

ಶಿಕಾರಿಪುರ: ಛಾಯಾಗ್ರಹಣ ಒಂದು ಅದ್ಭುತವಾದ ಕಲೆ. ಹತ್ತು ಪುಟಗಳಲ್ಲಿ ಹೇಳುವುದನ್ನು ಕೇವಲ ಒಂದು ೆಟೋ ಹೇಳುತ್ತದೆ. ನಮ್ಮ ತಾಲೂಕಿನಲ್ಲಿ ಅತ್ಯಂತ ಪ್ರತಿಭಾವಂತ ಛಾಯಾಗ್ರಾಹಕರಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಶಿಕಾರಿಪುರ ಛಾಯಾಗ್ರಾಹಕರ ಸಂಘ ಆಯೋಜಿಸಿದ್ದ ಅಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಛಾಯಾಗ್ರಹಣದ ಮೂಲಕ ಶುಭ ಸಮಾರಂಭಗಳ ನೆನಪುಗಳು ಸದಾ ಜೀವಂತವಾಗಿರುವಂತೆ ಮಾಡುವ ಕುಶಲಕರ್ಮಿಗಳು ಛಾಯಾಗ್ರಾಹಕರು ಎಂದರು. ಛಾಯಾಗ್ರಹಣದಿಂದ ಬದುಕು ಆರಂಭಿಸಿದ ಇ.ಎಚ್.ಬಸವರಾಜ್ ಚಿತ್ರರಂಗಕ್ಕೂ ಪ್ರವೇಶಿಸಿದ್ದಾರೆ. ಛಾಯಾಗ್ರಾಹಕರು ಅತ್ಯಂತ ಸೂಕ್ಷ್ಮ ಸಂವೇದನೆ ಉಳ್ಳವರು ಮತ್ತು ಅತ್ಯಂತ ತಾಳ್ಮೆ ಉಳ್ಳವರು. ಸಂಘಟನೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಬೆಳೆಯಲಿ. ಛಾಯಾಗ್ರಾಹಕರ ಸಂಘಕ್ಕೆ ನಿವೇಶನ ನೀಡುತ್ತೇನೆ ಎಂದು ಭರವಸೆ ನೀಡಿದರು. ಶಿಕಾರಿಪುರ ತಾಲೂಕು ಶರಣರು ನಡೆದಾಡಿದ ಕ್ಷೇತ್ರ. ಇಲ್ಲಿ ಜನಿಸಿದ ಶರಣರ ಜನ್ಮಸ್ಥಳಗಳನ್ನು ಅಭಿವೃದ್ಧಿ ಪಡಿಸಲಾಗುತ್ತದೆ. ಅಕ್ಕಮಹಾದೇವಿ ಜನ್ಮಸ್ಥಳ ಉಡುಗಣಿಯನ್ನು ಕೂಡಲಸಂಗಮದ ಮಾದರಿಯಲ್ಲಿ ಪ್ರವಾಸೋದ್ಯಮ ಕ್ಷೇತ್ರವನ್ನಾಗಿಸಲು 60 ಕೋಟಿ ರೂ. ವೆಚ್ಚದಲ್ಲಿ ದೆಹಲಿಯ ಅಕ್ಷರಧಾಮ ಮಾದರಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು. ನಮ್ಮದು ಕೃಷಿ ಪ್ರಧಾನವಾದ ದೇಶ. ರೈತರ ಮುಖದಲ್ಲಿ ಮಂದಹಾಸ ಮೂಡಿದರೆ ಮಾತ್ರ ನಾಡು ಸಮೃದ್ಧಿ. ಈ ನಿಟ್ಟಿನಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭ ಸಾವಿರಾರು ಕೋಟಿ ರೂ. ಅನುದಾನ ನೀಡಿದ ಪರಿಣಾಮ ಶಾಶ್ವತ ನೀರಾವರಿ ಯೋಜನೆಯಡಿ ತಾಲೂಕಿನ ಕೆರೆಗಳನ್ನು ತುಂಬಿಸುವ ಕೆಲಸವಾಗಿದೆ ಎಂದರು. ಛಾಯಾಗ್ರಾಹಕರ ಸಂಘದ ಗೌರವಾಧ್ಯಕ್ಷ ಇ.ಎಚ್.ಬಸವರಾಜ್, ಅಧ್ಯಕ್ಷ ಪಾರುಸ್ವಾಮಿ, ಉಪಾಧ್ಯಕ್ಷ ಸಂತೋಷ್ ಮಡ್ಡಿ ,ನಿಕಟಪೂರ್ವ ಅಧ್ಯಕ್ಷ ಉಮೇಶ್, ವಿಠ್ಠಲ, ಮಹೇಂದ್ರಕರ್, ಪ್ರಶಾಂತ್, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಚನ್ನವೀರಪ್ಪ, ರುದ್ರೇಶ್ ಇದ್ದರು.
ಅಲ್ಲಮಪ್ರಭುಗಳ ಜನ್ಮಸ್ಥಾನವನ್ನು ಅಭಿವೃದ್ಧಿ ಪಡಿಸಲಾಗುತ್ತದೆ. ಶಿಕಾರಿಪುರ ಪಟ್ಟಣದಲ್ಲಿ ಡಿಗ್ರಿ ಕಾಲೇಜಿನವರೆಗೆ ುಟ್‌ಪಾತ್ ನಿರ್ಮಾಣ ಮಾಡಲಾಗಿದೆ. ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ. ನಮ್ಮ ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ಬೇರೆ ಬೇರೆ ತಾಲೂಕಿನಿಂದ ರೋಗಿಗಳು ಬರುತ್ತಾರೆ. ಮಹಿಳೆಯರು ಮತ್ತು ಮಕ್ಕಳ ಚಿಕಿತ್ಸೆಗಾಗಿ ಪೌರವಿಹಾರದ ಎದುರು ಸುಸಜ್ಜಿತ ತಾಯಿ-ಮಕ್ಕಳ ಆಸ್ಪತ್ರೆ ನಿರ್ಮಿಸಲಾಗಿದೆ. ಬಿ.ವೈ.ರಾಘವೇಂದ್ರ, ಸಂಸದ