ಜ.೧೩ ರಂದು ವಿರಾಟಪುರದ ವಿರಾಗಿ ಚಿತ್ರ ಬಿಡುಗಡೆ

bkt-23-7
ಬಾಗಲಕೋಟೆ ನಗರದ ಬಿವಿವಿ ಸಂಘದ ಮಿನಿ ಸಭಾಭವನದಲ್ಲಿ ವಿರಾಟಪುರದ ವಿರಾಗಿ ಚಿತ್ರ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.
Published on

.

ಬಾಗಲಕೋಟೆ: ಹಾನಗಲ್ ಕುಮಾರ ಶಿವಯೋಗಿಗಳ ಜೀವನಗಾಥೆ, ಸಂದೇಶ ಆಧರಿತ ವಿರಾಟಪುರ ವಿರಾಗಿ ಚಲನಚಿತ್ರ ರಾಜ್ಯದಾದ್ಯಂತ ಜ.೧೩ರಂದು ಬಿಡುಗಡೆಯಾಗಲಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಘಟಕದ ಅಧ್ಯಕ್ಷ ಜಿ.ಎನ್.ಪಾಟೀಲ ಹೇಳಿದರು.
ಮಣಿಕಾಂತ ಕದ್ರಿ ಸಂಗೀತ ನೀಡಿದ್ದಾರೆ. ಉತ್ತರ ಕರ್ನಾಟಕದ ಹಲವು ಸ್ವಾಮೀಜಿಗಳು ಬಣ್ಣ ಹಚ್ಚಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಚಿತ್ರಿಕರಣ ಮಾಡಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಚಾರಾರ್ಥವಾಗಿ ಹೊರಟಿರುವ ರಥಯಾತ್ರೆ ಡಿ.೨೮ ರಂದು ಸಂಜೆ ೪.೩೦ಕ್ಕೆ ಗದ್ದನಕೇರಿಗೆ ಬರಲಿದೆ. ವಿದ್ಯಾಗಿರಿ ನವನಗರ, ಎಪಿಎಂಸಿ, ರೈಲ್ವೆ ಸ್ಟೇಶನ, ವಲ್ಲಭಭಾಯಿ ವೃತ್ತ, ಟೀಕಿನಮಠದ ಮೂಲಕ ಚರಂತಿಮಠದಲ್ಲಿ ರಥಯಾತ್ರೆ ಸಮಾರೋಪವಾಗಲಿದೆ. ಸಂಜೆ ೬.೩೦ಕ್ಕೆ ಸಭೆ ಹಾಗೂ ಟ್ರೇಲರ್ ಪ್ರದರ್ಶನ ಮಾಡಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಖ್ಯಾತ ನಿರ್ದೇಶಕ ಬಿ.ಎಸ್.ಲಿಂಗದೇವರು ನಿರ್ದೇಶಿಸಿದ್ದಾರೆ. ಸುಚೇಂದ್ರ ಪ್ರಸಾದ ಕುಮಾರ ಶಿವಯೋಗಿಗಳ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಜಡೆಯ ಶಾಂತಲಿಂಗ ಮಹಾಸ್ವಾಮೀಜಿ ಕೂಡ ನಟಿಸಿದ್ದಾರೆ. ಮಣಿಕಾಂತ ಕದ್ರಿ ಸಂಗೀತ, ಅಶೋಕ ರಾಮನ ಛಾಯಾಗ್ರಹಣ ಮಾಡಲಿದ್ದಾರೆ. ಶ್ರೀಗಳ ಶೈಕ್ಷಣಿಕ, ಸಾಮಾಜಿಕ ಸೇವೆ ಕುರಿತು ಇಂದಿನ ಪೀಳಿಗೆ ಜನರಿಗೆ ಪರಿಚಯಿಸುವುದು ಚಿತ್ರದ ಉದ್ದೇಶವಾಗಿದೆ.
ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ(ಬೇವೂರ), ವಿದ್ಯಾರ್ಥಿ ಕಲ್ಯಾಣ ಹಾಗೂ ಹಾಸ್ಟೆಲ್ ಸಮಿತಿ ಅಧ್ಯಕ್ಷ ಕುಮಾರಸ್ವಾಮಿ ಹಿರೇಮಠ, ಬಸವರಾಜ ಮುಕ್ಕುಪ್ಪಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net