 ಸ್ತಬ್ಧಚಿತ್ರಗಳಿಗೆ ಮಾತ್ರ ಮಿತಿಗೊಳಿಸಲಾಗಿದ್ದು ಅ.26ರಂದು ನಡೆಯುವ ವಿಜಯದಶಮಿ ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮೈಸೂರು ಅರಮನೆಯ ವೈಭವ ತಿಳಿಸುವ ಸ್ತಬ್ಧಚಿತ್ರ ಹಾಗೂ ಆರೋಗ್ಯ ಇಲಾಖೆಯ ಕೋವಿಡ್-19ಗೆ ಸಂಬಂಧಿಸಿದ ಸ್ತಬ್ಧಚಿತ್ರ ಇರಲಿವೆ. ಇವುಗಳ ತಯಾರಿ ಭರದಿಂದ ಸಾಗಿದೆ.
ಕರೊನಾ ಸೇನಾನಿಗಳ ಸಾಧನೆಯನ್ನು ಸ್ತಬ್ಧಚಿತ್ರದಲ್ಲಿ ಪ್ರತಿಬಿಂಬಿಸಲಾಗುತ್ತಿದೆ. ಸಾರ್ವಜನಿಕರಿಗೆ ಕೋವಿಡ್ ಕುರಿತು ಜಾಗೃತಿ ಮೂಡಿಸಲು ಇದನ್ನು ರಚಿಸಲಾಗಿದೆ. ಈ ಬಾರಿ ಜಂಬೂ ಸವಾರಿಯು ಅರಮನೆ ಆವರಣದಲ್ಲಿಯೇ ಕೇವಲ 300 ಮೀಟರ್ ಅಂತರದೊಳಗೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net