ಛಾಯಾಗ್ರಹಣ ಪರಿಣಾಮಕಾರಿ ಕಲೆ

19 HULSUR 01
Published on

ಕಲಬುರಗಿ: ಛಾಯಾಗ್ರಹಣ ಪರಿಣಾಮಕಾರಿ ಕಲೆ. ಹೀಗಾಗಿ ತನ್ನದೇ ಆದ ಮಹತ್ವ ಹೊಂದಿದೆ ಎಂದು ನೂತನ ವಿದ್ಯಾಲಯ ಸಂಸ್ಥೆಯ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಶ್ರೀಕಾಂತ ಏಖಳೀಕರ್ ಅಭಿಪ್ರಾಯಪಟ್ಟರು.
ನಗರದ ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯದ ಫೈನ್ ಆರ್ಟ್ ವಿಭಾಗದಲ್ಲಿ ವಿಶ್ವಛಾಯಾಗ್ರಹಣ ದಿನದ ನಿಮಿತ್ತ ಛಾಯಾಗ್ರಾಹಕ ನಾರಾಯಣ ಎಂ. ಜೋಷಿ ಅವರ ಛಾಯಾಚಿತ್ರಗಳ ಪ್ರದರ್ಶನ ಹಾಗೂ ಸನ್ಮಾನ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ಛಾಯಾಗ್ರಹಣವು ಕ್ರಮೇಣ ಅದ್ಭುತವಾಗಿ ಬೆಳೆದು ಬಂದಿದೆ. ಕಪ್ಪು-ಬಿಳುಪು ಕಾಲದಿಂದಲೂ ಛಾಯಾಗ್ರಹಣ ಅತ್ಯಂತ ಮಹತ್ವ ಹೊಂದಿದೆ ಎಂದರು.
ವಿಶ್ವಛಾಯಾಗ್ರಹಣ ದಿನಾಚರಣೆ ಅಂಗವಾಗಿ ಛಾಯಾಗ್ರಾಹಕ ನಾರಾಯಣ.ಎಂ.ಜೋಶಿಯವರನ್ನು ಈ ಸಂದರ್ಭದಲ್ಲಿ ಸತ್ಕರಿಸಲಾಯಿತು. ಮಹಾವಿದ್ಯಾಲಯದ ಐಕ್ಯೂಎಸಿ ಸಂಯೋಜಕ ಗೋವಿಂದ್ ಪೂಜಾರ್ ಇದ್ದರು.
ಛಾಯಾಗ್ರಾಹಕನ ಅನುಭವ ಕುರಿತು ಜೋಶಿ ವಿವರಿಸಿದರು. ಫೈನ್ ಆರ್ಟ ವಿಭಾಗದ ಮುಖ್ಯಸ್ಥ ಜಿತೇಂದ್ರ ಕೊಥಳೀಕರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ, ಛಾಯಾಗ್ರಹಣ ಅದ್ಭುತ ಕಲೆ. ರಾಜ್ಯ, ದೇಶದ ಅನೇಕ ಪ್ರತಿಭಾವಂತರು ಅಂತಾರಾಷ್ಟಿçÃಯ ಮಟ್ಟದಲ್ಲಿ ಮಿಂಚಿದ್ದಾರೆ. ಕಲ್ಯಾಣ ಕರ್ನಾಟಕದ ಛಾಯಾಗ್ರಾಹಕರು ರಾಜ್ಯ, ರಾಷ್ಟಿçÃಯ ಮಟ್ಟದಲ್ಲಿ ಮಿಂಚುವAತಾಗಲಿ ಎಂದು ಹಾರೈಸಿದರು.
ನಾಗರಾಜ ಕುಲಕರ್ಣಿ, ರಾಜಕುಮಾರ್ ಕಾಳೆ, ಎಂ.ಸAಜೀವ್, ಶರಣ ಪಟ್ಟಣಶೆಟ್ಟಿ, ಯು.ಜಿ.ಸರ್‌ದೇಶಪಾಂಡೆ, ರಮೇಶ ಜೋಷಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು, ಉನ್ಯಾಸಕರು, ಸಾರ್ವಜನಿಕರು ಪ್ರದರ್ಶನ ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net