ಜಂಪ್ ಸ್ಮಾಶ್ ಕ್ಲಬ್‌ನಿಂದ ಷಟಲ್ ಟೂರ್ನಿಗೆ ಚಾಲನೆ

26Kush01
Published on

ಕುಶಾಲನಗರ: ಕುಶಾಲನಗರದ ಜಂಪ್ ಸ್ಮಾಶ್ ಕ್ಲಬ್ ವತಿಯಿಂದ ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದ ಷಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟಕ್ಕೆ ಹಿರಿಯ ಷಟಲ್ ಆಟಗಾರ ಜಿ.ಎಲ್. ಸತ್ಯನಾರಾಯಣ ಶನಿವಾರ ಚಾಲನೆ ನೀಡಿದರು.


ಕ್ರೀಡೆ ಯುವ ಜನರಲ್ಲಿ ಸ್ನೇಹ -ಸಾಮರಸ್ಯ ಹಾಗೂ ಸಹಬಾಳ್ವೆಯನ್ನು ಬೆಸೆಯುವ ಪ್ರಮುಖ ಸಾಧನವಾಗಿದೆ. ಕ್ರೀಡಾಪಟುಗಳು ಸೋಲು, ಗೆಲುವನ್ನು ಸಮನಾಗಿ ಸ್ವೀಕರಿಸಬೇಕು. ಗೆದ್ದವರು ಬೀಗದೆ ಸೋತವರು ಬಾಗದೆ ಸ್ನೇಹದ ಸವಿಯನ್ನಷ್ಟೇ ಸವಿಯಬೇಕೆಂದು ಕಿವಿಮಾತು ಹೇಳಿದರು.


ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಮೂರ್ತಿ, ಜಂಪ್ ಸ್ಮಾಶ್ ಕ್ಲಬ್‌ನ ಮಾಲೀಕರಾದ ಶರತ್, ವಿವಿಧ ತಂಡಗಳ ಮಾಲೀಕರಾದ ಶೈಜನ್ ಪೀಟರ್, ವಿಜೇತ ಹರೀಶ್, ಎನ್.ಅರುಣ, ಪಿಡಿಒ ಶ್ರೀನಿವಾಸ್, ವಿ.ಜಿ.ಲೋಕೇಶ್, ಎಎಸ್‌ಐ ದಿನೇಶ್ ಇದ್ದರು. ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ವಿವಿಧ ಏಳು ತಂಡಗಳ ಒಟ್ಟು 84 ಆಟಗಾರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net