ಛಾಯಾಗ್ರಾಹಕರ ಸಮಸ್ಯೆ ಬಗೆಹರಿಸಲು ಬದ್ಧ : ಎಚ್.ಪಿ.ಸ್ವರೂಪ್ ಪ್ರಕಾಶ್

ಛಾಯಾಗ್ರಾಹಕರ ಸಮಸ್ಯೆ ಬಗೆಹರಿಸಲು ಬದ್ಧ : ಎಚ್.ಪಿ.ಸ್ವರೂಪ್ ಪ್ರಕಾಶ್
Published on

ಹಾಸನ: ಛಾಯಾಗ್ರಾಹಕರ ಸಮಸ್ಯೆಗಳ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸಿ ಬಗೆಹರಿಸಲು ಬದ್ಧನಾಗಿದ್ಧೇನೆ ಎಂದು ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ಭರವಸೆ ನೀಡಿದರು.

ನಗರದ ಯೂತ್ ಹಾಸ್ಟೆಲ್‌ನಲ್ಲಿ ಛಾಯಾಚಿತ್ರಗ್ರಾಹಕರ ಸಂಘ ತಾಲ್ಲೂಕು ಘಟಕದಿಂದ ಶನಿವಾರ ಆಯೋಜಿಸಿದ್ದ 184 ನೇ ವಿಶ್ವಛಾಯಾಗ್ರಾಹಣ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಛಾಯಾಗ್ರಾಹಕರ ಸಂಘಕ್ಕೆ ನಿವೇಶನ ನೀಡಿ, ಕಟ್ಟಡ ನಿರ್ಮಿಸಲು ಶಾಸಕ ಮತ್ತು ಲೋಕಸಭಾ ಸದಸ್ಯರ ನಿಧಿಯಿಂದ ಅನುದನ ಒದಗಿಸಲಾಗವುದು. ತಾಂತ್ರಿಕತೆ ಬೆಳೆದಂತೆ, ಮೊಬೈಲ್‌ಗಳಲ್ಲಿ ಕ್ಯಾಮರಾ ಅಳವಡಿಕೆಯಿಂದ ಛಾಯಾಚಿತ್ರಗ್ರಾಹಕರ ಬದುಕಿಗೆ ಪೆಟ್ಟು ಬಿದ್ದಿದ್ದೆ, ಕೇವಲ ಶುಭ-ಸಮಾರಂಭಗಳ ನೆನಪುಗಳನ್ನು ಹಿಡಿದಿಟ್ಟುಕೊಡುವ ಛಾಯಾಗ್ರಾಹಕರ ಸಮಸ್ಯೆಗಳು ದೂರವಾಗಬೇಕಿದೆ ಎಂದು ತಿಳಿಸಿದರು.

ಛಾಯಾಗ್ರಾಹಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಬಿ.ಲೋಕೇಶ್ ಮಾತನಾಡಿ, ಛಾಯಾಗ್ರಾಹಕರು ಒಗ್ಗೂಡಿದರೆ ಮಾತ್ರ ಸಮಸ್ಯೆಗಳನ್ನು ದೂರ ಮಾಡಲು ಸಾಧ್ಯ. ಆದ್ದರಿಂದ ಪ್ರತಿಯೊಬ್ಬ ಛಾಯಾಗ್ರಾಹಕನೂ ಸಂಘಟನೆಯ ಬಗ್ಗೆ ಒಲವು ನೀಡಿ, ಸಂಘದ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸಲು ಮುಂದಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಸಂಘದ ಸದಸ್ಯರು, ಎಸ್.ಎಸ್.ಎಲ್.ಸಿ.. ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಛಾಯಾಚಿತ್ರ ಗ್ರಾಹಕರ ಮಕ್ಕಳನ್ನು ಸನ್ಮಾನಿಸಲಾಯಿತು.

ಸಂಘದ ಗೌರವಾಧ್ಯಕ್ಷ ನಿಂಗರಾಜು (ಸ್ವಾಮಿ), ಪ್ರಧಾನ ಕಾರ್ಯದರ್ಶಿ ಹರೀಶ್, ಖಜಾಂಚಿ ಗಿರೀಶ್, ಸಹಕಾರ್ಯದರ್ಶಿ ವೇಣುಗೋಪಾಲ್, ಉಪಾಧ್ಯಕ್ಷ ನಾಗರಾಜು, ನಿರ್ದೇಶಕರಾದ ದೀಪುಯಾದವ್, ಕಿರಣ್ ಕುಮಾರ್, ವೇಣು, ಮಂಜುನಾಥ್, ಅಕ್ಷಯ್, ಮನೋಜ್ ಕುಮಾರ್, ವಾಸು, ಮೋಹನ್ ಕುಮಾರ್, ಮಾಜಿ ಅಧ್ಯಕ್ಷರಾದ ಧರ್ಮಶೆಟ್ಟಿ, ಮೋಹನ್, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net