ಛಲವಾದಿ ಮಹಾಸಭಾದಿಂದ ಓಬವ್ವ ಜಯಂತಿ 11ಕ್ಕೆ

Chalavadi
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.42452413, 0.4899285);sceneMode: 3145728;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 39;
Published on

ಚಿತ್ರದುರ್ಗ: ಛಲವಾದಿ ಗುರುಪೀಠ ಮತ್ತು ಮಹಾಸಭಾ, ಒನಕೆ ಓಬವ್ವ ಸಂರಕ್ಷಣಾ ಸಮಿತಿ, ಸರ್ವ ಸಮಾಜದ ಸಹಯೋಗದೊಂದಿಗೆ ಐತಿಹಾಸಿಕ ಕೋಟೆ ಮುಂಭಾಗ ನ. 11ರ ಬೆಳಗ್ಗೆ 9ಕ್ಕೆ ಒನಕೆ ಓಬವ್ವ ಜಯಂತ್ಯುತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಮಹಾಸಭಾ ಅಧ್ಯಕ್ಷ ಶೇಷಣ್ಣ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಗ್ಗೆ 7.30ಕ್ಕೆ ಮದಕರಿನಾಯಕ ವೃತ್ತದಿಂದ 51 ಜಾನಪದ ಕಲಾತಂಡ, ಡಿಜೆಯೊಂದಿಗೆ ಓಬವ್ವ ಭಾವಚಿತ್ರ ಮೆರವಣಿಗೆ ನಡೆಯಲಿದ್ದು, ಕೋಟೆವರೆಗೂ ಸಾಗಲಿದೆ ಎಂದರು.

ಬಸವನಾಗಿದೇವ ಶ್ರೀ, ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀ, ಬಸವಲಿಂಗ ಶ್ರೀ, ಸರ್ದಾರ್ ಸೇವಾಲಾಲ್ ಶ್ರೀ ಸಾನ್ನಿಧ್ಯ ವಹಿಸುವರು. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಉದ್ಘಾಟಿಸುವರು. ಓಬವ್ವ ಸ್ಮಾರಕಕ್ಕೆ ದೀಪ ಹಚ್ಚುವ, ಜೋಳಿಗೆ ಕಾರ್ಯಕ್ರಮಕ್ಕೆ ಎಂಎಲ್ಸಿ ಸಿ.ಟಿ.ರವಿ ಚಾಲನೆ ನೀಡುವರು. ಭಾವಚಿತ್ರಕ್ಕೆ ಸಂಸದ ಗೋವಿಂದ ಎಂ.ಕಾರಜೋಳ ಪುಷ್ಪನಮನ ಸಲ್ಲಿಸುವರು. ಎಂಎಲ್ಸಿ ಕೆ.ಎಸ್.ನವೀನ್ ಶೋಭಾಯಾತ್ರೆಗೆ ಚಾಲನೆ ನೀಡುವರು. ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.

ಸಂರಕ್ಷಣಾ ಸಮಿತಿ ಅಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿ, ಜಯಂತಿ ಮುನ್ನ ದಿನ 10ರಂದು ಸಂಜೆ 6ಕ್ಕೆ ನೂರಾರು ಮಂದಿ ಓಬವ್ವ ಮಾಲೆ ಧರಿಸಿ ಡಿ.ಎಸ್.ಹಳ್ಳಿಯಿಂದ ಚಿತ್ರದುರ್ಗದ ಉಚ್ಚಂಗಿಯಲ್ಲಮ್ಮ ದೇವಿ ದೇಗುಲದವರೆಗೂ ಪಾದಯಾತ್ರೆ ಮೂಲಕ ಆಗಮಿಸಲಿದ್ದಾರೆ. ರಾತ್ರಿ ದೇಗುಲದಲ್ಲಿ ತಂಗಿದ್ದು, 11ರಂದು ಮಡಿಪೂಜೆ ಮೂಲಕ ಸಮಾಧಿ ಸ್ಥಳಕ್ಕೆ ಹೋಗಲಾಗುವುದು. ಎಲ್ಲ ಕಾರ್ಯಕ್ರಮದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಫಲಗೊಳಿಸಬೇಕು ಎಂದು ಮನವಿ ಮಾಡಿದರು.

ಮುಖಂಡರಾದ ನೆಲ್ಲಿಕಟ್ಟೆ ನಾಗರಾಜು, ನಟರಾಜು, ಜಗದೀಶ್, ರವಿ, ಹನುಮಂತಪ್ಪ, ನರಸಿಂಹಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net