ಛತ್ರಪತಿ ಶಿವಾಜಿ ತತ್ವಾದರ್ಶ ನಮ್ಮೆಲ್ಲರಿಗೂ ಮಾದರಿ

21BLK2
ಭಾಲ್ಕಿಯ ಭಾಲ್ಕೇಶ್ವರ ಮಂದಿರದ ಅವರಣದಲ್ಲಿ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಮಹೋತ್ಸವದಲ್ಲಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿದರು. ಸಂಸದ ಸಾಗರ ಈಶ್ವರ ಖಂಡ್ರೆ, ನಾಮದೇವರಾವ ಪವಾರ್, ವೈಜಿನಾಥ ತಗಾರೆ, ಶಶಿಕಲಾ ಸಿಂಧನಕೆರೆ, ವಿಜಯಕುಮಾರ ರಾಜಭವನ ಇತರರಿದ್ದರು.
Published on

ಭಾಲ್ಕಿ: ಛತ್ರಪತಿ ಶಿವಾಜಿ ಮಹಾರಾಜರ ತತ್ವಾದರ್ಶಗಳು ನಮ್ಮೆಲ್ಲರಿಗೂ ಮಾದರಿಯಾಗಿವೆ. ಅವರ ತತ್ವಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಹೇಳಿದರು.

ಪಟ್ಟಣದ ಭಾಲ್ಕೇಶ್ವರ ಮಂದಿರದ ಆವರಣದಲ್ಲಿ, ಸಾರ್ವಜನಿಕ ಶಿಜಯಂತಿ ಉತ್ಸವ ಸಮಿತಿಯಿಂದ ಬುಧವಾರ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ೩೯೫ನೇ ಜಯಂತಿ ಮಹೋತ್ಸವದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಮಹಾಪುರುಷರ ಆದರ್ಶ, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವಂತ ಕ್ಷಮತೆ ನಮ್ಮಲ್ಲಿರಬೇಕು ಎಂದರು.

ಶಿವಾಜಿ ಮಹಾರಾಜರ ಜಯಂತಿ ಸಂದರ್ಭದಲ್ಲಿ ನಾವು ನೋಡುವ ಒಂದು ವಿಷಯ ತಾಯಿ ಮಗನ ಸಂಬಂಧ, ಮಾತೆ ಜೀಜಾ ರವರು ಅವರಿಗೆ ಬೆಳೆಸಿದ ರೀತಿ ನಮಗೆ ಕಂಡು ಬರುತ್ತದೆ. ಅದೇ ರೀತಿ ನಮ್ಮ ತಾಯಂದಿರೂ ತಮ್ಮ ಮಕ್ಕಳಿಗೆ ಶಿವಾಜಿ ಮಹಾರಾಜರಂತೆ ಬೆಳೆಸಬೇಕು. ಶಿವಾಜಿ ಮಹಾರಾಜರು ತಮ್ಮ ಬುದ್ದಿ ಶಕ್ತಿಯಿಂದ ಕಾರ್ಯನಿರ್ವಹಿಸಿ ಜಯ ಕಂಡಿದ್ದಾರೆ. ದೈಹಿಕ ಶೈಕ್ತಿಗಿಂತ, ಬುದ್ಧಿಶಕ್ತಿ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಶಿವಾಜಿ ಮಹಾರಾಜರು ತಮ್ಮ ಬುದ್ದಿ ಶಕ್ತಿಯಿಂದ ರಾಜ್ಯವನ್ನಾಳಿದ್ದು ಕಂಡು ಬರುತ್ತದೆ. ಶಿವಾಜಿ ಮಹಾರಾಜರು ದೇಶಪ್ರೇಮ ಮೆರೆದು, ಸ್ತ್ರೀ ಶಕ್ತಿಗೆ ಗೌರವಿಸುವ ಕಾರ್ಯ ನಮ್ಮೆಲ್ಲರಿಗೂ ಮೆಚ್ಚುಗೆಯಾಗುತ್ತದೆ ಎಂದು ಹೇಳಿದರು.

ಸಂಸದ ಸಾಗರ ಈಶ್ವರ ಖಂಡ್ರೆ ಮಾತನಾಡಿ, ಶಿವಾಜಿ ಮಹಾರಾಜರ ರಾಷ್ಟ್ರಪ್ರೇಮ, ಧರ್ಮಪ್ರೇಮ ನಮ್ಮೆಲ್ಲರಿಗೂ ಮಾದರಿಯಾಗಿದೆ. ಶಿವಾಜಿಯವರ ಸ್ಪೂರ್ತಿಯಿಂದ ನಾವೆಲ್ಲರೂ ನ್ಯಾಯಪರವಾಗಿ ಕಾರ್ಯಮಾಡುವ ಕ್ಷಮತೆ ಬೆಳೆದಿದೆ. ನಮ್ಮ ಯುಕವರು ಶಿವಾಜಿ ಮಹಾರಾಜರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ, ಅವರ ಜಯಂತಿ ಆಚರಣೆಗೆ ಅರ್ಥ ಬರುತ್ತದೆ ಎಂದು ಹೇಳಿದರು.

ಸಮಾಜದ ಹಿರಿಯ ನಾಮದೇವರಾವ ಪವಾರ್ ಅಧ್ಯಕ್ಷತೆ ವಹಿಸಿದ್ದರು. ಉತ್ಸವ ಸಮಿತಿಯ ಅಧ್ಯಕ್ಷ ವೈಜಿನಾಥ ತಗಾರೆ ಪ್ರಾಸ್ತಾವಿಕ ಮಾತನಾಡಿದರು.

ಮೋಹನಜಿ ಮಹಾರಾಜ ಸೇಲಾರ, ಪುರಸಭೆ ಅಧ್ಯಕ್ಷೆ ಶಶಿಕಲಾ ಸಿಂಧನಕೆರೆ, ಉಪಾಧ್ಯಕ್ಷ ವಿಜಯಕುಮಾರ ರಾಜಭವನ, ಕಾಂಗ್ರೆಸ್ ತಾಲೂಕು ಅಧ್ಯಕ್ಷ ಹಣಮಂತರಾವ ಚವ್ಹಾಣ್, ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ವಂಕೆ, ಎಸ್.ಬಂಗಾರೆ, ಮಂಗಲಾ ಸೋನಬಾ, ಪ್ರದೀಪ ಬಿರಾದಾರ, ಮನ್ಮಥ ಸ್ವಾಮಿ, ಕಿಶನರಾವ ಜಾಧವ, ಶಿವಕುಮಾರ ಘಂಟೆ, ಬಸವರಾಜ ಬಾಳುರೆ ಇದ್ದರು. ವೈಜಿನಾಥ ಬಾಜಿರಾವ ತಗಾರೆ ಸ್ವಾಗತಿಸಿ ನಿರೂಪಣೆ ಮಾಡಿದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೀರಾಚಂದ ವಾಘಮಾರೆ ಅವರನ್ನು ವಿಶೇಷ ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net