ಜ.28 ರಂದು ಕಲಾಭವನದಲ್ಲಿ ಯುವ ಬಿಗ್ ಶೋ

ಜ.28 ರಂದು ಕಲಾಭವನದಲ್ಲಿ ಯುವ ಬಿಗ್ ಶೋ
Published on


ಹಾಸನ : ಜಿಲ್ಲೆಯ ಯುವ ಪ್ರತಿಭೆಗಳಿಗಾಗಿ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜ.28 ರಂದು ಯುವ ಬಿಗ್ ಶೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಯುವ ಬಿಗ್ ಶೋ ಆಯೋಜಕ ಶಿವಕುಮಾರ್ ತಿಳಿಸಿದರು.
ಜಿಲ್ಲೆಯಲ್ಲಿರುವಂತ ಶಾಲಾ ಕಾಲೇಜುಗಳ ಮಟ್ಟದಲ್ಲಿ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಇದರಲ್ಲಿ ನೃತ್ಯ, ನಾಟಕ, ಗಾಯನ ಅವಕಾಶ ನೀಡಲಾಗುವುದು ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ನಮ್ಮ ದೇಶ ನಾಡು ನುಡಿಯ ಬಗ್ಗೆ ನೃತ್ಯ, ಗಾಯನ, ನಾಟಕ ತಂಡದಿಂದ 6 ನಿಮಿಷಗಳ ಕಾಲ ಎರಡು ಕಾರ್ಯಕ್ರಮಕ್ಕೆ ಅವಕಾಶ ಇರುತ್ತದೆ. ಒಂದು ತಂಡಕ್ಕೆ ಎರಡು ಸಾವಿರ ಪ್ರವೇಶ ಶುಲ್ಕ ನಿಗದಿ ಮಾಡಲಾಗಿದೆ. ಉತ್ತಮ ಶೋ ನೋಡಿದ ತಂಡಕ್ಕೆ ಮೊದಲ ಬಹುಮಾನವಾಗಿ 20 ಸಾವಿರ, ಎರಡನೇ ಬಹುಮಾನ 10 ಸಾವಿರ ಮತ್ತು ಆಕರ್ಷಕ ಟ್ರೋಫಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಶಾಲಾ ಕಾಲೇಜಿನಿಂದ ನೃತ್ಯ, ಗಾಯನ, ನಾಟಕ ಕಲೆಯುಳ್ಳ ವಿದ್ಯಾರ್ಥಿಗಳು ಎರಡು ಕಾರ್ಯಕ್ರಮ ಪ್ರದರ್ಶಿಸಬಹುದು. ಒಂದು ತಂಡದಿಂದ 8 ವಿದ್ಯಾರ್ಥಿಗಳು ಇರಬೇಕು. ಗಾಯನಕ್ಕೆ 4 ವಿದ್ಯಾರ್ಥಿಗಳು, ಕಾರ್ಯಕ್ರಮಗಳ ಸಂಪೂರ್ಣ ಪ್ರದರ್ಶನವನ್ನು ವೀಕ್ಷಿಸಿ ಸೋಲು ಗೆಲುವು ನಿರ್ಧರಿಸಲಾಗುವುದು ಎಂದರು. ಕಾರ್ಯಕ್ರಮ ವೀಕ್ಷಣೆ ಮಾಡಲು ಉಚಿತ ಪ್ರವೇಶವಿದೆ. ಹೆಚ್ಚಿನ ವಿವರಗಳಿಗೆ 8073316806 ಗೆ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಗ್ ಶೋ ಕಲಾತಂಡದ ಸ್ಯಾನಿ, ಮಧು, ನವನಿತ್, ಸುಮಂತ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net