

ಚಾಮರಾಜನಗರ: ಅಖಿಲ ಭಾರತ ಕಾಂಗ್ರೆಸ್ ಸಮಿತಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಜ. 21 ರಂದು ಬೆಳಗಾಂನಲ್ಲಿ ನಡೆಯುವ ಜೈಬಾಪೂ, ಜೈಭೀಮ್, ಜೈ ಸಂವಿಧಾನ್ ಸಮಾವೇಶಕ್ಕೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶ್ವಸಿಗೊಳಿಸಿಕೊಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಹಾಗೂ ಮಾಜಿ ಉಪಸಭಾಪತಿ ವಿ.ಆರ್.ಸುದರ್ಶನ್ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. 1924ರಲ್ಲಿ ಡಿ. 26 ರಂದು ದೇಶದ ಸ್ವಾತಂತ್ರ್ಯಕ್ಕಾಗಿ ನಾಯಕತ್ವ ವಹಿಸಿ, ಸುದೀರ್ಘವಾದ ಹೋರಾಟ ಮಾಡಿದ ಗಾಂಧೀಜಿಯವರು ಪ್ರಪ್ರಥಮ ಬಾರಿಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಸಮ್ಮೇಳನ ನಡೆಸಿಕೊಟ್ಟಿದ್ದರು. ಅದು ಆದ ಮೇಲೆ ತೀವ್ರವಾದ ಹೋರಾಟಗಳು ನಡೆಯಿತು. ಸ್ವಾತಂತ್ರ್ಯಕ್ಕಾಗಿ ಅನೇಕ ಕಾರ್ಯಕ್ರಮ ಹಮ್ಮಿಕೊಂಡರು. ಅದರ ಫಲವಾಗಿ 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂತು. ಅದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ ಎಂದರು.
ಎಲ್ಲ ಕಾಲಕ್ಕೂ ಜೈ ಬಾಪೂ, ಜೈ ಭೀಮ್,ಜೈ ಸಂವಿಧಾನ್ ಪ್ರಸ್ತುತ : ಸೂರ್ಯ, ಚಂದ್ರ ಇರುವ ತನಕ ಜೈಬಾಪೂ, ಜೈಭೀಮ್, ಜೈ ಸಂವಿಧಾನ್ ಇದ್ದು, ಎಲ್ಲ ಕಾಲಕ್ಕೂ ಪ್ರಸ್ತುತವಾಗಿರುತ್ತದೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದು, ದೇಶದ ಪ್ರಜಾಪ್ರಭತ್ವ ವ್ಯವಸ್ಥೆ, ಸಂವಿಧಾನವನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವ ನಿಟ್ಟಿನಲ್ಲಿ ಈ ಸಮಾವೇಶ ನಡೆಯುತ್ತಿದ್ದು, ಇದೊಂದು ಐತಿಹಾಸಿಕ ಕಾರ್ಯಕ್ರಮ, ದೇಶಕ್ಕಾಗಿ ಕಾಂಗ್ರೆಸ್ ಹೋರಾಟ ಮಾಡಿದ ಕಾರ್ಯಕ್ರಮ ಇದಾಗಿದೆ. ಅದನ್ನು ಜನರಲ್ಲಿ ನೆನಪಿಸಬೇಕಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಪರಂಪರೆ, ಜವಾಬ್ದಾರಿ ಏನಿತು ಎಂಬುವುದನ್ನು ಬಿಜೆಪಿಯವರಿಗೆ ಹೇಳಬೇಕಿದೆ. ಅ ಕಾರಣಕ್ಕಾಗಿ ಜೈಬಾಪೂ, ಜೈ ಭೀಮ್, ಜೈ ಸಂವಿಧಾನ್ ಹೆಸರನ್ನು ಇಡಲಾಗಿದೆ. ಎಂದರು.
ಸಭೆಯಲ್ಲಿ ಜಿಲ್ಲಾಧ್ಯಕ್ಷ ಪಿ.ಮರಿಸ್ವಾಮಿ , ಸಂಸದ ಸುನೀಲ್ ಬೋಸ್, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎ.ಆರ್.ಕೃಷ್ಣಮೂರ್ತಿ, ಹೆಚ್.ಎಂ.ಗಣೇಶಪ್ರಸಾದ್, ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಸಿ.ಬಸವರಾಜು, ಮಿಲಿಂದರ್ ಧರ್ಮಸೇನೆ, ಜಿಲ್ಲಾ ಉಪಾಧ್ಯಕ್ಷರಾದ ಬಿ.ಕೆ.ರವಿಕುಮಾರ್, ವಡಗೆರೆ ದಾಸ್, ಜಿಲ್ಲಾ ಪ್ರಧಾ ಕಾರ್ಯದರ್ಶಿ ಗಳಾದ ಆರ್.ಮಹದೇವು, ಚಿಕ್ಕಮಹದೇವು, ಜಿಪಂ.ಮಾಜಿ ಸದಸ್ಯರಾದ ಕೆ.ಪಿ.ಸದಾಶಿವಮೂರ್ತಿ, ಜೆ.ಯೋಗೇಶ್, ಕೇತಮ್ಮ, ಕಬ್ಬಹಳ್ಳಿ ಮಹೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾದ ಮಹಮ್ಮದ್ ಅಸ್ಗರ್, ಅರಕಲವಾಡಿ ಗುರುಸ್ವಾಮಿ, ಎಚ್.ವಿ.ಚಂದ್ರು, ತೋಟೇಶ್, ಮುಕುಂದ ವರ್ಮ, ಈಶ್ವರ್,ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಗೌಡಹಳ್ಳಿ ರಾಜೇಶ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಲತಾಜತ್ತಿ, ಕೆಪಿಸಿಸಿ ಸದಸ್ಯ ಸೈಯದ್ ರಫೀ, ಜಿಲ್ಲಾ ಮಾಧ್ಯಮ, ಮುಖಂಡ ಮಹೇಶ್ ಕುದರ್, ಡಿ.ಎನ್.ನಟರಾಜು ಹಾಜರಿದ್ದರು.