ಚೌಡೇಶ್ವರಿ ದೇವಿ ಕಾರ್ತಿಕೋತ್ಸವ 22ಕ್ಕೆ

Chowdeshwari Devi
Published on

ಚಿತ್ರದುರ್ಗ: ಬುರುಜನಹಟ್ಟಿಯ ಮಲೆನಾಡ ಚೌಡೇಶ್ವರಿ ದೇವಿಯ ಗಂಗಾ ಪೂಜೆ, ಕಾರ್ತಿಕೋತ್ಸವವನ್ನು ಡಿ. 21ರಿಂದ 23ರವರೆಗೆ ಹಮ್ಮಿಕೊಳ್ಳಲಾಗಿದೆ.

21ರ ಬೆಳಗ್ಗೆ 11ಕ್ಕೆ ಕೋಟೆಯ ಕರುವರ್ತಿ ಈಶ್ವರ ಸನ್ನಿಧಿ ಮುಂಭಾಗದ ಪುಷ್ಕರಣಿಯಲ್ಲಿ ಗಂಗಾ, ಕುಂಭ ಪೂಜೆ ನೆರವೇರಲಿದೆ. ನಂತರ ಮಹಾಮಂಗಳಾರತಿ, ಭಕ್ತರಿಗೆ ಪ್ರಸಾದ ವಿತರಣೆ, ಸಂಜೆ 4ಕ್ಕೆ ಪುಷ್ಪಾಲಂಕಾರ, ಮಂಗಳ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ದೇಗುಲಕ್ಕೆ ದೇವಿ ಮೂರ್ತಿ ಕರೆತರಲಾಗುವುದು.

22ರ ಬೆಳಗ್ಗೆ 8.30ಕ್ಕೆ ದೇವಿಗೆ ಪಂಚಾಮೃತ ಅಭಿಷೇಕ, ಅಲಂಕಾರ ಸೇವೆ, ಸಂಜೆ 6.30ಕ್ಕೆ ಮಹಾಮಂಗಳಾರತಿ, ದೇಗುಲ ಆವರಣದಲ್ಲಿ ಕಾರ್ತಿಕೋತ್ಸವ, ನಂತರ ಅನ್ನ ಸಂತರ್ಪಣೆ ಆಯೋಜಿಸಲಾಗಿದೆ.

23ರ ಬೆಳಗ್ಗೆ 8ಕ್ಕೆ ಬುರುಜನಹಟ್ಟಿ ಸೇರಿ ನಗರದ ವಿವಿಧ ಬಡಾವಣೆಗಳ ಭಕ್ತರ ಮನೆಗಳಲ್ಲಿ ದೇವಿಯ ಪೂಜೆ ಸ್ವೀಕಾರ ಜರುಗಲಿದೆ. ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮಲೆನಾಡ ಚೌಡೇಶ್ವರಿ ದೇವಸ್ಥಾನ ಸೇವಾ ಟ್ರಸ್ಟ್ ಕೋರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net