ಛಾಯಾಗ್ರಾಹಕರ ಜೀವನ ಭದ್ರತೆ ಪ್ರಯತ್ನ

05-08-Shiva-3
ರಾಯಚೂರಿನ ಕನ್ನಡ ಭವನದಲ್ಲಿ ಶನಿವಾರ ಛಾಯಾಗ್ರಾಹಕರ ಕುಂದುಕೊರತೆ ಸಭೆಯಲ್ಲಿ ಕರ್ನಾಟಕ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಎಸ್.ಪರಮೇಶ ಮಾತನಾಡಿದರು. ಸಂಘದ ಸಹ ಕಾರ್ಯದರ್ಶಿ ಎಚ್.ಎಲ್.ರವಿ, ನಿರ್ದೇಶಕರಾದ ಮಂಜುನಾಥ, ಮಹಾದೇವ, ನಾಗರಾಜ ಇದ್ದರು.
Published on

ರಾಯಚೂರು: ರಾಜ್ಯದಲ್ಲಿರುವ ಛಾಯಾಗ್ರಹಕರ ವೃತ್ತಿ ಮತ್ತು ಜೀವನ ಭದ್ರತೆ ಕಲ್ಪಿಸಲು ಸಂಘ ಪ್ರಯತ್ನಿಸುತ್ತಿದ್ದು, ಭರವಸೆ ಯೋಜನೆಯಡಿ ಮೃತ ಛಾಯಾಗ್ರಾಹಕರ ಕುಟುಂಬಗಳಿಗೆ ನೆರವು ನೀಡಲಾಗುತ್ತಿದೆ ಎಂದು ಕರ್ನಾಟಕ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಎಸ್.ಪರಮೇಶ ತಿಳಿಸಿದರು.
ಸ್ಥಳೀಯ ಕನ್ನಡ ಭವನದಲ್ಲಿ ನಗರ ಛಾಯಾಗ್ರಾಹಕರ ಮತ್ತು ವಿಡಿಯೋಗ್ರಾರ್‌ಗಳ ಕ್ಷೇಮಾಭಿವೃದ್ಧಿ ಸಂಘದಿಂದ ಶನಿವಾರ ಏರ್ಪಡಿಸಿದ್ದ ಛಾಯಾಗ್ರಾಹಕರ ಕುಂದುಕೊರತೆ ಸಭೆಯಲ್ಲಿ ಮಾತನಾಡಿ, ಪ್ರಸ್ತುತ ದಿನಮಾನದಲ್ಲಿ ಛಾಯಾಗ್ರಾಹಕರು ಜೀವನ ಸಾಗಿಸಲು ಸಮಸ್ಯೆ ಎದುರಿಸುವಂತಾಗಿದ್ದು, ಸರ್ಕಾರ ನೆರವು ನೀಡಲು ಮುಂದಾಗಬೇಕು ಎಂದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಸೆ.7 ರಿಂದ 9ರವರೆಗೆ 9ನೇ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಏರ್ಪಡಿಸಲಾಗಿದ್ದು, ಛಾಯಾಗ್ರಾಹಕರಿಗೆ ಅಗತ್ಯವಿರುವ ಸಾಮಗ್ರಿಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ನಂತರ ಸದಸ್ಯರ ಸಮಾವೇಶ ನಡೆಯಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಘದ ಸಹ ಕಾರ್ಯದರ್ಶಿ ಎಚ್.ಎಲ್.ರವಿ, ನಿರ್ದೇಶಕರಾದ ಮಂಜುನಾಥ, ಮಹಾದೇವ, ನಾಗರಾಜ, ಶರಣಬಸವ ಹಿರೇಮಠ, ಶ್ರೀನಿವಾಸ ಇನಾಮದಾರ್, ಅಕ್ಬರ್, ಹರೀಶ್ ಯಾದವ್, ಹನುಮೇಶ ಕುಲಕರ್ಣಿ, ಮಂಜುನಾಥ, ಮಲ್ಲಿಕಾರ್ಜುನ ಸ್ವಾಮಿ, ಅಯ್ಯಪ್ಪಸ್ವಾಮಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net