ಚೌಡೇಶ್ವರಿ ದೇವಸ್ಥಾನದಲ್ಲಿ ಸತ್ಯನಾರಾಯಣ ಪೂಜೆ

14Kush02
Published on


ಕೊಡಗು : ಕುಶಾಲನಗರ ಚೌಡೇಶ್ವರಿ ದೇವಾಲಯ ಸಮಿತಿಯ ವತಿಯಿಂದ ದೇವಾಲಯ ಆವರಣದಲ್ಲಿ ಮಂಗಳವಾರ ಸತ್ಯನಾರಾಯಣ ಪೂಜೆ, ಕಳಸಾಭಿಷೇಕ ಸೇರಿದಂತೆ ವಿವಿಧ ಪೂಜಾ-ಕೈಂಕರ್ಯಗಳು ಜರುಗಿದವು.


ಅರ್ಚಕ ಪರಮೇಶ್ವರ್‌ಭಟ್ ನೇತೃತ್ವದ ತಂಡ ಗಣಪತಿ ಹೋಮ, ನವಕಳಸ ಅಭಿಷೇಕ, ಪಂಚಾಮೃತ ಅಭಿಷೇಕದ ಜತೆಯಲ್ಲಿ ಚೌಡೇಶ್ವರಿ ಅಮ್ಮನವರಿಗೆ ವಿಶೇಷ ಅಭಿಷೇಕ, ಪೂಜಾ ವಿಧಿ-ವಿಧಾನ ನೆರವೇರಿಸಿತು.


ಚೌಡೇಶ್ವರಿ ದೇವಾಲಯ ಸಮಿತಿ ಅಧ್ಯಕ್ಷ ವಿಜಯೇಂದ್ರ, ಉಪಾಧ್ಯಕ್ಷ ಸೋಮಶೇಖರ್, ಮಹೇಶ್, ಕಾರ್ಯದರ್ಶಿ ಡಿ.ವಿ.ರಾಜೇಶ್, ಸಮಿತಿಯ ಪ್ರಮುಖರಾದ, ಡಿ.ಎಸ್.ಕೋದಂಡರಾಮು, ಡಿ.ಎಸ್.ಜಗದೀಶ್, ರಾಕಿ, ಡಿ.ಸಿ.ಜಗದೀಶ್, ಪುರಸಭೆಯ ಸದಸ್ಯ ತಿಮ್ಮಪ್ಪ, ಖಜಾಂಚಿ ಕೃಷ್ಣ, ಮಹಿಳಾ ಘಟಕದ ಅಧ್ಯಕ್ಷೆ ಸುಲೋಚನಾ, ಕಾರ್ಯದರ್ಶಿ ನಂದಿನಿ, ಸಮಿತಿಯ ಸದಸ್ಯರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಕುಲಬಾಂಧವರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಹಾಮಂಗಳಾರತಿ ನಂತರ ಅನ್ನಸಂತರ್ಪಣೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net