

ಚಿಂಚೋಳಿ: ಇಂದಿನ ಆಧುನಿಕ ಯುಗದಲ್ಲಿ ಆಹಾರ ಪದ್ಧತಿ ಬದಲಾಗುತ್ತಿದ್ದು, ಇದರಿಂದ ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ ಎಂದು ಡಾ. ಸಂತೋಷ ಪಾಟೀಲ್ ಹೇಳಿದರು.
ಶಿಶು ಅಭಿವೃದ್ಧಿ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟಿçÃಯ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಂಕ್ ಫುಡ್‌ನಿಂದ ಆದಷ್ಟು ದೂರವಿರಿ. ಪೌಷ್ಟಿಕ ಆಹಾರ ಸೇವಿಸುವ ಮೂಲಕ ಗುಣಮಟ್ಟದ ಆರೋಗ್ಯದ ಕಡೆ ಗಮನ ಹರಿಸಬೇಕು.
ಗರ್ಭಿಣಿ ಮಹಿಳೆಯರು ಹಸಿ ತರಕಾರಿ, ಕಾಳುಗಳನ್ನು ಹೆಚ್ಚೆಚ್ಚು ಸೇವಿಸಬೇಕು ಎಂದು ಸಲಹೆ ನೀಡಿದರು. ಸಿಬ್ಬಂದಿ ಪ್ರೇಮಿಳಾ, ಕವಿತಾ, ಮೀನಾಕ್ಷಿ, ತುಕರಾಮ, ಸುರೇಖಾ ಇತರರಿದ್ದರು.