ಛಲ ಇದ್ದರೆ ಸಾಧನೆ ಸಾಧ್ಯ

BDR3
ಔರಾದ್ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಕವಿಗೋಷ್ಠಿ ಮತ್ತು ವಿಚಾರ ಸಂಕಿರಣವನ್ನು ಪಿಎಸ್‌ಐ ವಾಸೀಮ್ ಪಟೇಲ್ ಉದ್ಘಾಟಿಸಿದರು. ಧೂಳಪ್ಪ ಮಳನೂರೆ, ಶಿವಾನಂದ ಮೊಕ್ತೆದಾರ್, ರತ್ನ ದೀಪ ಇತರಿದ್ದರು.
Published on

ಔರಾದ್: ಸಾಧನೆ ಮಾಡಲು ಮಕ್ಕಳಿಗೆ ನೂರಾರು ಅವಕಾಶಗಳಿವೆ, ಸಾವಿರಾರು ದಾರಿಗಳಿವೆ. ಸಾಧಿಸುವ ಛಲ ಇದ್ದರೆ ಸಾಧಕನಾಗಲು ಸಾಧ್ಯ ಎಂದು ಪಿಎಸ್‌ಐ ವಾಸೀಮ್ ಪಟೇಲ್ ಹೇಳಿದರು.

ಪಟ್ಟಣದ ಆದರ್ಶ ವಿದ್ಯಾಲಯದಲ್ಲಿ ಶನಿವಾರ ಸುಭಾಷಚಂದ್ರ ಬೋಸ್ ಯುವಕ ಸಂಘದಿAದ ಆಯೋಜಿಸಿದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಕವಿಗೋಷ್ಠಿ ಮತ್ತು ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಪುಸ್ತಕ ಪ್ರೇಮಿಗಳಾಗಿ, ಓದುವ ಹವ್ಯಾಸ ಬೆಳಸಿಕೊಳ್ಳಬೇಕು. ಬದುಕಿನಲ್ಲಿ ಸಾಧನೆಯ ಹಂಬಲ ಹೊಂದಿರಬೇಕು. ಜತೆಗೆ ನಿರಂತರವಾಗಿ ಅಧ್ಯಯನಶೀಲತೆ ಅಳವಡಿಸಿಕೊಂಡಾಗ ಉನ್ನತ ಹುದ್ದೆಗಳನ್ನು ಪಡೆಯಬಹುದು ಎಂದರು.

ವಿದ್ಯಾರ್ಥಿಗಳು ಉತ್ತಮ ರೀತಿಯಿಂದ ಶಿP್ಷÀಣ ಪಡೆದು, ಸಾಧನೆ ಮಾಡಿ ಪಾಲಕರು ಮತ್ತು ಶಿP್ಷÀಕರಿಗೆ ಕೀರ್ತಿ ತರಬೇಕು. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುವಾಗ ಒಂದೇ ಹುದ್ದೆಗೆ ಸೀಮಿತವಾಗಿ ಓದಬೇಡಿ. ಎಲ್ಲ ಹುದ್ದೆಗಳನ್ನು ಪಡೆಯುವೆ ಎಂಬ ಸಂಕಲ್ಪ ಮಾಡಿ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಬೇಕು ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯP್ಷÀ ಶಿವಾನಂದ ಮೊಕ್ತೆದಾರ್ ಮಾತನಾಡಿ, ವಚನಗಳ ಮೂಲಕ ಸಮಾನತೆ ಸಾರಿದ ಬಸವಣ್ಣನವರ ವಿಚಾರಗಳು ಸಾರ್ವಕಾಲಿಕ ಪ್ರಸ್ತುತ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಸAಘದ ತಾಲೂಕಾಧ್ಯP್ಷÀ ರತ್ನಾದೀಪ ಕಸ್ತೂರೆ ಮಾತನಾಡಿದರು. ಬಿಇಒ ಧೂಳಪ್ಪ ಮಳೆನೂರೆ ಅಧ್ಯP್ಷÀತೆ ವಹಿಸಿದ್ದರು. ಎನ್‌ಪಿಎಸ್ ನೌಕರರ ಸಂಘದ ತಾಲೂಕಾಧ್ಯP್ಷÀ ಮಹಾದೇವ ಚಿಟಗೀರೆ, ರೋಹಿತ್ ಕಾಂಬ್ಳೆ, ಧಮ್ಮದೀಪ ಗೋಕಲೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net