ಚೈತ್ರಾಗೆ ಸರ್ಕಾರಿ ನೌಕರಿ ಕೊಡಿಸಲು ಯತ್ನ

Published on

ಚಾಮರಾಜನಗರ: ಖೋ-ಖೋ ವಿಶ್ವಕಪ್‌ನಲ್ಲಿ ಭಾಗವಹಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರ್ತಿ ಬಿ.ಚೈತ್ರಾಗೆ ಸರ್ಕಾರಿ ಉದ್ಯೋಗ ಕೊಡಿಸಲು ಪ್ರಯತ್ನ ಮಾಡುವುದಾಗಿ ಸಂಸದ ಸುನಿಲ್ ಬೋಸ್ ಹೇಳಿದರು.

ಚಾಮರಾಜನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಿ.ನರಸೀಪುರದಲ್ಲಿ ಚೈತ್ರಾ ಭೇಟಿ ಮಾಡಿ ಸನ್ಮಾನ ಮಾಡಿದೆ. ಈ ವೇಳೆ ಗ್ರಾಮಸ್ಥರು ಹೆಚ್ಚಿನ ಬಹುಮಾನ ಕೊಡಿಸಿ ಅಂತಾ ಬೇಡಿಕೆಯಿಟ್ಟರು. ಚೈತ್ರಾ ತನಗೆ ಸರ್ಕಾರಿ ಕೆಲಸ ಕೊಡಿಸಿ ಅಂತಾ ಕೇಳಿಕೊಂಡಿದ್ದು, ನಾನು ನಮ್ಮ ತಂದೆಯವರ ಬಳಿ ಚೈತ್ರಾಗೆ ಸರ್ಕಾರಿ ಕೆಲಸ ಕೊಡಿಸುವ ಬಗ್ಗೆ ಮಾತನಾಡುತ್ತೇನೆ. ಸರ್ಕಾರಿ ಉದ್ಯೋಗ ಕೊಡಿಸಲು ಪ್ರಯತ್ನ ಮಾಡುತ್ತೇನೆ. ಸಿಎಂ ಭೇಟಿ ಮಾಡಿ ಬಹುಮಾನ ಮೊತ್ತ ಹೆಚ್ಚು ಕೊಡಲೂ ಕೂಡ ಮನವಿ ಮಾಡುತ್ತೇನೆ ಎಂದರು. ಸಿಎಂ ಕುರ್ಚಿಯಲ್ಲಿ ಸಿದ್ದರಾಮಯ್ಯ ಕುಳಿತಿದ್ದು, ಅವರೇ 5 ವರ್ಷ ಮುಂದುವರಿಯುತ್ತಾರೆ. ಶಾಸಕರ ಬೆಂಬಲ, ಹೈ ಕಮಾಂಡ್ ಬೆಂಬಲ ಇರುವ ತನಕ ಅವರೇ ಮುಖ್ಯಮಂತ್ರಿ, 2.5 ವರ್ಷ ಎಂಬ ಅಧಿಕಾರ ಹಂಚಿಕೆ ಎಂಬ ಒಪ್ಪಂದ ಆದಂತೆ ಕಾಣುತ್ತಿಲ್ಲ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net