ಚೌಕಟ್ಟು ಬಿಟ್ಟು ವಚನ ಚರ್ಚೆ ಮಾಡಲಿ

0308KLB06
Published on

ಕಲಬುರಗಿ: ವಚನಗಳ ಚೌಕಟ್ಟು ವಿಶಾಲವಾಗಿದೆ, ಸಾಧಕರ ವಿಚಾರಗಳನ್ನು ಚೌಕಟ್ಟಿನಲ್ಲಿ ಸಿಲುಕಿಸುವ ಪ್ರಯತ್ನ ನಡೆದಿದೆ. ವಿಚಾರಗಳನ್ನು ಒಪ್ಪದೇ ಇರಲು ಸ್ವಾತಂತ್ರÈವಿದೆ. ಆದರೆ ಒಳ್ಳೆ ಚರ್ಚೆ ನಡೆಯಬೇಕು, ಸರ್ವಾಧಿಕಾರವಲ್ಲ. ಸರಿಯಲ್ಲ ಎಂದು ಹೇಳುವವರು ಚೌಕಟ್ಟಿನಿಂದ ಹೊರಗೆ ಬಂದು ಹೇಳಲಿ ಎಂದು ಬಿಜೆಪಿ ರಾಷ್ಟಿçÃಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ ಹೇಳಿದರು.
ಪ್ರಜ್ಞಾ ಪ್ರವಾಹ, ಅಖಿಲ ಭಾರತ ಸಾಹಿತ್ಯ ಪರಿಷತ್ ಮತ್ತು ಶರಣಬಸವ ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಗರದ ಬಸವರಾಜಪ್ಪ ಅಪ್ಪ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ `ವಚನ ದರ್ಶನ' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ವಿಚಾರಗಳ ಭಿನ್ನತೆ ಇರಬಹುದು. ಆದರೆ ಇತರ ಹಳಿಯಬೇಡ ಎಂದು ಶರಣರು ಹೇಳಿದ್ದಾರೆ ಎಂದರು.
ಸಾಲ ಮಾಡಿ ತುಪ್ಪ ತಿನ್ನು ಎಂದAತ ಚಾರ್ವಾಕ ಋಷಿಗಳಂತವರು ನಮ್ಮಲ್ಲಿದ್ದಾರೆ. ಭಾರತದಂಥ ದೊಡ್ಡ ಸಮಾಜದಲ್ಲಿ ಎಲ್ಲರೂ ಇರುತ್ತಾರೆ. ವಿರೋಧ ಸಹಜ, ಆದರೆ ಚರ್ಚೆ ನಿಲ್ಲಿಸಬಾರದು. ವಿವಾದಕ್ಕೆ ಅಂಜಿ ಚರ್ಚೆ ನಿಲ್ಲಬಾರದು. ಅನುಭವ ಮಂಟಪದಲ್ಲಿ ಹಿಂದು ಸಮಾಜದ ಎಲ್ಲ ಜಾತಿಗಳವರು ಇದ್ದರು. ಭಕ್ತಿ, ಕಾಯಕ, ದಾಸೋಹದ ಅನುಭವದಿಂದ ಶರಣರು ಹೊರಹೊಮ್ಮಿದರು ಎಂದರು.
ಗದಗ ಬ್ರಹನ್ಮಠದ ಜಗದ್ಗುರು ಶ್ರೀ ಸದಾಶಿವಾನಂದ ಸ್ವಾಮೀಜಿ ಮಾತನಾಡಿ, ವಚನಗಳಲ್ಲಿ ವೈಚಾರಿಕ, ಬಂಡಾಯ ಪದಗಳು ಇಲ್ಲ. ಅಂಗೈಯಲ್ಲಿನ ಲಿಂಗ ಅರಿವಿನ ಕುರುಹು ಆಗಿದೆ. ಬೇರೆ, ಬೇರೆ ಆರಾಧನೆ ಪದ್ಧಗಳಿವೆ. ನಮಗೆ ಬಸವಣ್ಣ ಎದೆ ಮೇಲೆ ಲಿಂಗ ನೀಡಿದ್ದಾರೆ. ಸರಳವಾಗಿ ಪೂಜೆ, ಅರ್ಚನೆ ಮಾಡಬಹುದು. ಆದರೆ ಪ್ರಸ್ತುತ ಇಷ್ಠಲಿಂಗದ ವ್ಯಾಕ್ಯಾನ ಬದಲಾಗಿವೆ. ಅದ್ಭುತವಾದ ಸಾಹಿತ್ಯ ಶರಧಿ ವಚನ ಸಾಹಿತ್ಯ. ಅದನ್ನು ಹೇಗಿದೆಯೋ ಹಾಗೆಯೇ ಓದಬೇಕು ಎಂದು ಹೇಳಿದರು.
ಬಸವರಾಜ ಡೊಣ್ಣೂರ ಪ್ರಾಸ್ತಾವಿಕ ಮಾತನಾಡಿದರು. ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿದರು. ಪ್ರಜ್ಞಾ ಪ್ರವಾಹ ಜಿಲ್ಲಾ ಸಂಯೋಜಕ ಸತ್ಯಜೀತ ಕಿತ್ತೂರ, ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಸಂಗಮೇಶ ಹಿರೇಮಠ, ಪ್ರಾಂತ ಕಾರ್ಯದರ್ಶಿ ಶಿವಶರಣ ಕೊಟ್ರಾಳ, ಪ್ರಮುಖರಾದ ವಿಜಯ ಮಹಾಂತೇಶ, ಅನೀಲ ತಂಬಾಕೆ, ಶಿವರಾಜ ಸಂಗೋಳಗಿ, ಸತೀಶ ಮಾಹೂರ, ಪ್ರಶಾಂತ ಗುಡ್ಡಾ, ದತ್ತಾತ್ರೇಯ ಪಾಟೀಲ್ ರೇವೂರ, ಅರವಿಂದ ನವಲಿ, ಭರತ್ ಖಮಿತಕರ, ಬಸವರಾಜ ಬೆಣ್ಣೂರ, ಉಮೇಶ ಪಾಟೀಲ್, ಮಹಾದೇವ ಬೆಳಮಗಿ, ಸೂರ್ಯಕಾಂತ ಡೋಣಿ, ಮಹಾಂತೇಶ ಬಿರಾದಾರ, ನಾಗೇಂದ್ರ ಕಬಾಡೆ, ಮುಂಜುನಾಥ ಕಳಸಕರ, ಬಸವರಾಜ ಮುನ್ನೋಳ್ಳಿ, ಸದಾನಂದ ಪೆರ್ಲ, ರಮೇಶ ತಿಪನೂರ, ಹರ್ಷಾನಂದ ಗುತ್ತೇದಾರ, ಶಿವಕಾಂತ ಮಹಾಜನ, ಸಿz್ದÁಜಿ ಪಾಟೀಲ್, ಮುರಳಿ ಪೂಜಾರ, ಸುಶಾಂತ ದೇಶಮುಖ, ಸಂತೋಷ ಹಾದಿಮನಿ, ಶ್ರೀನಿವಾಸ ದೇಸಾಯಿ, ರಾಮು ರೆಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net