ಛಾಯಾಗ್ರಾಹಕರಿಂದ ಸಂಸ್ಕೃತಿ ಮತ್ತು ಪರಂಪರೆ

IMG_20240819_184646
Published on

ಬಾಗಲಕೋಟೆ: ದೇಶದ ಐತಿಹಾಸಿಕ ಘಟನೆಗಳನ್ನು, ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಆಯಾ ಕಾಲಘಟ್ಟದಲ್ಲಿ ದಾಖಲು ಮಾಡುವಲ್ಲಿ ಛಾಯಾಗ್ರಾಹಕರ ಪರಿಶ್ರಮ ಮಹತ್ವದ್ದಾಗಿದೆ.ಎಂದು ಡಾ‌ಚಂದ್ರಶೇಖರ ಕಾಳನ್ನವರ ಹೇಳಿದರು. 

ಅವರ ಬಾಗಲಕೋಟೆ ಪಟ್ಟಣದಲ್ಲಿ ಸೋಮವಾರ ಗೆಳೆಯರ ಬಳಗದವರಿಂದ ವಿಶ್ವ ಛಾಯಾಗ್ರಾಹಕರ ದಿನಾಚರಣೆಯಲ್ಲಿ ಅತಿಥಿಗಳಾಗಿ ಮಾತನಾಡಿದರು. ಅವರು ಸ್ಥಳೀಯ ಪತ್ರಿಕಾ ಛಾಯಾ ವರದಿಗಾರ ಸಂಗಮೇಶ ಬಡಿಗೇರ ಅವರಿಗೆ ಗೌರವ ಪೂರ್ವಕ ಸನ್ಮಾನಿಸಿ ಮಾತನಾಡಿ, ಬಾಗಲಕೋಟೆ ಜಿಲ್ಲೆಯ ಮುಳುಗಡೆ ಪ್ರದೇಶದಲ್ಲಿ ಜನಜೀವನ ಸ್ಥಿತಿಗತಿಗಳ್ನು, ಬರ ಮತ್ತು ನೆರೆ ಹಾವಳಿಯ ಸಂದರ್ಭದಲ್ಲಿ ಸಾರ್ವಜನಿಕರು ಅನುಭವಿಸಿರುವ ತೊಂದರೆ ತಾಪತ್ರೆಗಳನ್ನು ತಮ್ಮ ಛಾಯಾಗ್ರಾಹಕದಿಂದ ರಾಜ್ಯದ ಗಮನ ಸೆಳೆದು,  ಮುಖ್ಯಮಂತ್ರಿಗಳಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ ಎಂದರು.

ಪ್ರೊ.ಸಂಗಮೇಶ ಬ್ಯಾಳಿ ಅವರು ಮಾತನಾಡಿ ಛಾಯಾಗ್ರಾಹಕರ ಪರಿಶ್ರಮದಿಂದ ಪ್ರಾಚೀನ ಘಟನಾವಳಿಗಳನ್ನು ತಿಳಿಯಲು ಸಾಧ್ಯವಾಗುತ್ತದೆ.ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗೆಳೆಯರಾದ ಪ್ರೊ. ದೇವೇಂದ್ರ ನಾಯಕ, ಪ್ರೊ ಸುನಿಲ್ ನಡಕಟ್ಟಿ, ಎಂ.ವಾಯ್.ಬಡಿಗೇರ, ಜಗದೀಶ್ ಪತಂಗಿ, ಡಾ.ಪಿ.ಕೆ.ಕಾರಬಾರಿ, ಮುತ್ತು ಬಡಿಗೇರ, ಶಶಿಧರ ಪೂಜಾರಿ ಡಾ.ಫಕ್ಕಿರಪ್ಪ, ಗಂಗಾಧರ ಮೊಕಾಶಿ ಕಿರಣ್ ಲಾತೂರಕರ ಮುತಾಂದ ಗೆಳೆಯರು ವಿಶ್ವ ಛಾಯಾಗ್ರಾಹಕ ದಿನಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net