ಜಂತುಹುಳು ಮಾತ್ರೆ ವಿತರಣೆ, ಆರೋಗ್ಯ ಜಾಗೃತಿ

9MDG1
Published on

ಮುಂಡರಗಿ: ಜಂತುಹುಳು ನಾಶಕ ಅಲ್ಬೆಂಡ್​ಜೋಲ್ ಮಾತ್ರೆ ಸೇವನೆಯಿಂದ ಮಕ್ಕಳಲ್ಲಿನ ರಕ್ತಹೀನತೆ ಮತ್ತು ಅಪೌಷ್ಟಿಕತೆ ತಡೆಯಲು ಅನುಕೂಲವಾಗುತ್ತದೆ. ಈ ಮಾತ್ರೆಯನ್ನು ಸೇವಿಸುವುದರಿಂದ ಉತ್ತಮ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಆರೋಗ್ಯ ಇಲಾಖೆಯ ರಾಷ್ಟ್ರೀಯ ಸ್ವಾಸ್ತ್ಯ ಕಾರ್ಯಕ್ರಮದ ಆಪ್ತ ಸಮಾಲೋಚಕ ಉಮೇಶ ದೇವರಮನಿ ಹೇಳಿದರು.

ಪಟ್ಟಣದಲ್ಲಿ ಆರೋಗ್ಯ ಇಲಾಖೆಯಿಂದ ರಾಷ್ಟ್ರೀಯ ಜಂತುಹುಳು ನಿವಾರಣೆ ಕಾರ್ಯಕ್ರಮದಡಿ ಸೋಮವಾರ ಹಮ್ಮಿಕೊಂಡಿದ್ದ ಮಕ್ಕಳಿಗೆ ಜಂತುಹುಳು ನಾಶಕ ಮಾತ್ರೆ ವಿತರಣೆ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘1ರಿಂದ 19ವರ್ಷದೊಳಗಿನ ಎಲ್ಲ ಮಕ್ಕಳಿಗೆ ಜಂತುಹುಳು ನಿವಾರಣೆಗೆ ಅಲ್ಬೆಂಡ್​ಜೋಲ್ ಮಾತ್ರೆಯನ್ನು ನೀಡಬೇಕು. ಪ್ರತಿ ವರ್ಷದಲ್ಲಿ ಎರಡು ಸಲ ಮಾತ್ರೆಯನ್ನು ಮಕ್ಕಳಿಗೆ ಉಚಿತವಾಗಿ ವಿತರಿಸಲಾಗುತ್ತದೆ’ ಎಂದು ತಿಳಿಸಿದರು.

ಆರೋಗ್ಯ ಇಲಾಖೆ ಸಿಬ್ಬಂದಿ ಪಟ್ಟಣದ ವಿವಿಧೆಡೆ ಮನೆ-ಮನೆಗೆ ತೆರಳಿ ಹಾಗೂ ಅಂಗನವಾಡಿ ಮಕ್ಕಳಿಗೆ ಮಂಗಳವಾರ ಅಲ್ಬೆಂಡ್​ಜೋಲ್ ಮಾತ್ರೆಗಳನ್ನು ವಿತರಿಸುವುದರ ಜತೆಗೆ ಜಾಗೃತಿ ಮೂಡಿಸಿದರು.

ಪುರಸಭೆ ಸದಸ್ಯ ರೈಮಾನಸಾಬ್ ಮಲ್ಲಿನಕೇರಿ, ಆರೋಗ್ಯ ಇಲಾಖೆಯ ಕಿರಿಯ ಆರೋಗ್ಯ ಸಹಾಯಕರಾದ ಪಿ.ವಿ. ಬಿದರಿ, ಪ್ರತಿಭಾ ಕೊಂಬಳಿ, ಕವಿತಾ ರಾಠೋಡ, ವಿಜಯಲಕ್ಷಿ್ಮ ಪೋಚಗುಂಡರ್, ರೇಷ್ಮಾ ರಾಟಿ, ಎಸ್.ಎಸ್. ಪುರದ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net