ಜ.೩ ರಂದು ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಭೂಮಿ ಪೂಜೆ

dc12ce7a-336d-4a3e-a62d-ceb2ebb48248
Published on

ಬಾಗಲಕೋಟೆ: ನಗರದ ಬೈಪಾಸ್ ರಸ್ತೆಯಲ್ಲಿರುವ ೬ ಎಕರೆ ಜಾಗೆಯಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನ ಕಟ್ಟಲು ಜ.೧೪ ರಂದು ಭೂಮಿಪೂಜೆ ನೆರವೇರಿಸಲಾಗುತ್ತಿದೆ ಎಂದು ಸಂಜಯ ಜಾಲವಾದಿ ತಿಳಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ ಐದಾರು ಕೋಟಿ ರು. ವೆಚ್ಚದಲ್ಲಿ ದೇವಸ್ಥಾನ ನಿರ್ಮಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ ಯಾರಿಂದಲೂ ಅನುದಾನ ಪಡೆದಿಲ್ಲ. ಭಕ್ತರು ನೀಡುವ ದೇಣಿಗೆಯಿಂದಲೇ ದೇವಸ್ಥಾನ ನಿರ್ಮಿಸಲಾಗುತ್ತಿದೆ ಎಂದರು.

ಇಲ್ಲಿನ ಬೃಂದಾವನ ಸೆಕ್ಟರ್ ೬೩ಎ ದಲ್ಲಿರುವ ಆದಿತ್ಯ ಅಪಾರ್ಟಮೆಂಟ್‌ನಲ್ಲಿ ಜ.೩ ರಂದು ಶಬರಿಮಲೈ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಜರುಗಲಿದೆ. ಅಂದು ಬೆಳಗ್ಗೆ ೬ಕ್ಕೆ ಅಭಿಷೇಕಪೂಜೆ ಹಾಗೂ ಮಧ್ಯಾಹ್ನ ೧೨.೩೦ಕ್ಕೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಮುಖಂಡರಾದ ಬೆನ್ನಪ್ಪ ಗುರುಸ್ವಾಮಿ, ರವಿ ಗುರುಸ್ವಾಮಿ, ಅನೀಲ ಗುರುಸ್ವಾಮಿ ಹಾಗೂ ಚಂದ್ರಶೇಖರ ಮಳಜಿ ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net