ಜಂತುಹುಳು ಸೋಂಕು ನಿವಾರಣೆಗೆ ಅಗತ್ಯ ಕ್ರಮವಹಿಸಿ

7 ckm 5
ಚಿಕ್ಕಮಗಳೂರಿನ ಜಿಪಂ ಮಿನಿ ಸಭಾಂಗಣದಲ್ಲಿ ಜಿಪಂ ಸಿಇಒ ಎಚ್.ಎಸ್.ಕೀರ್ತನಾ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟಿçÃಯ ಜಂತುಹುಳು ನಿವಾರಣಾ ಸಮನ್ವಯ ಸಮಿತಿ ಸಭೆಯಲ್ಲಿ ಜಂತುಹುಳು ನಿಯಂತ್ರಣ ಕುರಿತ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.
Published on

ಚಿಕ್ಕಮಗಳೂರು: ಮಕ್ಕಳು ಪೌಷ್ಠಿಕಾಂಶಯುತವಾಗಿ ಬೆಳವಣಿಗೆ ಹೊಂದಲು ಅಡ್ಡಿಯಾಗಿರುವ ಜಂತುಹುಳು ಸೋಂಕು ನಿವಾರಣೆಗೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಜಿಪಂ ಸಿಇಒ ಎಚ್.ಎಸ್.ಕೀರ್ತನಾ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಪಂ ಕಚೇರಿ ಮಿನಿ ಸಭಾಂಗಣದಲ್ಲಿ ಶನಿವಾರ ನಡೆದ ರಾಷ್ಟಿçÃಯ ಜಂತುಹುಳು ನಿವಾರಣಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರವು ಪ್ರತಿ ಮಕ್ಕಳು ಆರೋಗ್ಯಯುತವಾಗಿ ಸದೃಡ ಬೆಳವಣಿಗೆ ಹೊಂದಬೇಕು ಎನ್ನುವ ಉz್ದೆÃಶದಿಂದ ಅಂಗನವಾಡಿ, ಶಾಲೆ, ಹಾಗೂ ವಸತಿ ನಿಲಯಗಳಲ್ಲಿ ಊಟ, ಉಪಹಾರದೊಂದಿಗೆ ಹಾಲು, ಮೊಟ್ಟೆ, ಬಾಳೆಹಣ್ಣು ಹಾಗೂ ಚಿಕ್ಕಿಯಂತಹ ಪೌಷ್ಠಿಕಾಂಶ ಹೊಂದಿರುವ ಪೂರಕ ಆಹಾರವನ್ನು ಒದಗಿಸಿ ಮಕ್ಕಳ ಪೌಷ್ಠಿಕಾಂಶಯುತ ಬೆಳವಣಿಗೆಗೆ ಶ್ರಮಿಸುತ್ತಿದೆ ಎಂದರು.

ಮಣ್ಣು ಹಾಗೂ ಇತರೆ ಅಂಶಗಳ ಮೂಲಕ ಹರಡಲ್ಪಡುವ ಜಂತುಹುಳು ಸೋಂಕು ಮಕ್ಕಳ ಅಪೌಷ್ಠಿಕಾಂಶಕ್ಕೆ ಕಾರಣವಾಗಿದೆ. ಆದ್ದರಿಂದ ಶಾಲಾ, ಕಾಲೇಜು, ಅಂಗನವಾಡಿಯಲ್ಲಿ ಜಂತುಹುಳು ನಿವಾರಣ ಮಾತ್ರೆಗಳನ್ನು ನೀಡಿ ಮಕ್ಕಳು ಆರೋಗ್ಯದಿಂದ ಬೆಳವಣಿಗೆ ಹೊಂದಲು ಪ್ರತಿಯೊಬ್ಬರು ಸಹಕರಿಸಬೇಕು ಎಂದು ಹೇಳಿದರು.

ಜಂತುಹುಳು ಸೋಂಕು ರಕ್ತಹೀನತೆ, ಅಪೌಷ್ಠಿಕತೆ, ದುರ್ಬಲ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ಕುಂಠಿತಗೊಳ್ಳಲು ಕಾರಣವಾಗಿದೆ. ಸೋಂಕಿತ ಮಕ್ಕಳು ಹೆಚ್ಚು ದಣಿದಂತಿರುತ್ತಾರೆ. ಇವುಗಳಿಂದ ಮಕ್ಕಳು ಶಾಲೆಗೆ ಗೈರು ಹಾಜರಾಗುವುದಲ್ಲದೇ ಆಟ, ಪಾಠ ಹಾಗೂ ಇತರೇ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ಭಾಗವಹಿಸಲು ಸಾದ್ಯವಗುತ್ತಿಲ್ಲ. ಜಂತುಹುಳು ಬಾಧೆಯಿಂದಾಗಿ ವ್ಯಕ್ತಿಯ ದೈಹಿಕ ಮತ್ತು ಬೈದ್ಧಿಕ ಸಾಮಾರ್ಥ್ಯ ಕುಗ್ಗಿ ಆರ್ಥಿಕ ಪ್ರಗತಿಗೂ ಅಡ್ಡಿಯಾಗಿದೆ. ಜಿಲ್ಲೆಯಲ್ಲಿರುವ ೧ ರಿಂದ ೧೯ ವರ್ಷದೊಳಗಿನ ಎಲ್ಲ ಮಕ್ಕಳಿಗೆ ಅಲ್ಬೆಂಡಝೋಲ್ ಮಾತ್ರೆಯನ್ನು ನೀಡಿ ಜಂತುಹುಳು ನಿವಾರಣೆ ಮಾಡಬೇಕು. ಮಾತ್ರೆಯು ನಿಧಾನಗತಿಯಲ್ಲಿ ಚೀಪುವುದರ ಮೂಲಕ ಸೇವಿಸುವ ವಿಧಾನವಾಗಿದ್ದು, ಶಾಲಾ ಶಿಕ್ಷಕರು, ಅಂಗವನಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಈ ಕುರಿತು ತರಬೇತಿ ಹಾಗೂ ಮಾಹಿತಿ ನೀಡಬೇಕು ಎಂದ ಅವರು ಅತ್ಯಂತ ಕಿರಿಯ ಮಕ್ಕಳಿಗೆ ಚಮಚ ಬಳಸಿ ಮಾತ್ರೆಗಳನ್ನು ನೀಡುವಂತೆ ಸೂಚಿಸಿದರು.

ಆಶಾ ಕಾರ್ಯಕರ್ತೆಯರು ಅಂಗನವಾಡಿಗೆ ದಾಖಲಾಗದ ಮತ್ತು ಶಾಲೆಯಿಂದ ಹೊರಗುಳಿದ ಮಕ್ಕಳ ಪಟ್ಟಿ ಮಾಡಿ ಅಂತಹ ಮಕ್ಕಳ ಮನೆಗೆ ತೆರಳಿ ಮಾತ್ರೆಗಳನ್ನು ಒದಗಿಸುವ ಕಾರ್ಯ ಮಾಡಬೇಕು. ಅಧಿಕಾರಿಗಳು ಜಿಲ್ಲೆಯ ಎಲ್ಲ ತಾಲೂಕು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಶಾಲೆ, ಅಂಗನವಾಡಿಗಳಿಗೆ ಬೇಕಾಗುವ ಅಗತ್ಯ ಮಾತ್ರೆಗಳನ್ನು ತಲುಪಿಸಿ ವಿತರಣೆ ಹಾಗೂ ನಿರ್ವಹಣೆ ಸಮರ್ಪಕವಾಗಿದೆಯೇ ಎಂದು ಖಚಿತ ಪಡಿಸಿಕೊಳ್ಳಬೇಕು. ರಾಷ್ಟಿçÃಯ ಜಂತುಹುಳು ನಿವಾರಣಾ ದಿನದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿ ೧ ರಿಂದ ೧೯ ವರ್ಷದೊಳಗಿನ ಪ್ರತಿಯೊಬ್ಬರಿಗೂ ಮಾತ್ರೆ ತಲುಪಿಸಿ ಹಾಗೂ ಕ್ಷಯಾ ರೋಗ ನಿಯಂತ್ರಣ ಕುರಿತು ಸರ್ವಾಜನಿಕರಲ್ಲಿ ಅರಿವು ಮೂಡಿಸಿ ನಿಯಂತ್ರಣಕ್ಕೆ ಅಗತ್ಯ ಕ್ರಮವಹಿಸಿ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವಥ್ ಬಾಬು ಮಾತನಾಡಿ, ಜಿಲ್ಲೆಯಲ್ಲಿ ೧ ರಿಂದ ೧೯ ವರ್ಷದೊಳಗಿನ ಒಟ್ಟು ೨,೩೧,೯೩೦ ಮಕ್ಕಳು ಇದ್ದಾರೆ. ಇವರಲ್ಲಿ ೬೩,೭೫೩ ಮಕ್ಕಳು ೧ ರಿಂದ ೫ ವರ್ಷ ಹಾಗೂ ೧,೬೮,೧೭೭ ಮಕ್ಕಳು ೬ ರಿಂದ ೧೯ ವರ್ಷದವರಾಗಿದ್ದಾರೆ. ಪ್ರತಿ ಮಕ್ಕಳಿಗೂ ಜಂತುಹುಳು ನಿವಾರಣಾ ಮಾತ್ರೆಯನ್ನು ವಿತರಿಸುವ ಉz್ದÉÃಶದಿಂದ ಕಸ ಸಂಗ್ರಹಣ ವಾಹನಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಬಿತ್ತಿ ಪತ್ರವನ್ನು ಹಂಟಿಸಿ ಜಂತುಹುಳು ನಿವಾರಣೆಯ ಪ್ರಯೋಜನಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಮತ್ತು ಮಾತ್ರೆಗಳನ್ನು ಸೇವಿಸುವ ವಿಧಾನದ ಕುರಿತು ಶಾಲಾ ಶಿಕ್ಷಕರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ತರಬೇತಿ ಹಾಗೂ ಮಾಹಿತಿ ನೀಡಲಾಗಿದೆ. ಜಿಲ್ಲೆಯ ಪ್ರತಿ ಮಕ್ಕಳಿಗೂ ಕಡ್ಡಾಯವಾಗಿ ಜಂತುಹುಳು ನಿವಾರಣಾ ಮಾತ್ರೆಯನ್ನು ನೀಡಲು ಕ್ರಮಕೈಗೊಳ್ಳಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಆರ್‌ಸಿಎಚ್‌ಒ ಡಾ. ಮಂಜುನಾಥ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ, ಶಶಿಕಲಾ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಹರೀಶ್ ಬಾಬು, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಲೋಕೇಶ್ವರಪ್ಪ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net