ಜ.೨೯ ರಿಂದ ಕೋಟೆನಗರಿಯಲ್ಲಿ ನಾಟಕೋತ್ಸವ

bkt-27-2
ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಬಾಗಲಕೋಟ ಗೆಳೆಯರ ಬಳಗದ ಅಧ್ಯಕ್ಷ ಮಹಾಬಳೇಶ್ವರ ಎಸ್.ಗುಡಗುಂಟಿ ಮಾತನಾಡಿದರು. ಕುಮಾರೇಶ್ವರ ವಿಶ್ವಧರ್ಮ ಶಾಂತಾಶ್ರಮದ ಅಧ್ಯಕ್ಷ ಜಿ.ಎನ್.ಪಾಟೀಲ, ಶ್ರೀಶೈಲ ಕರಿಶಂಕರಿ, ಎಸ್.ಎಸ್ .ಗದ್ದಿ, ಮಹೇಶ ದರಬಾರ, ಜಯಪ್ರಕಾಶ ಯಂಡಿಗೇರಿ ಇದ್ದರು.
Published on

ಬಾಗಲಕೋಟೆ: ಗೆಳೆಯರ ಬಳಗ, ಕುಮಾರೇಶ್ವರ ವಿಶ್ವಧರ್ಮ ಶಾಂತಾಶ್ರಮ ಸಂಯುಕ್ತಾಶ್ರಯದಲ್ಲಿ ಜ.೨೯ ರಿಂದ ನಾಟಕೋತ್ಸವ ಹಮ್ಮಿಕೊಳ್ಳಲಾಗಿದ್ದು, ಕೋಟೆನಗರಿ ಕಲಾ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು. ಪ್ರವೇಶ ಉಚಿತವಾಗಿದೆ ಎಂದು ಬಾಗಲಕೋಟ ಗೆಳೆಯರ ಬಳಗದ ಅಧ್ಯಕ್ಷ ಮಹಾಬಳೇಶ್ವರ ಎಸ್.ಗುಡಗುಂಟಿ ಹೇಳಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ದಿನಗಳ ನಾಟಕೋತ್ಸವವು ವಿದ್ಯಾಗಿ ರಿಯ ಸಾಯಿಮಂದಿರದ ಬಯಲು ವೇದಿಕೆಯಲ್ಲಿ ನಡೆಯಲಿದ್ದು, ಜ.೨೯ ರಂದು ಸಂಜೆ ೬ ಗಂಟೆಗೆ ಜಿಲ್ಲಾಽಕಾರಿ ಜಾನಕಿ ಕೆ.ಎಂ. ಉದ್ಘಾಟಿಸಲಿದ್ದಾರೆ, ಕುಮಾರೇಶ್ವರ ವಿಶ್ವಧರ್ಮ ಶಾಂತಾಶ್ರಮದ ಅಧ್ಯಕ್ಷ ಜಿ.ಎನ್.ಪಾಟೀಲ ಅಧ್ಯಕ್ಷತೆ ವಹಿಸಲಿದ್ದು, ಕೆರೂಡಿ ಗ್ರುಪ್ ಆಫ್ ಹಾಸ್ಪಿಟಲ್ಸ್ ಮುಖ್ಯಸ್ಥ ಡಾ.ಬಿ.ಎಚ್.ಕೆರೂಡಿ ಉಪಸ್ಥಿತರಿರುವರು ಎಂದರು.

ಸಾಣೇಹಳ್ಳಿಯ ಶಿವಕುಮಾರ ಕಲಾ ಸಂಘದಿAದ ಜ.೨೯ ರಂದು ಸಂಜೆ ೬.೪೫ ಗಂಟೆಗೆ ಟಿ.ಕೆ.ರಾಮರಾವ ಅವರ ಕಾದಂಬರಿ ಆಧಾರಿತ, ಗಣೇಶ ಅಮೀನಗಡ ರೂಪಾಂತರಗೊಳಿಸಿದ , ವೈ.ಡಿ.ಬಾದಾಮಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಬಂಗಾರದ ಮನುಷ್ಯ ನಾಟಕ, ಜ.೩೦ ರಂದು ೬.೩೦ ಗಂಟೆಗೆ ಡಾ.ಬಿ.ಆರ್.ಪೊಲೀಸ್ ಪಾಟೀಲ ರಚನೆ ಮಾಡಿ ವಿಶ್ವೇಶ್ವರಿ ಹಿರೇಮಠ ನಿರ್ದೇಶನದಲ್ಲಿ ಸಿ-ದ್ದಗೊಂಡಿರುವ ತುಲಾಭಾರ ನಾಟಕ, ಜ.೩೧ ರಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ರಚನೆ ಮಾಡಿರುವ ಮಹಾದೇವ ಹಡಪದ ನಿರ್ದೇಶನದ ಕೋಳೂರು ಕೊಡಗೂಸು ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಹೇಳಿದರು.

ಶ್ರೀಶೈಲ ಕರಿಶಂಕರಿ ಮಾತನಾಡಿ, ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವೆಂಕಪ್ಪ ಸುಗತೇಕರ ಹಾಗೂ ಲೋಕಸಭಾ ಚುನಾವಣೆಯಲ್ಲಿ ಉತ್ತಮ ಚುನಾವಣಾ ಕಾರ್ಯ ನಿರ್ವಹಣೆ ಪ್ರಶಸ್ತಿ ಪಡೆದ ಜಿಲ್ಲಾಽಕಾರಿ ಜಾನಕಿ ಕೆ.ಎಂ ಅವರನ್ನು ಸನ್ಮಾನಿಸಲಾಗುವುದು.

ಕುಮಾರೇಶ್ವರ ವಿಶ್ವಧರ್ಮ ಶಾಂತಾಶ್ರಮದ ಅಧ್ಯಕ್ಷ ಜಿ.ಎನ್.ಪಾಟೀಲ, ಎಸ್.ಎಸ್ .ಗದ್ದಿ, ಮಹೇಶ ದರಬಾರ, ಜಯಪ್ರಕಾಶ ಯಂಡಿಗೇರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net