ಛಲವಾದಿ ಸಮುದಾಯ ಬಲಪಡಿಸಲು ಶ್ರಮಿಸುವೆ

Chalavadi
Published on

ಚಿತ್ರದುರ್ಗ: ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಛಲವಾದಿ ಸಮುದಾಯ ಬಲಗೊಳಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಛಲವಾದಿ ಮಹಾಸಭಾ ನೂತನ ರಾಜ್ಯಾಧ್ಯಕ್ಷೆ ವಾಣಿ ಕೆ.ಶಿವರಾಮ್ ತಿಳಿಸಿದರು.

ಸೀಬಾರ ಸಮೀಪದ ಛಲವಾದಿ ಗುರುಪೀಠದಲ್ಲಿ ಶನಿವಾರ ನಡೆದ ಮಹಾಸಭಾ ಜಿಲ್ಲಾ ಸಮಿತಿಯ ಪದಗ್ರಹಣ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಹಾಸಭಾ ಸ್ಥಾಪಿಸಿದ ಕೆ.ಶಿವರಾಮ್ ಸಮುದಾಯದ ಏಳ್ಗೆಗಾಗಿ ತುಂಬಾ ಶ್ರಮಪಟ್ಟರು. ಬುದ್ಧ, ಬಸವ, ಅಂಬೇಡ್ಕರ್ ಹಾದಿಯಲ್ಲಿ ಸಾಗಿದರು. ಅವರ ಅಕಾಲಿಕ ಮರಣ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಬೇಸರಿಸಿದರು.

ನನ್ನಂತೆ ಸಮುದಾಯದ ಹಲವರು ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳಾಗಬೇಕೆಂಬ ಕನಸು ಶಿವರಾಮ್ ಕಂಡಿದ್ದರು. ಅದನ್ನು ನನಸಾಗಿಸಲು ಸಮಾಜದವರು ಮುಂದಾಗಬೇಕು. ಜಾಗೃತಿ ಮೂಡಿಸುವಲ್ಲಿ ನಾನೂ ಕಾರ್ಯನಿರ್ವಹಿಸುವೆ ಎಂದರು.

ಇದೇ ವೇಳೆ ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಜಿ.ಅಭಯ್ ಸೇರಿ ಇನ್ನಿತರೆ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶ್ರೀ ಬಸವನಾಗಿದೇವ ಸ್ವಾಮೀಜಿ, ಪದಾಧಿಕಾರಿಗಳಾದ ಎಚ್.ಶೇಷಪ್ಪ, ಮೈಕೋ ನಾಗರಾಜ್, ನಾಗೇಶ್, ಶಿವಪ್ಪ, ಹೇಮಂತ್‌ಕುಮಾರ್, ಗ್ರಾಪಂ ಸದಸ್ಯ ಜಾನಕಲ್ ನಾಗರಾಜ್, ಮುಖಂಡರಾದ ರಾಮಚಂದ್ರಪ್ಪ, ನರಸಿಂಹಮೂರ್ತಿ, ದೇವರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net