

ಯಾದಗಿರಿ: ನಾಡಿನ ಒಳಿತಿಗಾಗಿ ಶರಣರು, ದಾರ್ಶನಿಕರು ಹಾಗೂ ಸೂಫಿ ಸಂತರು ತಮ್ಮ ಹಿತ ವಚನಗಳ ಮೂಲಕ ದೊಡ್ಡ ಕ್ರಾಂತಿಯನ್ನುಂಟು ಮಾಡಿದ್ದಾರೆ ಎಂದು ಗುರುಮಠಕಲ್ ಖಾಸಾ ಮಠದ ಶ್ರೀ ಶಾಂತವೀರ ಮುರಘರಾಜೇಂದ್ರ ಸ್ವಾಮಿಗಳು ನುಡಿದರು.
ಗುರುಮಠಕಲ್ ತಾಲೂಕಿನ ಇಮ್ಲಾಪುರ ಗ್ರಾಮದಲ್ಲಿ ಗುರುವಾರ ನಿಜಶರಣ ಅಂಬಿಗರ ಚೌಡಯ್ಯನವರ ಮೂತರ್ಿಯನ್ನು ಅನಾವರಣಗೊಳಿಸಿ ಹಿತೋಪದೇಶ ನೀಡಿ, ಚೌಡಯ್ಯನವರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಪಾಲಿಸಬೇಕು, ಅವರ ಕಠೋರ ವಚನಗಳ ಸಾರ ಸರಿಯಾದ ಜೀವನ ನಡೆಸಬೇಕೆಂಬುದೇ ಆಗಿದೆ. ನೇರ,ದಿಟ್ಟ ನಿಲುವಿನ ವಚನಗಳ ಮೂಲಕ ಸಮಾಜದಲ್ಲಿನ ದುಶ್ಚ್ಚಟಗಳನ್ನು ಅಂಕು-ಡೋಂಕುಗಳನ್ನು ತಿದ್ದಲೆಂದೇ ಅವರು ಕಟು ಮಾತುಗಳಲ್ಲಿ ವಚನ ಬರೆದರು ಎಂದು ಹೇಳಿದರು.
ಟೋಕರಿ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದಶರ್ಿ ಉಮೇಶ ಕೆ. ಮುದ್ನಾಳ, ಇಮ್ಲಾಪುರದಲ್ಲಿ ಹಾವೇರಿಯ ಮಾದರಿಯಲ್ಲಿ ಗೋಪುರ ನಿಮರ್ಾಣ ಮಾಡಿ ಚೌಡಯ್ಯನವರ ಮೂತರ್ಿ ಸ್ಥಾಪನೆ ಮಾಡಿರುವುದು ಶ್ಲಾಘನೀಯ. ಗ್ರಾಮದ ಹಿರಿಯರು,ಯುವಕರು ಸೇರಿ ಇಂಥ ಮಾದರಿ ಕೆಲಸ ಮಾಡಿದ್ದಾರೆ. ಎಲ್ಲರೂ ಒಗ್ಗೂಡಿ ಸಾಮರಸ್ಯದಿಂದ ಜೀವನ ಸಾಗಿಸಬೇಕು ಎಂದು ಸಲಹೆ ನೀಡಿದರು.
ಅಂಬಿಗರ ಚೌಡಯ್ಯನವರ ಆಶಯದಂತೆ ಬದುಕಲು ನಮ್ಮ ಸಮಾಜದವರು ಮುಂದಾಗಬೇಕು. ಮೂಢ ನಂಬಿಕೆಗಳೆ ಸಮಾಜದ ಉನ್ನತಿಗೆ ಅಡ್ಡಗೋಡೆಗಳಾಗಿವೆ. ಇವುಗಳನ್ನು ಕೆಡವಬೇಕೆಂದು ಹೇಳಿದ ಅವರು, ಶಿಕ್ಷಣ, ಸಂಘಟನೆ, ಹೋರಾಟಗಳ ಮೂಲಕ ಸ್ವಾಭಿಮಾನದ ಜೀವನ ಕಲ್ಪಿಸಿಕೊಳ್ಳಬೇಕು ಎಂದರು.